ಸವದತ್ತಿ
ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಅನುಭವ ಮಂಟಪ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮ ಲಿಂಗಾಯತ ಧರ್ಮ ತತ್ವದ ಅನುಸಾರವಾಗಿ ನಡೆಯಿತು.
ಬೆಳಗಾವಿ ಸಂಸದರು, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರು ಮೊದಲಿಗೆ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದರು, ನಂತರ ಗುದ್ದಲಿ ಪೂಜಾ ಕಾರ್ಯ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಎಸ್.ಎಸ್. ಸಿದ್ದನಗೌಡರು, ಎಸ್. ಎನ್. ಅರಭಾವಿ ಶಿಕ್ಷಕರು ಹಾಗೂ ಮಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಎಲ್ಲಾ ಗುರುಹಿರಿಯರು ಶರಣ ತಾಯಿ-ತಂದೆಗಳು ಉಪಸ್ಥಿತರಿದ್ದರು.
ಹೊಸೂರು ಹಾಗೂ ಮಲ್ಲೂರು ಗ್ರಾಮದ ಶರಣರು ಸೇರಿಕೊಂಡು ವಚನ ಕ್ರಿಯಾಮೂರ್ತಿಗಳಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆ ನಿರ್ಮಾಣ ಕಾರ್ಯಕ್ಕೆ ಸಂಸದರು ಅಭಿವೃದ್ಧಿ ನಿಧಿಯಿಂದ 5 ಲಕ್ಷ ರೂ. ಅನುದಾನ ಒದಗಿಸಲಿದ್ದಾರೆ ಎಂದು ಶರಣ ಕರವೀರಪ್ಪ ಯಡಾಲ ಅವರು ಹೇಳಿದ್ದಾರೆ.


TAGGED:ನಿಜಾಚರಣೆ