ಮಂಗಗಳ ಹಾವಳಿಯಿಂದ ಶಾಂತಿಯ ತೋಟ ಸಂರಕ್ಷಿಸಿ: ಸಾಣೇಹಳ್ಳಿ ಶ್ರೀ ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

ಎಲ್ಲಾ ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಮಿಗಿಲು ಎಂದು ನಾಡೋಜ ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದೇವರು ಹೇಳಿದರು.

ಕಲಬುರಗಿ

“ನಮ್ಮ ಶಾಂತಿಯ ತೋಟ ಮಂಗಗಳ ಹಾವಳಿಯಿಂದ ನಾಶ ಆಗ್ತಾ ಇದೆ. ಮತ್ತೆ ಮಂಗಗಳನ್ನು ದೂರ ಸರಿಸಿ ಶಾಂತಿಯ ತೋಟವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಕೈಯಲ್ಲಿದೆ,” ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರವಿವಾರ ಹೇಳಿದರು.

ರವಿವಾರ ಸೌಹಾರ್ದ ಕರ್ನಾಟಕದ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಆಯೋಜಿಸಿದ ‘ಬಹುತ್ವ ಸಂಸ್ಕೃತಿ ಭಾರತೋತ್ಸವ 2025, ಕಲಬುರಗಿ ಚಲೋ’ ಬಹಿರಂಗ ಸಮಾವೇಶವನ್ನು ಡೊಳ್ಳು ಬಾರಿಸಿ ಉದ್ಘಾಟಿಸಿ ಮಾತನಾಡಿದರು.

ಇವತ್ತು ನಮ್ಮಲ್ಲಿ ಉತ್ತಮವಾದ ಸಂವಿಧಾನ ಇದೆ. ಆದರೆ ಆ ಸಂವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸಬೇಕು ಎನ್ನುವಂಥ ಜನ ನಮ್ಮ ನಾಡಿನ ನೇತಾರಾಗುತ್ತಿದ್ದಾರೆ. ಆ ನೇತಾರರನ್ನು ಮಾಡಿದಂಥವರು ಯಾರು? ನಾವು, ನೀವು. ಬೇರೆಯವರು ಶನಿ ಸಂತಾನಿಗಳಲ್ಲ. ನಾವು ನೀವುಗಳು ಶನಿ ಸಂತಾನಿಗಳು. ನಾವು ನೀವು ಸರಿಯಾದರೆ ಸಮಾಜ ಖಂಡಿತಾ ಸರಿಯಾಗುತ್ತದೆ, ಎಂದು ಎಚ್ಚರಿಸಿದರು.

ನಮ್ಮೆಲ್ಲರಿಗೂ ಕಾಲ ಪ್ರಜ್ಞೆ, ಕಾಯಕದ ಶ್ರದ್ಧೆ, ಹೇಗೆ ಸಂಪತ್ತನ್ನು ವಿನಿಯೋಗ ಮಾಡಬೇಕು ಎನ್ನುವಂಥ ಎಚ್ಚರ ಇರಬೇಕು. ಇದರ ಬಗ್ಗೆ ಅರಿವಿದ್ದರೆ ಖಂಡಿತಾ ಮತ್ತೆ ನಮ್ಮ ನಾಡನ್ನು ಉಳಿಸಿಕೊಳ್ಳಲಿಕ್ಕೆ, ಪರಂಪರೆಯನ್ನು ಬೆಳೆಸಿಕೊಳ್ಳಲಿಕ್ಕೆ, ಬಹುತ್ವ ಸಂಸ್ಕೃತಿಯನ್ನು ನಾಶ ಆಗದ ಹಾಗೆ ನೋಡಿಕೊಳ್ಳಲಿಕ್ಕೆ ಸಾಧ್ಯ ಎಂದರು.

ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಮಿಗಿಲು

ಎಲ್ಲಾ ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಮಿಗಿಲು ಎಂದು ನಾಡೋಜ ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದೇವರು ಹೇಳಿದರು.

ಸಮಾವೇಶದ ಸಾನಿಧ್ಯ ವಹಿಸಿ ನಾಡೋಜ ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದೇವರು
ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಗಟ್ಟಿಯಾಗಿ ಅಳವಡಿಸಿಕೊಳ್ಳುವ ಮೂಲಕ ಭಾರತ ದೇಶ ಕಟ್ಟಬೇಕೆಂದು ಎಂದು ಕರೆ ನೀಡಿದರು.

ಸಮಾನತೆಯ ತತ್ವಗಾಗಿ ಪ್ರಾಣ ತೆತ್ತಾದರೂ ಶರಣರು ಸಾರಿದ ಸಮಾನತೆ ತತ್ವವನ್ನು ಉಳಿಸಿ ಬೆಳಸಲು ಮುಂದಾಗಬೇಕು. ಎಲ್ಲಾ ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಮಿಗಿಲು ಎಂದು ಹೇಳಿದರು.

ಶ್ರೀ ಶರಣಬಸವೇಶ್ವರ ಸಂಸ್ಥಾನದ ದಾಕ್ಷಾಯಿಣಿ ಅವ್ವಾಜೀ ಮಾತನಾಡಿ, ಈ ದೇಶ ಎಲ್ಲಾ ಸಂಸ್ಕೃತಿ ಒಳಗೊಂಡಿರುವ ಸಮಾನತೆ ಸಾರುವ ದೇಶ. ಬಹುತ್ವದಲ್ಲಿ ಏಕತೆ ಅಗತ್ಯವಿದೆ. ಈ ಜಾಗೃತಿ ಮುಂದುವರೆಯಬೇಕು, ಎಂದು ಹೇಳಿದರು.

ಆರ್.ಕೆ.ಹುಡುಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಸಂಸ ಜಿಲ್ಲಾ ಸುರೇಶ ಹಾದಿಮನಿ ಸ್ವಾಗತಿಸಿದರು. ಡಾ.ಮೀನಾಕ್ಷಿ ಬಾಳಿ ನಿರೂಪಿಸಿದರು. ಮಹೇಶ ರಾಠೋಡ ವಂದಿಸಿದರು.

ಇದಕ್ಕೂ ಮುನ್ನ ನಗರದ ಕನ್ನಡ ಭವನದಿಂದ ಜಗತ್ ವೃತ್ತದ ವರೆಗೆ ಕಾಲ್ನಡಿಗೆಯ ಮೂಲಕ ಬೃಹತ್ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿಗಳು, ದರ್ಗಾದ ಸಜ್ಜಾದೇಗಳು, ವಿವಿಧ ಧಾರ್ಮಿಕ ಮುಖಂಡರು, ಸಾಮಾಜಿಕ ಚಿಂತಕರು, ಸಾಹಿತಿಗಳು, ಪ್ರಗತಿಪರ ಚಿಂತಕರು ಸೇರಿದಂತೆ ಹಲವಾರು ಬುದ್ಧಿಜೀವಿಗಳು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಳ್ಳುವುದರ ಮೂಲಕ ಭಾವೈಕ್ಯತೆಯನ್ನು ಸಾರಿದರು.

ಈ ಸಂದರ್ಭದಲ್ಲಿ ಹಜರತ್ ಶೇಖ್, ಅಲ್ಲಮ ಪ್ರಭು ಬೆಟ್ಟದೂರು, ದಸಂಸ ರಾಜ್ಯ ಸಂ.ಸಂಚಾಲಕರಾದ ಮರಿಯಪ್ಪ ಹಳ್ಳಿ ಲಚ್ಚಪ್ಪ ಜಮಾದಾರ, ಅರ್ಜುನ್ ಬದ್ರೆ, ಎಸ್.ಆರ್.ಕೊಲ್ಲೂರ, ಎಂ.ವೈ.ಗೋರ್ಪಡೆ, ಬಿಸಿ ವಾಲಿ, ಆರ್.ಜಿ.ಶೆಟಗಾರ, ಶಾಮ ನಾಟೀಕರ, ಸುರೇಶ ಮೆಂಗನ್, ಪ್ರಕಾಶ ಮೂಲಭರತಿ, ಲವಿತ್ರ ವಸ್ತ್ರದ, ಆರ್.ಕೆ.ಹುಡುಗಿ, ಲಡಾಯಿ ಬಸೂ, ದತ್ತಾತ್ರೇಯ ಇಕ್ಕಳಕಿ, ಶ್ರೈಶೈಲ ಮಸೂತಿ ಸೇರಿದಂತೆ ಇತರರಿದ್ದರು.

ಅಲ್ಲದೆ, ಮುಜಾಹೀದ್ ಪಾಶಾ ಖುರೈಷಿ, ಶಾಮ ನಾಟಿಕಾರ್, ಆರ್ ಜಿ ಶೆಟಗಾರ, ರಿಜ್ವಾನ್ ಸಿದ್ದಿಕಿಸಾಬ,ರವೀಂದ್ರ ಶಾಬಾದಿ, ಎಸ್ ಪಿ ಸುಳ್ಯದ, ಶರೀಫ್ ಬಿಳಿಯಲಿ, ಎ.ಬಿ. ಹೊಸಮನಿ, ಅರ್ಜುನ ಗೊಬ್ಬರ, ಡಾ.ಕಾಶಿನಾಥ ಅಂಬಲಗೆ, ಡಾ.ಪ್ರಭು ಖಾನಾಪೂರೆ, ಪ್ರಭುಲಿಂಗ ಮಹಾಗಾಂವಕರ್, ಮಾರುತಿ ಗೋಖಲೆ, ಮರೆಪ್ಪ ಹಳ್ಳಿ, ಪ್ರೊ ಸಂಜಯ ಮಾಕಲ್, ಸುರೇಶ ಮೇಂಗನ್, ಎಸ್ ಎಸ್ ತವಡೇ, ಮಲ್ಲಪ್ಪ ಹೊಸ್ಮನಿ, ಪ್ರಕಾಶ ಮೂಲಭಾರತಿ, ದೇವೇಂದ್ರ ಸಿನ್ನೂರ, ಗೌತಮ ಕರೆಕಲ್, ನಾಗೇಶ ಕೊಳ್ಳಿ, ಶರಣಬಸವ ಸೂರ್ಯವಂಶಿ, ಲಿಂಗರಾಜ ತಾರಫೈಲ್, ಪದ್ಮಾ ಪಾಟೀಲ, ಸಂದೀಪ ಭರಣಿ, ನಗನೂರ ಜೇವರ್ಗಿ, ಪವನ ವಳಕೇರಿ, ಪ್ರಕಾಶ ನಾಗನಳ್ಳಿ, ಮಹಾದೇವ ಧನ್ನಿ, ಚೆನ್ನಪ್ಪ ಆನೆಗುಂದಿ, ಸತ್ಯಬಾಬು, ಬಳ್ಳಾರಿ, ಸುರೇಖಾ ವಿಜಯಪುರ, ಮಲ್ಲಣ್ಣ ಸತ್ಯಂಪೇಟೆ, ಪದ್ದಿನಿ ಕಿರಣಗಿ, ಮುತ್ತು ಬಿಳಿಯಲಿ ಗದಗ, ವಿಕ್ರಮ ತೇಜಸ್, ನಾಗೇಂದ್ರ ನಿಂಬರ್ಗಿ, ಪಾಂಡುರಂಗ ಮಾವಿನಕರ್, ದಿಗಂಬರ ಬೆಳಮಗಿ, ಪ್ರಕಾಶ ಕಪನೂರ, ಪ್ರಕಾಶ ಚಾಳಿ, ತಿಪ್ಪಣ್ಣ ಒಡೆಯರಾಜ, ಮಹಾಂತೇಶ ಕಲಬುರಗಿ, ಹಣಮಂತ ದೊಡ್ಮನಿ, ಶಾಂತಾ ಘಂಟೆ, ದಯಾನಂದ ದೊಡ್ಮನಿ, ದೇವೇಂದ್ರ ಹೆಗ್ಗಡೆ, ಗುಂಡಪ್ಪ ಲಂಡನಕರ್, ಭೀಮಶಾ ಖನ್ನಾ ಮಂಜು ಸಿ.ಕೆ, ಕೆ ಜಿ ವೀರೇಶ, ಪ್ರಭು ಸಂತೋಳಕರ್, ಮುಜೈದ ಪಾಳಾ ಖುರೈಷಿ, ಬಸವಕಲ್ಯಾಣ, ಆರ್ ರಾಮಚಂದ್ರ, ದಾವಣಗೆರೆ, ಶ್ರೀಮಂತ ಬಿರಾದಾರ, ಸುಧಾಮ ಧನ್ನಿ, ಶರಣಬಸಪ್ಪ ಮಮಶೆಟ್ಟಿ, ಮೌಲಾಮುಲ್ಲಾ, ಭೀಮಶೆಟ್ಟಿ ಯಂಪಳ್ಳಿ, ದತ್ತಾತ್ರಯ ಇಕ್ಕಳಕಿ, ಶ್ರೀಶೈಲ ಘೂಳಿ, ಭೀಮಾಶಂಕರ ಮಾಡ್ಯಾಳ, ಗೌರಮ್ಮ ಪಾಟೀಲ, ಶರಣಗೌಡ ಪಾಟೀಲ, ರಾಜಲಕ್ಷ್ಮಿ ಇಕ್ಕಳಕಿ, ಶಿವಲಿಂಗಮ್ಮ ವಿ ಲೇಂಗಟಿಕರ್, ಧನರಾಜ ತಾಂಬೋಳೆ, ಮೊಹಮ್ಮದ್ ಅಫಜಲ್, ದತ್ತಾತ್ರಯ ಇಕ್ಕಳಕಿ, ಸುಜಾತಾ ಕೆ., ನಾಗೇಶ ಹರಳಯ್ಯ,ಚಂದಮ್ಮ ಗೋಳಾ ಮತ್ತಿತರರು ಪಾಲ್ಗೊಂಡಿದ್ದರು.

Share This Article
2 Comments
  • ಸಂಘ ಪರಿವಾರ ಕಲಬುರ್ಗಿ ಯನ್ನು ದಕ್ಷಿಣ ಭಾರತದ ಹೆಬ್ಬಾಗಿಲು ಮಾಡಿಕೊಳ್ಳಲು ಹೊರಟಿದ್ದುಈಗಾಗಲೇ ಬಿತ್ರಿದ ದ್ವೇಷದ ಬೀಜಗಳು ಸಣ್ಣ ಸಸಿಯಾಗಿದ್ದು ಅವು ಹೆಮ್ಮರವಾಗದಂತೆ ನೋಡಿಕೊಳ್ಳಲು ಈ ತರಹದ ಸಮಾವೇಶ ಮತ್ರು ಸಂದೇಶ ಅಗತ್ಯವಾಗಿತ್ತು. ಬಹುತ್ವದ ಸಮಾವೇಶ ನಡೆದದ್ದು ಅತ್ಯಂತ ಅವಶ್ಯವಾಗಿತ್ತು , ಎಲ್ಲ ಜೀವಪರ ಮನಸ್ಸು ಗಳಿಗೆ ಅಭಿನಂದೆನಗಳು

  • ಒಳ್ಳೆಯ ಕಾರ್ಯಕ್ರಮ ಮತ್ತು ಹಿಂದುತ್ವವಾದಿಗಳಿಗೆ ಒಳ್ಳೆಯ ಸಂದೇಶ.

Leave a Reply

Your email address will not be published. Required fields are marked *