ಬೆಂಗಳೂರು :
ಎಪ್ರೀಲ್ 20 ಬಸವ ಜಯಂತಿ ಪ್ರಯುಕ್ತ, ಬಸವೇಶ್ವರ ನಗರ ಬಸವ ಬಳಗದಿಂದ ಬಸವಾದಿ ಶರಣರ ವಚನ ಪ್ರಚಾರ ಹಾಗು ಮಕ್ಕಳ ಪ್ರತಿಭೆ ಅನಾವರಣದ ಸಲುವಾಗಿ ಬಸವಾದಿ ಶರಣರ ವಚನ ವಾಚನ ಸ್ಪರ್ಧೆ ಆಯೋಜಿಸಲಾಗಿದೆ.
ಆನ್ಲೈನ್ ಲಿಂಕ್, ಗೂಗಲ್ ಫಾರ್ಮ್ನಲ್ಲಿ ಸೂಚಿಸಿರುವಂತೆ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡುವ ಮೂಲಕ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ವಚನ ವಾಚನ ಸ್ಪರ್ಧೆ ಏಪ್ರಿಲ್ 12ರಂದು ನಡೆಯಲಿದೆ. ನೋಂದಾಯಿಸಿದ ಅಭ್ಯರ್ಥಿಗಳಿಗೆ ಕಾರ್ಯಕ್ರಮದ ಒಂದು ದಿನ ಮೊದಲು ಪ್ರತ್ಯೇಕ ಲಿಂಕ್ ಕಳುಹಿಸಲಾಗುತ್ತದೆ ಎಂದು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9945585595 ಸಂಖ್ಯೆಯನ್ನು ಸಂಪರ್ಕಿಸಬಹುದು.
