ಕೊಪ್ಪಳ
“ಸುಡುವುದಾದರೆ ನಿಮ್ಮ ನಿಮ್ಮ ಮನಸ್ಸಿನಲ್ಲಿರುವ ಜಾತಿ ಎನ್ನುವ ಕೊಳೆಯನ್ನು ಸುಟ್ಟುಬಿಡಿ” ಎನ್ನುವ ಮೂಲಕ ಪ್ರತಿ ವಷ೯ದಂತೆ ಈ ವಷ೯ವೂ ಕೊಪ್ಪಳದಲ್ಲಿ ಮನುಸ್ಮೃತಿಯನ್ನು ಸುಡಲಾಯಿತು.
ರಾಘು ಚಾಕ್ರಿ, ಮಂಜುನಾಥ ದೊಡ್ಡಮನಿ, ಕಿರಣ ಬಂಗಾಳಿಗಿಡದ, ಶರಣಪ್ಪ ಓಜನಹಳ್ಳಿ ಬಸವರಾಜ ಚಲವಾದಿ, ಭಾರತೀಯ ಭೀಮಾ ಸೇನಾ ಮತ್ತು ದಲಿತ ಸಂಘರ್ಷ ಸಮಿತಿ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
1927 ಡಿಸೆಂಬರ್ 25 ರಂದು ಬಾಬಾ ಸಾಹೇಬರು ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟರು. ಅದಕ್ಕೆ ನಮ್ಮ ದೇಶದಲ್ಲಿ ಡಿಸೆಂಬರ್-25ನ್ನು ಮನುಸ್ಮೃತಿ ದಹನ ದಿನವನ್ನಾಗಿ ಆಚರಿಸಲಾಗುತ್ತಿದೆ.

ಆದರೆ ಈ ನೆಪ ಮಾತ್ರ ಆಚರಣೆಯಿಂದ ಯಾವ ಪ್ರಯೋಜನವೂ ಇಲ್ಲ. ಬೀದಿಯಲ್ಲಿ ಮನುಸ್ಮೃತಿ ಸುಟ್ಟು ಮನೆಯಲ್ಲಿ ಮತ್ತೆ ಅದೇ ಮನುಸ್ಮೃತಿ ಹಾಕಿಕೊಟ್ಟ ಜಾತಿ, ಮೌಢ್ಯಗಳನ್ನು ಪಾಲಿಸಿದರೆ ಸಮಾಜದಲ್ಲಿ ಯಾವ ಬದಲಾವಣೆ ಕಾಣಬಹುದು? ಇದು ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ವಾರ್ನಿಂಗ್ ನ್ನು ಪ್ಯಾಕೇಟ್‌ನಲ್ಲಿ ನೋಡಿಕೊಂಡು ಮತ್ತೆ ಅದೇ ಸಿಗರೇಟು ಸೇವನೆ ಮಾಡಿದಂತೆ.
ಸಾಂಕೇತಿಕವಾಗಿ ಬಾಬಾ ಸಾಹೇಬರು ಮನುಸ್ಮೃತಿ ಸುಟ್ಟು ಅದಕ್ಕೆ ಬದಲಾಗಿ ಹೊಸ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಈಗಾಗಲೇ ಕೊಟ್ಟು ಹೋಗಿದ್ದಾರೆ. ಬರೀ ಸುಡುವುದಕ್ಕೆ ಸೀಮಿತವಾಗದೆ ಡಿಸೆಂಬರ್-25ನ್ನು ‘ಬುದ್ದಾನುಷ್ಟಾನ’ ದಿನವನ್ನಾಗಿ ಆಚರಿಸಿದರೆ ವಿಮೋಚನೆಯ ಹಾದಿಯಲ್ಲಿ ಅರ್ಥಪೂರ್ಣವಾಗಿ ಸಾಗಬಹುದು.