ಸಾರ್ವಜನಿಕ ಬದುಕಿನಲ್ಲಿರುವ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ಇದೇ ಮೊದಲಲ್ಲ.
ಕಲಬುರ್ಗಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲವಾಗಿ ಮಾತನಾಡಿರುವ ಬಿಜೆಪಿ ನಾಯಕ ಸಿ ಟಿ ರವಿ ಅವರನ್ನು ಜನವಾದಿ ಮಹಿಳಾ ಸಂಘಟನೆಯ ಪ್ರೊ ಮೀನಾಕ್ಷಿ ಬಾಳಿ ಖಂಡಿಸಿದ್ದಾರೆ.
ಮನುವಾದಿ RSSಗರಿಗೆ ಹೆಣ್ಣು ಮಕ್ಕಳ ಬಗ್ಗೆ ಗೌರವವಿಲ್ಲ. ಇದಕ್ಕೆ ಸಿ ಟಿ ರವಿಯೇ ಸಾಕ್ಷಿ. ಸಾರ್ವಜನಿಕ ಬದುಕಿನಲ್ಲಿರುವ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸೋನಿಯಾ ಗಾಂಧಿ ಅವರ ಬಗ್ಗೆ ಕೂಡ ಇಂತಹ ಕೆಟ್ಟ ಪದಗಳನ್ನು ಬಳಸಿದ್ದ ಇತಿಹಾಸ RSS ಬಿಜೆಪಿ ಅವರಿಗೆ ಇದೆ.