ಅಪ್ಪ ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ರಾಷ್ಟ್ರೀಯ ಬಸವ ಸೇನಾ ಉಗ್ರವಾಗಿ ಖಂಡಿಸಿದೆ
ವಿಜಯಪುರ
ಮೊನ್ನೆ ಬೀದರನಲ್ಲಿ ನಡೆದ ವಕ್ಫ್ ವಿರುದ್ಧದ ಹೋರಾಟದಲ್ಲಿ, ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಅಪ್ಪ ಬಸವಣ್ಣನವರ ಬಗ್ಗೆ ಹಗುರವಾಗಿ, ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ವಿಜಯಪುರ ಜಿಲ್ಲಾ ರಾಷ್ಟ್ರೀಯ ಬಸವ ಸೇನಾ ಅತ್ಯಂತ ಉಗ್ರವಾಗಿ ಖಂಡಿಸಿದೆ.
ರಾಷ್ಟ್ರೀಯ ಬಸವ ಸೇನಾ ಜಿಲ್ಲಾ ಅಧ್ಯಕ್ಷ ಡಾ. ರವಿಕುಮಾರ ಬಿರಾದಾರ, ಪದಾಧಿಕಾರಿಗಳಾದ ಶಾಂತವೀರ ತಾಲಭಾವಡಿ, ಮಾತೋಶ್ರೀ ಚಂದ್ರಕಲಾ ಗುಣದಾಳ, ನಿಂಗಪ್ಪ ಸಂಗಾಪುರ ಅವರು ಜಂಟಿ ಪತ್ರಿಕಾ ಪ್ರಕಟಣೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಹೇಳಿಕೆಯಿಂದ ಬಸವಾನುಯಾಯಿಗಳಿಗೆ ತೀವ್ರ ನೋವಾಗಿದೆ. ಇತ್ತೀಚೆಗೆ ಬಸವಣ್ಣನವರನ್ನು ರಾಜ್ಯ ಸರಕಾರ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದಾಗಿನಿಂದ ಆರ್.ಎಸ್. ಎಸ್. ಹಾಗೂ ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಕೆಲವು ಲಿಂಗಾಯತ ಸ್ವಾಮಿಗಳು, ರಾಜಕಾರಿಣಿಗಳನ್ನು ಬಳಸಿಕೊಂಡು ‘ವಚನ ದರ್ಶನ’ದಂತಹ ಕಸ ತುಂಬಿದ ಪುಸ್ತಕವನ್ನು ಬಿಡುಗಡೆ ಮಾಡುವುದರ ಮೂಲಕ ಬಸವಾದಿ ಶರಣರ ತತ್ವಕ್ಕೆ ಅಪಚಾರ ಮಾಡುವ ಕೆಟ್ಟ ರೂಢಿ ಮಾಡಿಕೊಂಡಿದ್ದಾರೆ.
ಆರ್.ಎಸ್.ಎಸ್. ನ ಈ ಷಡ್ಯಂತ್ರದ ಮುಂದುವರೆದ ಭಾಗವೇ ಯತ್ನಾಳರ ಈ ಹೇಳಿಕೆ. ಯತ್ನಾಳರು ತಮ್ಮ ಲಿಂಗಾಯತ/ಬಸವ ಸಂಸ್ಕೃತಿಯನ್ನು ಮರೆತು ಮನುವಾದಿ ಆರ್.ಎಸ್.ಎಸ್ ನ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ.
ಬಸವಣ್ಣನವರ ಹೆಸರಿಟ್ಟುಕೊಂಡು ಒಂದು ವಚನ ಕೂಡಾ ಹೇಳಲು ಬಾರದ ಯತ್ನಾಳರು ತಮ್ಮ ರಾಜಕೀಯ ತೆವಲಿಗೆ ಬಸವಣ್ಣನವರನ್ನು ಬಳಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸಿ, ಬಸವಾನುಯಿಯಗಳಲ್ಲಿ ಬೇಷರತ್ ಬಹಿರಂಗ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸದಾ ಯತ್ನಾಳರ ಬೆನ್ನೆಲುಬಾಗಿ ನಿಂತಿರುವ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರುಗಳು ಯತ್ನಾಳರಿಗೆ ಬುದ್ಧಿ ಹೇಳಲಿ ಎಂದು ಆಗ್ರಹಿಸಿದ್ದಾರೆ.
ಹೆಂಡಕುಡುಕರು ಸಹ ಇವನ ರೀತಿ ಮಾತನಾಡಲ್ಲ…ನಾನು ಏನು ಮ್ತನಾಡಿದೆ ಅಂತ ಅವನಿಗೆ ನಾಲಿಗೆ ಮೇಲೆ ಪ್ರಜ್ಞೆಯಿಲ್ಲದೆ ಮಾತನಾಡುತ್ತಾನೆ. ಯಾವಾಗಲೂ ಪ್ರಚಾರದಲ್ಲಿರುವ ಹುಚ್ಚಿನಿಂದ ಈ ರೀತಿ ಮಾತನಾಡುತ್ತಾನೆ..ತನ್ನ ತಾಯಿ ಸಮಾನ ಲಿಂಗಾಯತ ಧರ್ಮ ಅದರ ಬಗ್ಗೆ ಅರಿವಿಲ್ಲದೆ ಹೇಸಿಗೆ ತಿಂದವನಂತೆ ಮಾತನಾಡುತ್ತಾನೆ… ಬಸವಾದಿಶರಣರ ಬಗ್ಗೆ ಹಗುರವಾಗಿ ಮಾತನಾಡಿದರೆ ಬಾಯ ಹುಳ ಬೀಳವೇ ಶಿವನೇ ಎಂದು ಶರಣರ ಮಾತಿದೆ ಆದ್ದರಿಂದ ಇವನು ಮೈ ಮೇಲೆ ಜ್ಞಾನವಿಟ್ಟುಕೊಂಡು ಮಾತನಾಡಬೇಕು
ಇವರನ್ನು ರಾಜಕೀಯವಾಗಿ ಬಹಿಷ್ಕರಿಸಬೇಕು.
Evanege hindu hule ge lingayatharu vote hakeddu shame shame
ಸ್ವಧರ್ಮದ ಅರಿವಿಲ್ಲದ ಅನಾಚಾರಿ . ಹಣೆಯ ಮೇಲೆ ವಿಭೂತಿ ಇಲ್ಲದ ಇವರು ವೈದಿಕ ಗುಲಾಮ ಅಷ್ಟೇ … ಬಸವಾದಿ ಶರಣರ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ ಇವರಿಗೆ ? ಹುಟ್ಟಿದ ಧರ್ಮದ ಬಗ್ಗೆ ಅಭಿಮಾನ ಸ್ವಾಭಿಮಾನ ಅಸ್ಮಿತೆ ಇಲ್ಲದ ಅವಿವೇಕಿ ಅಷ್ಟೇ : ಕತ್ತೆಗೇನು ಗೊತ್ತು ಕಸ್ತೂರಿ ಯ ಕಿಮ್ಮತ್ತು