ಮನುಸ್ಮೃತಿಯಲ್ಲಿ ಹಿರಿದಾದ ತತ್ವಗಳಿವೆ: ಹೈಕೋರ್ಟ್ ನ್ಯಾಯಾದೀಶ ಕೃಷ್ಣ ಎಸ್. ದೀಕ್ಷಿತ್

ಬಸವ ಮೀಡಿಯಾ
ಬಸವ ಮೀಡಿಯಾ

“ಮನುಸ್ಮೃತಿ ಅನೇಕ ಹಿರಿದಾದ ತತ್ವಗಳನ್ನು ಒಳಗೊಂಡಿದೆ. ಮನು ಬ್ರಾಹ್ಮಣನಲ್ಲ, ಅದೊಂದು ಹುದ್ದೆ, ವರ್ಣಗಳು ಜಾತಿಗಳಲ್ಲ,” ಎಂದು ಹೈಕೋರ್ಟ್ ನ್ಯಾಯಾದೀಶ ಕೃಷ್ಣ ಎಸ್. ದೀಕ್ಷಿತ್ ಹೇಳಿದ್ದಾರೆ ಭಾಷಣದಲ್ಲಿ ಹೇಳಿದ್ದಾರೆ.

ನಗರದ ಹೈಕೋರ್ಟ್ ನ ಹಿರಿಯ ವಕೀಲ ವಿ.ತಾರಕರಾಮ್ ಅವರ ಸ್ಮರಣಾರ್ಥ ಸೋಮವಾರ ಆಯೋಜಿಸಲಾಗಿದ್ದ ‘ಕಾನೂನು ಮತ್ತು ಧರ್ಮ’ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಭಾರತದ ಮಹಾಕಾವ್ಯಗಳು, ವೇದ, ಉಪನಿಷತ್ತುಗಳು ಶೂದ್ರರಿಂದಲೇ ರಚಿತವಾಗಿವೆ. ಖಡ್ಗ ಸಂಸ್ಕಾರದಿಂದ ಶೂದ್ರರು, ರಾಜರೂ ಆಗಿ ಹೋಗಿದ್ದಾರೆ ಎಂದು ಅಭಿಪ್ರಾಯ ಪಟ್ಟರೆಂದು ಮಾಧ್ಯಮಗಳು ವರದಿ ಮಾಡಿವೆ.

ಎಲ್ಲ ದೇಶಗಳಲ್ಲಿನ ಕಾನೂನುಗಳೂ ಸ್ಥಳೀಯ ಶಾಸನಗಳು, ಆಚರಣೆ ಮತ್ತು ಪೂರ್ವನಿದರ್ಶನಗಳ ತಹಳಹದಿಯ ಮೇಲೆ ರೂಪುಗೊಳ್ಳುತ್ತಾ ಬಂದಿವೆ, ನಮ್ಮ ಕಾನೂನುಗಳು ರೂಪುಗೊಳ್ಳುವಲ್ಲಿ ಹಿಂದೂಧರ್ಮದ ಹಿರಿಮೆ ಸದಾ ಗಾಢವಾದ ಪಾತ್ರ ವಹಿಸಿದೆ, ಎಂದು ಹೇಳಿದರು ಎಂದು ವರದಿಯಾಗಿದೆ.

ಧರ್ಮ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ. ಅದಕ್ಕಾಗಿಯೇ ಕಾರ್ಲ್ ಮಾರ್ಕ್ಸ್ ‘ಧರ್ಮ ಅಫೀಮು ಇದ್ದಂತೆ’ ಎಂದು ಹೇಳಿದ್ದಾರೆ. ಯಾವುದೇ ಧರ್ಮವೂ ಟೀಕೆಗೆ ಹೊರತಾಗಿಲ್ಲ. ತಾರತಮ್ಯಗಳಿಲ್ಲದ ವ್ಯವಸ್ಥೆಯೇ ಧರ್ಮ ಎಂದು ಅವರು ತಿಳಿಸಿದರು.

Share This Article
Leave a comment

Leave a Reply

Your email address will not be published. Required fields are marked *