ರಾಮನಗರ
ಹಾರೋಹಳ್ಳಿ ತಾಲ್ಲೂಕಿನ ದೊಡ್ಡಮರಳವಾಡಿ ಬಸವ ಗುರುಕುಲ ಶಿವಮಠದಲ್ಲಿ ವಚನ ಸಂಕ್ರಾಂತಿ-2025, ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಸಂಸ್ಮರಣೋತ್ಸವ ಮತ್ತು ಗುರು ಮಹಾಲಿಂಗ ನಿಲಯದ ಉದ್ಘಾಟನಾ ಸಮಾರಂಭ ನಡೆಯಿತು.
ದಿವ್ಯಸಾನಿಧ್ಯವನ್ನು ವಹಿಸಿದ್ದ ತುಮಕೂರು ಸಿದ್ದಗಂಗಾಮಠದ ಪೂಜ್ಯ ಶಿವಸಿದ್ದೇಶ್ವರಸ್ವಾಮಿಗಳು ಗುರು ಮಹಾಲಿಂಗ ನಿಲಯವನ್ನು ನೆರವೇರಿಸಿದರು.

ಆರಂಭದಲ್ಲಿ ಮಕ್ಕಳಿಂದ ಷಟಸ್ಥಲ ಧ್ವಜಾರೋಹಣ ನೆರವೇರಿತು. ದೊಡ್ಡಮರಳವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕನಕಪುರ ತಾಲ್ಲೂಕು, ಬೂವಳ್ಳಿ ಗ್ರಾಮದ ಮಕ್ಕಳಿಂದ ಅನುಭವ ಮಂಟಪ, ಕಾಯಕ ದಾಸೋಹ, ಮರಣವೇ ಮಹಾನವಮಿ ಎಂಬ ಕಿರು ನಾಟಕಗಳು ಪ್ರದರ್ಶನಗೊಂಡವು. ಭವಾನಿ ವಲ್ಲಭ ತಂಡದವರಿಂದ ವಚನ ಗಾಯನ, ವಚನ ನೃತ್ಯ, ವಚನ ರೂಪಕಗಳು ನಡೆದವು.
ಸಾಂಸ್ಕೃತಿಕ ಕಾರ್ಯಕ್ರಮ, ವಚನ ಕಂಠಪಾಠ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ನಡೆಯಿತು. ವಚನ ಚಿತ್ರಗಳ ಪ್ರದರ್ಶನ ಸಹ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನ ನಡೆಯಿತು.
ಸಾನಿಧ್ಯವನ್ನು ಮಹಾಲಿಂಗಸ್ವಾಮಿಗಳು ಕಂಚುಗಲ್ ಬಂಡೆಮಠ, ಚನ್ನಬಸವ ಸ್ವಾಮಿಗಳು ಚಾಮರಾಜನಗರ, ನಂಜುಂಡಸ್ವಾಮಿಗಳು ಬೆಂಗಳೂರು, ಚನ್ನಬಸವಸ್ವಾಮಿಗಳು ಕನಕಪುರ, ಚಂದ್ರಶೇಖರಸ್ವಾಮಿಗಳು ಬಿ.ಜಿ. ಪುರ ವಹಿಸಿದ್ದರು. ನೇತೃತ್ವವನ್ನು ಮೃತ್ಯುಂಜಯಸ್ವಾಮಿಗಳು, ಬಸವ ಗುರುಕುಲ ಶಿವಮಠ ದೊಡ್ಡ ಮರಳವಾಡಿ, ಇವರು ವಹಿಸಿದ್ದರು.

ಸಮ್ಮುಖವನ್ನು ಶಿವಲಿಂಗ ಸ್ವಾಮಿಗಳು ಗವಿಮಠ ಬಸವಲಿಂಗ ಸ್ವಾಮಿಗಳು ತೋಟಹಳ್ಳಿ ಶಿವಾನಂದ ಶಿವಾಚಾರ್ಯಸ್ವಾಮಿಗಳು ಚಿಕ್ಕಕಲ್ಲು ಬಾಳು, ಗುರುಪಾದ ಶಿವಾಚಾರ್ಯಸ್ವಾಮಿಗಳು ಮುಳ್ಳಹಳ್ಳಿ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಪ್ರಭುಕಿರೀಟಸ್ವಾಮಿಗಳು ಮಾತನಾಡಿದರು. ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ. ವಿ. ನಾಗರಾಜಮೂರ್ತಿ ಮಾಡಿ ಮಾತನಾಡಿದರು. ಅತಿಥಿಗಳಾಗಿ ಶ್ರೀಮತಿ ಪ್ರೇಮಸುಂದರ್, ಶ್ರೀಮತಿ ಶೈಲಾ ಸೋಮಣ್ಣ, ಬಿ. ನಾಗರಾಜು, ಶ್ರೀ ಮುರಳಿ, ಶ್ರೀಕಂಠು, ಹರೀಶಕುಮಾರ ಎಚ್.ಎಸ್, ಎಂ.ಕೆ. ಜಯಶಂಕರ, ಜಗನ್ನಾಥ, ಪುಟ್ಟರಾಜು ಮತ್ತಿತರರು ಭಾಗವಹಿಸಿದ್ದರು.





ಕನಕಪುರ ತಾಲೂಕಿನ ದೊಡ್ಡಮರಳ ವಾಡಿ ಗ್ರಾಮದ ಶ್ರೀ ಬಸವ ಗುರುಕುಲ ಮಠದ ಆವರಣದಲ್ಲಿ ಹಿರಿಯ ಶ್ರೀಗಳಾದ ಶ್ರೀ ಮೃತ್ಯುಂಜಯ ಸ್ವಾಮೀಜಿ ಅವರ ಇಚ್ಛಾ ಶಕ್ತಿ ಮತ್ತು ಕಿರಿಯ ಶ್ರೀಗಳಾದ ಶ್ರೀ ಪ್ರಭು ಕಿರೀಟ ಸ್ವಾಮೀಜಿ ಅವರ ಜಂಟಿ ಪ್ರಯತ್ನ ಸಿದ್ದಾಗಂಗಾ ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳು ಲಿಂಗೈಕ್ಯ ಸಂಸ್ಮರಣೆ ಪ್ರಯುಕ್ತ ಹಮ್ಮಿಕೊಂಡ ವಚನ ಸಂಕ್ರಾಂತಿ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂತು. ವಿಶ್ವಗುರು ಬಸವಣ್ಣ ಮತ್ತು ಶರಣರ ಬಗ್ಗೆ ಅರಿವು ಮೂಡಿಸಲಾಯಿತು. ಸ್ವಾಮೀಜಿ ಗಳಿಗೆ ಶರಣು ಶರಣಾರ್ಥಿ.
ದಕ್ಷಿಣ ಕನಾ೯ಟಕದ ಕನಕಪೂರ ಜಿಲ್ಲೆ ಹಾರೊಹಳ್ಳಿಯಲ್ಲಿ ಬಸವ ತತ್ವವನ್ನು ವಚನ ಸಂಕ್ರಾತಿಯ ಮೂಲಕ ಅಲ್ಲಿಯ ಲಿಂಗಾಯತರಲ್ಲಿ ಇದು ನಿಜವಾಗಿಯೂ ಮಾಡಬೇಕಾದ ಆಚರಣೆ ಎಂದು ಕಾಯ೯ಕ್ರಮವನ್ನು ರೂಪಿಸುತ್ತಿರು ಹಿರಿಯ ಕಿರಿಯ ಶ್ರೀಗಳು ಅಭಿನಂದನೆಗಳು🙏🙏