ಮಹಿಳೆಯರು ಕೀಳರಿಮೆ ಬಿಟ್ಟರೆ ಸಾಧಿಸಬಲ್ಲರು : ಡಾ. ಚಂದ್ರಿಕಾ

ಮಹಾಮನೆಯಲ್ಲಿ ಮಹಿಳಾ ದಿನಾಚರಣೆ; ಶರಣರ ವೇಷಭೂಷಣ ಪ್ರದರ್ಶನ

ಚಾಮರಾಜನಗರ:

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೀಳರಿಮೆ ಬಿಟ್ಟು ಮಹಿಳೆಯರು ಮುನ್ನುಗ್ಗಿದರೆ ಯಾವುದೂ ಅಸಾಧ್ಯವಲ್ಲ. ನಮ್ಮಲ್ಲಿ ಅನೇಕ ಮಹಿಳೆಯರು ಅದನ್ನು ಸಾಬೀತುಪಡಿಸಿದ್ದಾರೆ ಎಂದು ಜೆಎಸ್ಸೆಸ್ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಚಂದ್ರಿಕಾ ಅಭಿಪ್ರಾಯಪಟ್ಟರು.

ಅವರು ನಗರದ ಮಹಾಮನೆ ಸಭಾಂಗಣದಲ್ಲಿ ಕದಳಿ ಮಹಿಳಾ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ವೀರಶೈವ ಲಿಂಗಾಯತ ನೌಕರರ ಸಂಘದ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ, ದತ್ತಿ ಉಪನ್ಯಾಸ ಹಾಗೂ ಶರಣರ ವೇಷ ಭೂಷಣ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಇಂದು ಮಹಿಳೆಯರು ಎಲ್ಲಾ ರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಯಾವುದೇ ಕ್ಷೇತ್ರವೇ ಇರಲಿ, ಶ್ರದ್ದೆಯಿಂದ ಕೆಲಸ ಮಾಡಿದರೆ ಯಶಸ್ಸು ತಾನಾಗೇ ಒಲಿಯಲಿದೆ. ಇದಕ್ಕೆ ತಂದೆ-ತಾಯಿ ಕುಟುಂಬದ ಸಹಕಾರವು ಮುಖ್ಯವಾಗುತ್ತದೆ “ಎಂದರು. 12 ನೇ ಶತಮಾನದಲ್ಲಿಯೇ  ಬಸವಾದಿ ಶರಣರು ಸ್ತ್ರೀ ಸಮಾನತೆ ಸಾರಿದರು. ಆದರೆ ಇಂದಿಗೂ ಅದು ನಿರೀಕ್ಷಿತ ಪ್ರಮಾಣದಲ್ಲಿ ಈಡೇರಿಲ್ಲ “ಎಂದು ಅಭಿಪ್ರಾಯ ಪಟ್ಟರು.

ನಾಗರೀಕತೆ ಮುಂದುವರಿದರೂ ಸಮಾಜದಲ್ಲಿ ತಾರತಮ್ಯ ನಿವಾರಣೆಯಾಗಿಲ್ಲ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟುಕುತ್ತಿಲ್ಲ. ಪೋಷಕರು ಮಕ್ಕಳಲ್ಲಿ ತಾರತಮ್ಯ ಮಾಡಬಾರದು. ಹೆಣ್ಣು ಎಂಬ ಕಾರಣಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಬಾರದು ಎಂದು ಕಿವಿಮಾತು ಹೇಳಿದರು.

ಹೆಣ್ಣು ಭ್ರೂಣ ಹತ್ಯಗೆ ತಡೆ ಅಗತ್ಯ ಬಸವರಾಜೇಂದ್ರ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಶ್ವೇತಾ ಶಶಿಧರ್ ವಿಶೇಷ ಉಪನ್ಯಾಸ ನೀಡಿ, ಮಹಿಳೆಯರು ಮೊದಲು ನಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು.

ಹೆಣ್ಣು ಹುಟ್ಟಿತಲ್ಲ ಎಂದು ತಾತ್ಸಾರ ಮಾಡುವವಳು ಸಹ ಹೆಣ್ಣೆ. ಇಂತಹ ಮನಸ್ಥಿತಿಯನ್ನು ತಾಯಿ, ಅತ್ತೆಯಾದವರು ಬಿಡಬೇಕು. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಹೀಗಾಗಿ ಮಹಿಳೆಯರು ಅಡುಗೆ ಮನೆಯಿಂದ ಬಾಹ್ಯಕಾಶಕ್ಕೆ ತಲುಪಿದ್ದಾರೆ. ಆಕಾಶಯನ ಮಾಡಿ ಬಂದಿದ್ದಾರೆ.

ಮಹಿಳೆಯರ ಪ್ರಗತಿಯಲ್ಲಿ ಮಹಿಳೆಯರು ಸಹ ಸಹಕಾರ ನೀಡಬೇಕು. ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕು. ಮಹಿಳೆಗೆ ಸಹಾನುಭೂತಿ, ಅನುಕಂಪ ಬೇಡ, ಅವಳಿಗೆ ಅವಕಾಶ ನೀಡಿ, ಗೆದ್ದು ಬರುವ ಶಕ್ತಿ ಸಾಮರ್ಥ್ಯ ಅವಳಲ್ಲಿದೆ ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ಕೆ. ರವಿಕುಮಾರ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆಯನ್ನು ಕದಳಿ ಮಹಿಳಾ ವೇದಿಕೆಯವರು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ. ದತ್ತಿ ಉಪನ್ಯಾಸದ ಮೂಲಕ ಶರಣರ ವಿಚಾರಧಾರೆಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಶರಣರ ವಿಚಾರಗಳನ್ನು ತಿಳಿದುಕೊಳ್ಳುವ ಜೊತೆಗೆ ಅನುಭವ ಮಂಟಪದಲ್ಲಿ ಎಲ್ಲಾ ವರ್ಗದವರು ಹಾಗೂ ಮಹಿಳೆಯರಿಗೆ ವಿಶೇಷ ಸ್ಥಾನವನ್ನು ನಮ್ಮ ಶರಣರು ನೀಡಿದ್ದರು. ಇಂತಹ ಸಂಸ್ಕೃತಿ ಪರಂಪರೆಯನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗೋಣ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ,   ಹಲವು ಮಹಿಳೆಯರು ಇಂದು  ವೈದ್ಯಕೀಯ, ಉದ್ಯಮ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ  ಹೆಸರು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ತಮ್ಮ ಕುಟುಂಬದ ಜೊತೆಗೆ ಸಮಾಜದ, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಮಕ್ಕಳಲ್ಲಿ ಸಂಸ್ಕಾರ ಬೆಳಸಲು,ಅವರ ಜೀವನದ ಸವಾಲುಗಳನ್ನು ಎದುರಿಸಲು ಮಹಿಳೆ ತಾಯಿಯಾಗಿ, ಪತ್ನಿಯಾಗಿ ಶ್ರಮಿಸುತ್ತಿದ್ದಾಳೆ. ಅಂತಹ ಮಹಿಳೆಯರನ್ನು ಪ್ರಶಂಸಿಸಲು ಮಹಿಳಾ ದಿನಾಚರಣೆ  ಉತ್ತಮ ಸಂದರ್ಭವಾಗಿದ್ದು, ಎಲ್ಲರೂ ಮಹಿಳೆಗೆ ಸ್ವಾತಂತ್ರ್ಯ, ಅವಕಾಶ, ಮಾರ್ಗದರ್ಶನ ನೈತಿಕ ಬೆಂಬಲ, ಸಹಕಾರ ನೀಡಿದರೆ ಮಹಿಳೆಯರು ಉತ್ತಮ ಸಾಧನೆ ಮಾಡಬಲ್ಲರು ಎಂದರು.

ಕಾರ್ಯಕ್ರಮದಲ್ಲಿ  ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಸಂತಮ್ಮ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ರತ್ನಮ್ಮ ಬಸವರಾಜು, ವಿಜಯಾಂಬ ಕುಮಾರಸ್ವಾಮಿ, ಪಾರ್ವತಿ ಬಳಗದ ಅಧ್ಯಕ್ಷೆ ಆಶಾ ನಟರಾಜು, ಕಾರ್ಯದರ್ಶಿ ಅನ್ನಪೂರ್ಣ ಸ್ವಾಮಿ ಮೊದಲಾದವರು ಇದ್ದರು.

ಕಲ್ಯಾಣದ ಅನುಭವ ಮಂಟಪದಲ್ಲಿದ್ದ ಶರಣರ ವೇಷಭೂಷಣಗಳನ್ನು ಧರಿಸಿ, ಅವರ ವಚನಗಳನ್ನು ಹೇಳುವ ಮೂಲಕ, ಅವರ ಹಿನ್ನೆಲೆಯನ್ನು ತಿಳಿಸುವ ಮೂಲಕ ಗಮನ ಸೆಳೆಯುವ ಪಾತ್ರಾಭಿನಯ ಪ್ರದರ್ಶನ ನಡೆದು ಗಮನ ಸೆಳೆಯಿತು .

ಕಾರ್ಯಕ್ರಮದಲ್ಲಿ  ಶೋಭಾ ಸಿದ್ದರಾಜು, ಶಿವಮಣಿ, ಸುಂದ್ರಮ್ಮ, ಶಾರದಾ, ಸವಿತಾ, ಕುಮಾರಿ, ನಿರ್ಮಲ, ಕಾಳನಹುಂಡಿ ಗುರುಸ್ವಾಮಿ, ಕೆಂಪನಪುರ ಮಹಾದೇವಸ್ವಾಮಿ, ಹೊನ್ನಮೇಟಿ ಸುಂದರ್, ಲಿಂಗರಾಜು, ಕೊತ್ತಲವಾಡಿ ಮಹದೇವಸ್ವಾಮಿ, ಬಸವರಾಜಪ್ಪ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *

ವೀರಶೈವ ಮಹಾಸಭಾ ಬೆಂಗಳೂರು, ಬಸವ ಕೇಂದ್ರ ಚಾಮರಾಜನಗರ, ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಚಾಮರಾಜನಗರ