ಚಾಮರಾಜನಗರ
ಚಾಮರಾಜನಗರ ಜಿಲ್ಲೆಯ ಮರಿಯಾಲ ಗ್ರಾಮದ ಶ್ರೀ ಬಸವ ಮಹಾಮನೆಯಲ್ಲಿ ರವಿವಾರ ವಚನ ಕಲ್ಯಾಣ ಮಹೋತ್ಸವ ಜರುಗಿತು.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಮಲ್ಲಮ್ಮ ಮತ್ತು ಎಚ್ ಬಿ ಮಹೇಶಪ್ಪ ಅವರ ಮಗಳು ಡಾಕ್ಟರ್ ಎಚ್ ಬಿ ಮಹೇಶ್ವರಿಯ ವಿವಾಹವು ಕೆ ಆರ್ ನಗರದ ರಾಜೇಶ್ವರಿ ಮತ್ತು ಲೇಟ್ ನಾಗೇಂದ್ರ ಅವರ ಪುತ್ರ ವಕೀಲರಾದ ಎಚ್ ಎನ್ ದಿವ್ಯತೇಜ್ ರವರ ಜೊತೆಗೆ ಬಸವಾದಿ ಶರಣರ ಆಶಯದಂತೆ ವಚನ ಕಲ್ಯಾಣ ನಡೆಯಿತು.
ಬೆಳಗ್ಗೆ ರಾಮಸಮುದ್ರದ ಪ್ರಸನ್ನ ಮತ್ತು ತಂಡದವರ ವಚನಧ್ವಜಗೀತೆ ಜೊತೆ ಮರಿಯಾಲದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು ವಿಶ್ವ ಗುರು ಬಸವಣ್ಣನವರ ಭಾವಚಿತ್ರಕ್ಕೆ ನಮಿಸಿ ಷಟ್ಸ್ಥಲ ಧ್ವಜಾರೋಹಣ ಮಾಡಿದರು.
ನಂತರ ಶ್ರೀ ಇಮ್ಮಡಿ ಮುರುಗರಾಜೇಂದ್ರ ಸ್ವಾಮಿಗಳು ಮತ್ತು ವಧು ವರರು ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು. ಶ್ರೀಗಳು ಇಷ್ಟಲಿಂಗ ಹಾಗೂ ವಚನ ಕಲ್ಯಾಣದಬಗ್ಗೆ ವಿವರವಾಗಿ ತಿಳಿಸಿದರು.
ಬಸವಾದಿ ಶರಣರ ಆಶಯದಂತೆ ಗಂಡು ಹೆಣ್ಣಿಗೆ ಮಾಂಗಲ್ಯಧಾರಣೆಯನ್ನು ಹಾಗೂ ಮದುವೆಯ ಹೆಣ್ಣು ಗಂಡಿಗೆ ರುದ್ರಾಕ್ಷಿ ಧಾರಣೆಯನ್ನು ಮಾಡಿಸುವ ಮೂಲಕ ವಚನ ಕಲ್ಯಾಣ ಜರುಗಿತು. ನವದಂಪತಿಗಳಿಗೆ ನೆರೆದಿರುವ ಎಲ್ಲರೂ ಪುಷ್ಪಾರ್ಚನೆ ಮಾಡಿದರು
ಗೌಡಗೆರೆ ಪೂಜ್ಯರಾದ ನಟರಾಜ ಸ್ವಾಮಿಗಳು, ಆದ್ಯಮಠದ ಪೂಜ್ಯರಾದ ಬಸವರಾಜ ಸ್ವಾಮಿಗಳು, ಕಾಳನಹುಂಡಿ ಪೂಜ್ಯರಾದ ಶಿವಕುಮಾರ ಸ್ವಾಮಿಗಳು,ಮೇಲಾಜಿಪುರ ಬಸವಾನುಭವಮಂಟಪದ ಶಿವಬಸವಸ್ವಾಮಿಗಳು ಹಾಗೂ ಬಂದು ಮಿತ್ರರು ಹಾಜರಾಗಿದ್ದರು.
ಇದು ಮರಿಯಾಲ ಮಠದಲ್ಲಿ ನಡೆದಿರುವ ವಚನ ಕಲ್ಯಾಣ ಮಹೋತ್ಸವ. ಮರಿಯಾಲ ಮಠದ ಈಗಿನ ಶ್ರೀಗಳು ಹಲವು ವಚನ ಕಲ್ಯಾಣ ಮಹೋತ್ಸವವನ್ನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಶರಣ ಆಶಯದಂತೆ ವಚನಾಧರಿತ ಕಲ್ಯಾಣ ವಾರ್ಷಿಕೋತ್ಸವಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಕಲ್ಯಾಣ ಮಾಡಿಕೊಂಡ ಹುಡುಗ ಮತ್ತು ಹುಡುಗಿಗೆ ಬಸವಾದಿಪ್ರಮಥರ ಆಶೀರ್ವಾದವಿರಲಿ. ಈ ಕಲ್ಯಾಣ ವಾರ್ಷಿಕೋತ್ಸವದಲ್ಲಿ ಭಾಗಿಯಾದ ಎಲ್ಲ ಶ್ರೀಗಳಿಗೂ ಹಾಗು ಹಾಜರಿದ್ದವರಿಗೂ ಶರಣು ಸಮರ್ಪಣೆಗಳು
ಬಸವ ತತ್ವ ಪಾಲಿಸುವವರಿಗೆ ಇದು ಮಾದರಿಯಾಗಲಿ.
ಶರಣು