ಮಂಡ್ಯ
ಕನ್ನಡ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿಯು ಭಾನುವಾರ ರಾತ್ರಿ ಊಟಕ್ಕೆ ಸಹಸ್ರಾರು ಮೊಟ್ಟೆಗಳನ್ನು ವಿತರಣೆ ಮಾಡಿತು.
ಇದರಿಂದ ಸಸ್ಯಾಹಾರವನ್ನು ಹೇರಿಕೆ ಮಾಡಿದ್ದರ ವಿರುದ್ದ ನಾವು ನಡೆಸಿದ ಹೋರಾಟಕ್ಕೆ ವಿಜಯ ಸಿಕ್ಕಿದೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.
ಮಾಂಸಹಾರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರು ಕೊನೆ ದಿನ ಮೊಟ್ಟೆ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಕೊನೆಯ ದಿನ ರಾತ್ರಿ ಮೊಟ್ಟೆಗಳನ್ನು ವಿತರಿಸಲಾಗಿದೆ.