ಮರಿಯಾಲ ಬಸವ ಮಹಾಮನೆಯಲ್ಲಿ ವಚನ ಕಲ್ಯಾಣ ಮಹೋತ್ಸವ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ

ಚಾಮರಾಜನಗರ

ಚಾಮರಾಜನಗರ ಜಿಲ್ಲೆಯ ಮರಿಯಾಲ ಬಸವ ಮಹಾಮನೆಯಲ್ಲಿ ರವಿವಾರ ವಚನ ಕಲ್ಯಾಣ ಮಹೋತ್ಸವ ಜರುಗಿತು.

ಮುಕ್ಕಡಹಳ್ಳಿಯ ರೇವಮ್ಮ ಮತ್ತು ಕೆಂಪಪ್ಪ ಇವರ ಮಗ ನಂಜುಂಡಸ್ವಾಮಿ ಕೆ ಅವರ ವಿವಾಹವು ನಂಜನಗೂಡಿನ ಇಂದ್ರಮ್ಮ ಮತ್ತು ದೊರೆಸ್ವಮಿ ಅವರ ಮಗಳು ಸಂಧ್ಯರಾಣಿ ಅವರ ಜೊತೆಗೆ ವಚನ ಕಲ್ಯಾಣ ಜರುಗಿತು.

ಕಂಜಿಹುಂಡಿ ಗುರುಪ್ರಸಾದ್ ಮತ್ತು ತಂಡದವರ ವಚನಧ್ವಜಗೀತೆ ಜೊತೆಗೆ ಶ್ರೀ ಇಮ್ಮಡಿ ಮುರುಗರಾಜೇಂದ್ರ ಸ್ವಾಮಿಗಳ ಸಮ್ಮುಖದಲ್ಲಿ ವಧು ವರಗಳು ಷಟ್ಸ್ಥಲ ಧ್ವಜಾರೋಹಣ ಮಾಡಿದರು. ನಂತರ ಸ್ವಾಮೀಜಿಯವರು ವಧು ವರರೊಂದಿಗೆ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.

ವಚನಮಾಂಗಲ್ಯಮೂರ್ತಿಗಳಾದ ಮೇಲಾಜಿಪುರದ ಶಿವಕುಮಾರ ಸ್ವಾಮೀಜಿ ಮತ್ತು ಕಾಳನಹುಂಡಿಯ ಕುಮಾರಸ್ವಾಮಿ ಬಸವಾದಿ ಶರಣರ ಆಶಯದಂತೆ ಮಾಂಗಲ್ಯಧಾರಣೆ ಮತ್ತು ರುದ್ರಾಕ್ಷಿ ಧಾರಣೆಯನ್ನು ಮಾಡಿಸುವ ಮೂಲಕ ವಚನ ಕಲ್ಯಾಣ ನಡೆಸಿಕೊಟ್ಟರು. ನವದಂಪತಿಗಳಿಗೆ ನೆರೆದಿರುವ ಎಲ್ಲರೂ ಪುಷ್ಪಾರ್ಚನೆ ಮಾಡಿದರು.

ಗಟ್ಟವಾಡಿಪುರದ ಭರತ್ ಕುಮಾರ್ ಸ್ವಾಗತ ಮಾಡಿದರು, ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು ಲಿಂಗಾಯತರ ಮದುವೆಗಳು ಸರಳವಾಗಿ ಜರುಗಬೇಕು, ಮದುವೆಗಾಗಿ ಸಾಲ ಮಾಡಬಾರದು, ಅಸ್ತಿ ಮಾರಬಾರದೆಂದು ನುಡಿದರು, ಮೇಲಾಜಿಪುರ ಶ್ರೀಶಿವಕುಮಾರ ಸ್ವಾಮಿಗಳು ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಬಗ್ಗೆ ವಿವರವಾಗಿ ನುಡಿದರು.

ಶ್ರೀಚನ್ನಬಸವಸ್ವಾಮಿಗಳು, ಚಾಮರಾಜನಗರ, ಶ್ರೀಚಂದ್ರಶೇಖರ ಸ್ವಾಮಿಗಳು, ಗಟ್ಟವಾಡಿಪುರ , ಉಪಸ್ಥಿತರಿದ್ದರು. ಬಂಧು ಮಿತ್ರರು ಹಾಗೂ ನಂಜನಗೂಡು ಮತ್ತು ಚಾಮರಾಜನಗರದ ವಿಶ್ವಬಸವಸೇನೆ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

Share This Article
3 Comments
  • ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ವಚನ ಕಲ್ಯಾಣ ಮಹೋತ್ಸವಗಳು ಜರುಗುತ್ತಿರುವುದು ಸಂತೋಷದ ವಿಷಯ. ಮರಿಯಾಲ ಮಠದಲ್ಲಿ ಸಭಾ ಮಂಟಪದಲ್ಲಿ ಮತ್ತು ಪ್ರಸಾದ ನಿಲಯದಲ್ಲಿ ವಚನಗಳೊಂದಿಗೆ ಶರಣರ ಭಾವಚಿತ್ರಗಳನೊಳಗೊಂಡ ಉತ್ತಮ ವಾತಾವರಣವಿರುದನ್ನ ನೋಡಿ ಖುಷಿಯಾಯಿತು. ಶರಣ ದಂಪತಿಗಳಿಗೆ ಕಲ್ಯಾಣ (ಶುಭ)ವಾಗಲಿ. ನಡೆಸಿಕೊಟ್ಟ ಮರಿಯಾಲ ಶ್ರೀಗಳು,ಕಾಳನಹುಂಡಿ,ಮೇಲಾಜಿಪುರ,ಚಾಮರಾಜನಗರ,ಗಟ್ಟವಾಡಿಪುರದ ಶ್ರೀಗಳವರಿಗೆ ಕೋಟಿ ಶರಣು. ಇಂತಹ ಉತ್ತಮ ಮಾಹಿತಿ ಹಚ್ಚುತ್ತಿರುವ ಬಸವ ಮೀಡಿಯಾಕ್ಕೆ ಶರಣು

  • ಈ ರೀತಿಯ ವಚನ ಮಾಂಗಲ್ಯಗಳು ನಡೆಯುತ್ತಿರುವುದು ಸಂತೋಷದಾಯಕ ವಿಚಾರ ಹಾಗೆ ಇನ್ನು ಎಲ್ಲಾ ಕಡೆಯೂ ವಚನ ಮಾಂಗಲ್ಯ ಗುರು ಪ್ರವೇಶ ವಚನನಾಮಕರಣಗಳು ಹೆಚ್ಚಾಗಲಿ ಶರಣರ ಆಶಯಗಳು ಕೈಗೂಡಲಿ
    ಸಿದ್ದೇಶ್ ಅಣ್ಣನವರಿಗೆ ಅಭಿನಂದನೆಗಳು

Leave a Reply

Your email address will not be published. Required fields are marked *