ಮಹಾಲಿಂಗಪುರ
ಸ್ವಾಸ್ಥ್ಯ ಸಮಾಜ ನಿರ್ಮಿಸಲು 12ನೇ ಶತಮಾನದ ಬಸವಾದಿ ಶಿವಶರಣರ ನುಡಿ ಮತ್ತು ನಡೆಯನ್ನು ಎಲ್ಲರೂ ಅನುಸರಿಸಬೇಕು ಎಂದು ಗದಗ ಜಿಲ್ಲಾ ನ್ಯಾಯಾಲಯದ ಪ್ರಧಾನ ಹಿರಿಯ ಸೆಷನ್ಸ್ ನ್ಯಾಯಾಧೀಶ ಜಿ.ಆರ್. ಶೆಟ್ಟರ್ ಹೇಳಿದರು.
ಪಟ್ಟಣದ ಬಸವ ಬಳಗದ ವತಿಯಿಂದ ಮಹಾಂತೇಶ ದುಂಡಪ್ಪ ಕುರಿ ಅವರ ಮನೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಂಕೀರ್ಣಗೊಳಿಸದೆ, ಸುಲಭದ ಪರಿಹಾರೋಪಾಯ ಕಂಡುಕೊಳ್ಳುವಲ್ಲಿ ಸತ್ಸಂಗ ಮಹತ್ವದ ಪಾತ್ರ ವಹಿಸುತ್ತದೆ’ ಎಂದರು.
ಬಸವರಾಜ ಮೇಟಿ, ಮಹಾನಿಂಗ ಸಣ್ಣಕ್ಕಿ, ಬಸವ ಬಳಗದ ಅಧ್ಯಕ್ಷ ಸಿ.ಎಂ.ಕಟಗಿ, ಬಸವ ಸಮಿತಿ ಅಧ್ಯಕ್ಷ ಚಂದ್ರು ಗೊಂದಿ, ಗೋಲೇಶ ಅಮ್ಮಣಗಿ, ಶ್ರೀಶೈಲ ವಜ್ಜರಮಟ್ಟಿ, ಬಸವರಾಜ ಬಟಕುರ್ಕಿ, ಮಹಾಂತೇಶ ಘಟ್ನಟ್ಟಿ ಇದ್ದರು.
ಶಿಕ್ಷಕರಾದ ಎ.ಎ.ಕಿಚಡಿ, ಎಸ್.ಬಿ.ರಡ್ಡೇರಹಟ್ಟಿ, ಹುಮಾಯೂನ ಸುತಾರ, ಎಂ.ಆರ್.ಬಿದರಿ, ದಾಸಪ್ಪಗೋಳ, ಸಪ್ನಾ ಅನಿಗೋಳ ಮಾತನಾಡಿದರು.