ಬೆಳಗಾವಿ
ಲಿಂಗಾಯತ ಸಂಘಟನೆ ವತಿಯಿಂದ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರದ ಸಾಮೂಹಿಕ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ನಡೆಯಿತು.
ಶರಣೆ ದಾನಮ್ಮ ವಿ. ಅಂಗಡಿ ಮಕ್ಕಳು ಸಂಸ್ಕಾರವಂತರಾಗುವಲ್ಲಿ ಕುಟುಂಬದ ಪಾತ್ರ ಕುರಿತು ಉಪನ್ಯಾಸ ನೀಡುತ್ತಾ, ಗುರು ಹಿರಿಯರಿಗೆ ಗೌರವ ಕೊಡಬೇಕು. ತಂದೆ ತಾಯಿ ಸೇವೆ ಮಾಡಬೇಕು. ಇಂಥ ಸಂಸ್ಕಾರವನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕೊಡಬೇಕು ಎಂದರು. ರೋಗಗಳನ್ನು ತಡೆಗಟ್ಟುವ ಶಕ್ತಿ ಪ್ರಾರ್ಥನೆಯಲ್ಲಿದೆ. ದಿನಾಲು ಪ್ರಾರ್ಥನೆ ಮಾಡುವುದನ್ನು ಮಕ್ಕಳಿಗೆ ಕಲಿಸಿಕೊಡಿರಿ.
ಬೆಳಗಿನ ಸೂರ್ಯ ರಶ್ಮಿ ಶರೀರಕ್ಕೆ ತಟ್ಟಲಿ, ಮಕ್ಕಳು ಮೊಬೈಲ್ ದಾಸರಾಗಲು ಬಿಡದೆ, ಗಿಡ ಮರ ಬೆಳೆಸಲು, ತಂದೆ-ತಾಯಿ ಸೇವೆ ಮಾಡುವ ಆಧ್ಯಾತ್ಮಿಕ, ಸಾಮಾಜಿಕವಾಗಿ ಸಂಸ್ಕಾರ ನೀಡಬೇಕು. ಈಗಿನ ಹೊಸ ಆಹಾರ ಪದ್ಧತಿ ಬಿಟ್ಟು ತರಕಾರಿ, ರೊಟ್ಟಿ, ಮೊಳಕೆ ಕಾಳು ಮತ್ತು ಅಂಬಲಿ ಇವು ರೂಢಿ ಆಗಲಿ. ಒಳ್ಳೆಯ ಸಂಪ್ರದಾಯ ಇರಲಿ. ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬೇಕು. ತಾಯಿ ಪಾತ್ರ ತಂದೆ ಪಾತ್ರ ಇಲ್ಲಿ ಅತಿ ಅವಶ್ಯಕ. ಬಾಲ್ಯ, ಯೌವನ,ಮುಪ್ಪು ಎಲ್ಲರಿಗೂ ಬರುವುದೇ ಎಂದರು.
ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಂದಿನ ಯಾಂತ್ರಿಕ ಜೀವನ ಬಿಟ್ಟು, ಗುರು ಹಿರಿಯರು ಹಿಂದೆ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಗುರು ಇಲ್ಲದೆ ಯಾವುದೇ ಕಾರ್ಯವಿಲ್ಲ, ಹಂಚಿ ತಿನ್ನುವುದರಲ್ಲಿ ಎಷ್ಟೊಂದು ಖುಷಿ ಇದೆ. ನೆರೆಹೊರೆ ಬಾಂಧವ್ಯ ಕಾಪಾಡಿಕೊಂಡು, ಮಕ್ಕಳಿಗೆ ಸಂಸ್ಕಾರ ಎನ್ನುವ ಡೆಪಾಜಿಟ್ ಮಾಡಿರಿ. ಜನನಿ ತಾಯಿ ಮೊದಲ ಗುರು, ಪ್ರೀತಿ ವಿಶ್ವಾಸ ಗೌರವ ಹೊಂದಾಣಿಕೆ ನಮ್ಮ ಕರ್ತವ್ಯ ಸಹ ಆಗಿದೆ. ಅನುಭವ ಇರುವಲ್ಲಿ ಅಮೃತತ್ವವಿದೆ ಎಂದು ದಾನಮ್ಮ ಅವರು ಹೇಳಿದರು.
ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು, ಸುರೇಶ ನರಗುಂದ ಅವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಮಹಾಂತೇಶ ಮೆಣಸಿನಕಾಯಿ ಪರಿಚಯಿಸಿದರು. ಸಂಗಮೇಶ ಅರಳಿ ನಿರೂಪಿಸಿದರು.
ಬಸವರಾಜ ಬಿಜ್ಜರಗಿ, ಬಿ.ಪಿ. ಜವನಿ, ವಿ.ಕೆ. ಪಾಟೀಲ, ಶ೦ಕ್ರಪ್ಪ ಮೆಣಸಗಿ, ಅನೀಲ ರಘಶೆಟ್ಟಿ, ಬಸವರಾಜ ಕರಡಿಮಠ, ಕರಿಕಟ್ಟಿ, ಸೊಮಶೇಖರಕತ್ತಿ, ಸುನೀಲ ಸಾನಿಕೊಪ್ಪ , ಗಂಗಪ್ಪ ಉಣಕಲ, ಪೂಜಾ ಅಶೋಕ ಹುಕ್ಕೇರಿ ಭಾಗವಹಿಸಿದ್ದರು.