ಮಲ್ಲೂರು ಗ್ರಾಮದಲ್ಲಿ ಬಸವ ಸಂಕ್ರಾಂತಿ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಸವದತ್ತಿ

ಬಸವ ಸಂಕ್ರಾಂತಿ ಪರ್ವದ ಅಂಗವಾಗಿ, ಇದೇ ಜನವರಿ 12 ರಿಂದ 14ರ ಮೂರು ದಿನದವರೆಗೆ ಅನುಭಾವ, ಚಿಂತನಾ ಗೋಷ್ಠಿಗಳು ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ ನಡೆಯಲಿವೆ.

ಅನುಭಾವಿಗಳಾದ ಎಂ.ಎಂ. ಸಂಗೊಳ್ಳಿ, ಆರ್. ಎಸ್. ಸಣ್ಣಮನಿ, ಎಸ್.ಎನ್. ಅರಬಾವಿ, ಎನ್.ಐ. ಮದಲಬಾವಿ, ಪುಂಡಲೀಕ ಇಂಗಳಗಿ, ಈರಣ್ಣ ಯಡಾಲ ಅವರುಗಳು ಅನುಭಾವ ನೀಡಲಿರುವರು.

ಲಿಂಗಾಯತ ಧರ್ಮದ ಉದಯ, ಅಷ್ಟಾವರಣ, ಪಂಚಾಚಾರ, ಷಟಸ್ಥಲದ ದಿವ್ಯಾನುಭವ, ಕಾಯಕ-ದಾಸೋಹ, ಶಿವಯೋಗ, ಇಷ್ಟಲಿಂಗ ಮಹತ್ವ, ಶರಣ ಸಂಗಮಗಳ ಸವಿವರವಾದ ಸುಜ್ಞಾನ ಸಚ್ಚಿಂತನೆ ನಡೆಯಲಿದೆ. ಆಸಕ್ತ ಬಸವಭಕ್ತರು ಬಂದು ಭಾಗವಹಿಸಬಹುದು.

ಶಿವಯೋಗ, ಸಾಮೂಹಿಕ ಪ್ರಾರ್ಥನೆ, ಗುರುಪೂಜೆ, ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮಗಳು ಸಹ ಇರುತ್ತವೆ. ಪ್ರಸಾದ, ವಸತಿ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು 97430 74620, 99727 12798, 97416 45224 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

Share This Article
Leave a comment

Leave a Reply

Your email address will not be published. Required fields are marked *