ಬೀದರ
ಕೊಳಾರ (ಕೆ) ಬಸವ ಮಂಟಪದಲ್ಲಿ ಬಸವ ಪಂಚಮಿ ಪ್ರಯುಕ್ತ ಹಮ್ಮಿಕೊಂಡ ವಿಶ್ವಗುರು ಬಸವಣ್ಣನವರ 829ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಕುಡಿಸುವುದರ ಮೂಲಕ ಪೂಜ್ಯ ಬಸವಪ್ರಭು ಸ್ವಾಮೀಜಿ ಉದ್ಘಾಟನೆ ಮಾಡಿದರು.

ಇಂದು ಎಲ್ಲೆಡೆ ಕಲ್ಲು ನಾಗರ ಮೂರ್ತಿಗೆ ಅಥವಾ ಹುತ್ತಿಗೆ ಹಾಲೆರೆಯುವ ಮೌಢ್ಯ ಆಚರಣೆ ನಡೆದಿದೆ. ಗುರು ಬಸವಣ್ಣನವರು ಇದನ್ನು ಖಂಡಿಸುತ್ತಾರೆ. ಅಂಡಜವಾಗಿ ಬರುವ ಯಾವ ಜೀವಿಗಳು ಹಾಲು ಕುಡಿಯುವುದಿಲ್ಲ. ಪಿಂಡಜ ಪ್ರಾಣಿಗಳು ಮಾತ್ರ ಹಾಲು ಕುಡಿಯುತ್ತವೆ ಈ ವೈಜ್ಞಾನಿಕ ಸತ್ಯ ಅರಿತು; ಬಡವರಿಗೆ, ನಿರ್ಗತಿಕರಿಗೆ, ಅನಾಥರಿಗೆ, ಭೀಕ್ಷುಕರಿಗೆ, ರೋಗಿಗಳಿಗೆ ಮಕ್ಕಳಿಗೆ ಹಾಲು ಅಥವಾ ಊಟ ಕೊಟ್ಟರೆ ಅದು ದೇವನಿಗೆ ನೈವೇದ್ಯ ಅರ್ಪಿಸಿದಂತೆ ಎಂದು ಬಸವಣ್ಣನವರು ಹೇಳಿದರು, ಎಂದು ಸ್ವಾಮೀಜಿ ಹೇಳಿದರು.

ಬಸವಾದಿ ಪ್ರಮಥರ ತತ್ವ ಪಾಲಿಸುವ ಲಿಂಗಾಯತರು ಇಂತಹ ಮೌಢ್ಯವನ್ನು ಆಚರಿಸಬಾರದು ಎಂದು ಕರೆ ಕೊಟ್ಟರು. ಸುಪ್ರಭಾತ ಸಮಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಬಸವೇಶ್ವರ ಪೂಜಾವೃತ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾರುತೆಪ್ಪ ಪಾಪಡೆ, ಕಂಟೆಪ್ಪ, ರವಿ ಶಂಭು, ಸಂಗಪ್ಪ, ವಿಶಾಲ ಶಂಭು, ಸುಭಾಷ್ ಸಾಯಗಾವ್, ಮಹಾದೇವಪ್ಪ ತೇಲಿ, ಬಸವ ಬಾಲ ಸಂಸ್ಕಾರ ಮಕ್ಕಳಾದ ಸೃಷ್ಟಿ, ಸೌಂದರ್ಯ, ವಿಜಯಲಕ್ಷ್ಮಿ, ಸಂಗೀತ, ವಿವೇಕಾನಂದ, ಲಿಂಗಾನಂದ ರಾಷ್ಟ್ರೀಯ ಬಸವದಳ ಸದಸ್ಯರು ಉಪಸ್ಥಿತರಿದ್ದರು.