ಬೆಳಗಾವಿ
ಮಕ್ಕಳಿಗೆ ಬಾಲ್ಯದಿಂದಲೇ ಶರಣ ಸಂಸ್ಕೃತಿಯ ಮೌಲ್ಯಯುತ ಸಿದ್ಧಾಂತಗಳಾದ ಕಾಯಕ ಮತ್ತು ದಾಸೋಹದ ಅರಿವು ಮೂಡಿಸಬೇಕೆಂದು ಶರಣೆ ಮೀನಾಕ್ಷಿ ಸೂಡಿ ಹೇಳಿದರು.
ಶರಣ ಸಂಸ್ಕೃತಿಯ ಮೌಲ್ಯಯುತ ಸಿದ್ಧಾಂತಗಳಾದ ಕಾಯಕ ಮತ್ತು ದಾಸೋಹದ ವಿಶಾಲ ವ್ಯಾಪ್ತಿಯನ್ನು ಹಾಗೂ ದಾಸೋಹದ ಮೂಲ ತತ್ವಗಳಾದ ಸಹಪಂಕ್ತಿ, ಸಹಭೋಜನ, ಸಮಭಾವ, ಸಮನ್ವಯತೆಗಳ ಅರಿವು ಪ್ರತಿಯೊಬ್ಬ ಶರಣರಲ್ಲಿ ಸಾಕಾರಗೊಳ್ಳಬೇಕು.
ಲಿಂಗಾಯಿತ ಸಂಘಟನೆ ವತಿಯಿಂದ ಡಾ.ಫ.ಗು. ಹಳಕಟ್ಟಿ ಭವನದಲ್ಲಿ, ರವಿವಾರ ಜರುಗಿದ ಸಾಮೂಹಿಕ ಪ್ರಾರ್ಥನೆ ಹಾಗೂ ಶರಣರ ದೃಷ್ಟಿಯಲ್ಲಿ ದಾಸೋಹದ ಪರಿಕಲ್ಪನೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕ್ಷರದಾಸೋಹ, ಅನ್ನದಾಸೋಹ, ನಂಬಿಕೆ ದಾಸೋಹ, ಭಕ್ತಿ ದಾಸೋಹದ ವಿಶಾಲ ವ್ಯಾಪ್ತಿಯನ್ನು ಚರ್ಚಿಸುತ್ತ, ದಾಸೋಹದ ಬಗ್ಗೆ ಮಾರ್ಮಿಕವಾಗಿ ಮನಮುಟ್ಟುವಂತೆ ತಿಳಿಸಿದರು.
ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿಯವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈರಣ್ಣ ದೇಯನ್ನವರ ವಹಿಸಿದ್ದರು.
ಸದಾಶಿವ ದೇವರಮನಿ, ವಿ. ಕೆ. ಪಾಟೀಲ, ಬಿ.ಪಿ. ಜವಣಿ, ಮಂಗಳಾ ಕಾಗತಿಕರ, ಲಲಿತಾ ವಾಲಿಇಟಗಿ, ಸುವರ್ಣ ಗುಡಸ, ಸುನೀಲ ಸಾಣಿಕೊಪ್ಪ, ಪ್ರಸಾದ ಹಿರೇಮಠ, ಶಂಕರ ಗುಡಸ, ಬಸವರಾಜ ಬಿಜ್ಜರಗಿ, ಜ್ಯೋತಿ ಬದಾಮಿ, ಸುಜಾತಾ ಮತ್ತಿಕಟ್ಟಿ, ಶ್ರೀದೇವಿ ನರಗುಂದ ಉಪಸ್ಥಿತರಿದ್ದರು.
ಅಹನಾ ಮುಕುಂದ ಕಾಗತಿಕರ ಅವರು ದಾಸೋಹ ಸೇವೆ ಗೈದರು. ಎಂ.ವೈ. ಮೆಣಸಿನಕಾಯಿ ಪರಿಚಯಿಸಿದರು. ಸಂಗಮೆಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.