‘ಮಾನಸಿಕ ಅನಾರೋಗ್ಯಕ್ಕೆ ಪರಿಹಾರ ನೀಡಿದ ಶರಣರು’

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ:

“ದೇಹದ ಅನಾರೋಗ್ಯಕ್ಕೆ ಔಷಧಿ ನೀಡುವುದು ಸಾಧ್ಯವಾದರೂ, ಮನಸ್ಸಿನ ಗಾಯಗಳಿಗೆ ಮದ್ದು ನೀಡುವುದು ಕಷ್ಟ. ಆದರೆ ಭಕ್ತಿ, ನಿಷ್ಠೆ ಹಾಗೂ ಸಾಧನೆಯ ಶಿವಯೋಗದ ಮೂಲಕ ಮಾನಸಿಕ ಅನಾರೋಗ್ಯಕ್ಕೆ ಪರಿಹಾರ ನೀಡಿದವರು ಶರಣರು”ಎಂದು ಹಾವೇರಿ ಬಸವ ಬಳಗದ ಕಾರ್ಯದರ್ಶಿ ಜಗದೀಶ ಹತ್ತಿಕೋಟಿ ಅವರು ಹೇಳಿದರು.

ವಿನಾಯಕ ನಗರ ನಾಗರಿಕ ವೇದಿಕೆ ವತಿಯಿಂದ ವಿನಾಯಕ ನಗರದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಕಾರ್ಯಕ್ರಮದಲ್ಲಿ“ದಾಸರು ಹಾಗೂ ಶರಣರ ಸಾಹಿತ್ಯದಲ್ಲಿ ಆರೋಗ್ಯ ಸೂತ್ರಗಳು”ಎಂಬ ವಿಷಯದ ಕುರಿತು ಮಾತನಾಡಿದರು.

ನಾವು ಸೇವಿಸುವ ಆಹಾರವೇ ನಮ್ಮ ಜೀವನದ ಆಧಾರವಾದರೂ, ಅತಿಯಾದ ಆಹಾರ ಸೇವನೆಯೂ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ದೇಹ ಮತ್ತು ಮನಸ್ಸಿಗೆ ರೋಗ ಬಂದಾಗ ದಾಸರು ಹಾಗೂ ಶರಣರು ತಮ್ಮ ಸಾಹಿತ್ಯದಲ್ಲಿ ಅರಿವು ಮತ್ತು ಜೀವನೋತ್ಸಾಹದ ಮೂಲಕ ಪರಿಹಾರ ಮಾರ್ಗಗಳನ್ನು ಸೂಚಿಸಿದ್ದಾರೆ ಎಂದು ಹೇಳಿ, ಅನೇಕ ವಚನಗಳ ಮೂಲಕ ವಿವರಣೆ ನೀಡಿದರು.

ಶಿಕ್ಷಕಿ ಸುಧಾಬಾಯಿ ಮಾತನಾಡಿ, “ಮಾನವನ ಬದುಕಿನಲ್ಲಿ ಆರೋಗ್ಯ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ದಾಸರು ಹಾಗೂ ಶರಣರು ಮನಸ್ಸು–ಅಂತರಂಗದ ಸಮತೋಲನ ಸಾಧಿಸುವ ಮೂಲಕ ತಮ್ಮ ಸಾಹಿತ್ಯದಲ್ಲಿ ಆರೋಗ್ಯ ಸೂತ್ರಗಳನ್ನು ನೀಡಿದ್ದಾರೆ. ಅವುಗಳನ್ನು ಅರಿತು ಅನುಸರಿಸುವುದು ಇಂದಿನ ಅವಶ್ಯಕತೆ”ಎಂದು ತಿಳಿಸಿದರು.

ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಈಶ್ವರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಸಜ್ಜನರ ಸಂಘದಿಂದ ಸತ್ಕಾರ್ಯಗಳಿಗೆ ಪ್ರೇರಣೆ ಲಭಿಸುವುದು. ಸಹಾಯ ಮಾಡುವ ಶಕ್ತಿ ಇರುವಾಗಲೇ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು”ಎಂದರು.

ಈ ಸಂದರ್ಭದಲ್ಲಿ ಈಶ್ವರ ಅವರ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಅಧ್ಯಕ್ಷ ನಿಜಲಿಂಗವ್ವ ಕಾಳೆ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡಬೇಕು. ಇದು ವೇದಿಕೆಯ ಪ್ರಮುಖ ಕಾರ್ಯವಾಗಬೇಕು ಎಂದರು. ಸಾಹಿತಿ ಹನುಮಂತಗೌಡ ಗೊಲ್ಲರ ಸಹ ಮಾತನಾಡಿದರು.

ಎಸ್.ಎಂ. ಬಡಿಗೇರ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಬಸವರಾಜ ಬೆಲ್ಲದ ವಂದನಾರ್ಪಣೆ ಮಾಡಿದರು.

ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ಶಿವಬಸಪ್ಪ ಮುದ್ದಿ, ಉಳಿವೆಪ್ಪ ಪಂಪಣ್ಣವರ, ಹನುಮಂತಪ್ಪ, ಶಿವಯೋಗಿ ಬೆನ್ನೂರ, ಮುರಿಗಿ ಕಡೇಕೊಪ್ಪ, ಟಿ.ಜಿ. ಚನ್ನವೀರಪ್ಪನವರ, ಶಶಿಧರ ಕಾರಿಗಿ, ಎಸ್.ಎ. ಗಂಜಿಗಟ್ಟಿ, ಅಜ್ಜಣ್ಣನವರ, ಭರಮಗೌಡ, ಬಿ. ಚೆನ್ನಪೀರಪ್ಪ, ಶಾಂತಕ್ಕ ಉಳ್ಳಾಗಡ್ಡಿ, ಅನಿತಾ ಹಿಂಚಿಗೇರಿ, ಆಶಾ ತಿಮ್ಮಾಪುರ, ಭಾರತೀ ಶೆಟ್ಟರ, ರತ್ನಾ ನಾಯಕ, ಕಮಲಮ್ಮ ಚನ್ನವೀರಪ್ಪನವರ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *