ಆಸ್ತಿ ಮಾಡಿಲ್ಲ, ಕೂಡಲಸಂಗಮದಲ್ಲಿಯೇ ಮತ್ತೊಂದು ಮಠ: ಮೃತ್ಯುಂಜಯ ಶ್ರೀ

ಕೂಡಲಸಂಗಮ

ನಮ್ಮನ್ನು ಉಚ್ಚಾಟನೆ ಮಾಡೋ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಾವು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇವೆ. ಪೀಠಕ್ಕೂ ಟ್ರಸ್ಟಗೂ ಯಾವುದೇ ಸಂಬಂಧ ಇಲ್ಲ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಸಂಗಮೇಶ್ವರ ದೇವಾಲಯ ಆವರಣದಲ್ಲಿ ನಡೆದ ಖಂಡನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಧರ್ಮಗುರುಗಳನ್ನು ಉಚ್ಛಾಟನೆ ಮಾಡುವ ಅಧಿಕಾರ ಇರೋದು ಕೇವಲ ದೇವರಿಗೆ, ದೇವರ ಸ್ವರೂಪವಾದ ಭಕ್ತರಿಗೆ ಮಾತ್ರ. ಉಚ್ಚಾಟನೆ ಏಕಪಕ್ಷೀಯ, ಕಾನೂನು ಬಾಹೀರವಾಗಿದೆ.

ಪೀಠವನ್ನು ಯಾವುದೇ ಕಲ್ಲು ಮಣ್ಣಿನಲ್ಲಿ ಕಟ್ಟಿಲ್ಲ. ಭಕ್ತರ ಹೃದಯದಲ್ಲಿ ಕಟ್ಟಿದ್ದೇನೆ. ಭಕ್ತರ ತೀರ್ಮಾನವೇ ಅಂತಿಮ ತೀರ್ಮಾನ. ಮೂರ್ನಾಲ್ಕು ದಿನದಲ್ಲಿ ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಸಭೆಯನ್ನು ಕರೆಯುತ್ತೇನೆ, ಸಭೆಯಲ್ಲಿ ಭಕ್ತರು ಏನು ಹೇಳ್ತಾರೆ ಹಾಗೆ ಮಾಡ್ತಿನಿ. ಕೂಡಲಸಂಗಮದಲ್ಲಿಯೇ ಮತ್ತೊಂದು ಮಠ ಕಟ್ಟುವ ವಿಚಾರ ಹೊಂದಿದ್ದೇವೆ.

ಪಾದಯಾತ್ರೆ ಶುರುವಾದಾಗಿನಿಂದ ಇಂತ ನೂರಾರು ಷಡ್ಯಂತ್ರ ಮಾಡುತ್ತಲೇ ಬಂದಿದ್ದಾರೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಪೀಠವನ್ನು ಭಕ್ತರು ಎಲ್ಲಿ ತೋರಿಸುತ್ತಾರೊ ಅಲ್ಲಿ ಆರಂಭಿಸುತ್ತೇನೆ ಎಂದರು.

ಕೂಡಲಸಂಗಮದಲ್ಲಿ ೧೩ ಗುಂಟೆ, ದಾವಣಗೆರೆಯಲ್ಲಿ ಭಕ್ತರು ಭೂಮಿ ದಾನ ಮಾಡಿದ್ದಾರೆ. ಅಲ್ಲಿ ನಾನು ಯಾವ ಚಟುವಟಿಕೆ ಮಾಡಿಲ್ಲ. ಇವತ್ತಿನವರೆಗೆ ಭಕ್ತರ ಕಾಣಿಕೆ, ಮಠದ ಆಸ್ತಿಯಿಂದ ಯಾವ ಆಸ್ತಿ ಮಾಡಿಲ್ಲ. ಸುಮ್ಮನೆ ತೇಜೋವಧೆ ಮಾಡುವ ಕೆಲಸ ಮಾಡಬಾರದು. ಈಗ ಆರ್ಟಿಪಿಸಿಯಲ್ ಇಂಟೆಲಿಜಿನ್ಸ್ ಮೂಲಕ ಏನಾದರೂ ಕೃತ್ಯ ಮಾಡಿದರು ಅದನ್ನು ಯಾವ ಭಕ್ತರು ನಂಬೋದಿಲ್ಲ. ಜನರಿಗೆ ಸತ್ಯ ಏನು ಅಂತ ಗೊತ್ತಿದೆ. ಏನೆ ಬಂದರೂ ಗಟ್ಟಿಯಾಗಿ ಎದುರಿಸುವ ಕೆಲಸ ಮಾಡುತ್ತೇನೆ.

೨ಎ ಮೀಸಲಾತಿ ಹೋರಾಟಕ್ಕೆ ತಾಂತ್ರಿಕ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಪಂಚಮಸಾಲಿ ವಕೀಲರ ಪರಿಷತ್ತು, ಸಮಾಜ ಬಾಂಧವರ ಬಹುಮತದ ಮೆರೆಗೆ ಇಂದಿನಿಂದ ಆರಂಭವಾದ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮಾಜ ಭಾಂದವರು ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಬರೆಸಲು ತಿಳಿಸಿದೆ ಎಂದು ಸ್ವಾಮೀಜಿ ಹೇಳಿದರು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೂಡಲಸಂಗಮ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಶ್ರೀಗಳನ್ನು ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸ್ವಾಗತಿಸಿದರು. ಜಯಘೋಷಗಳೊಂದಿಗೆ ಕಾಲನ್ನಡಿಗೆ ಮೂಲಕ ಸಂಗಮೇಶ್ವರ ದೇವಾಲಯಕ್ಕೆ ಹೋಗಿ ದೇವಾಲಯ ಆವರಣದ ನದಿಯ ದಡದ ಆಲದ ಮರದ ಕೆಳಗೆ ಸಭೆಯನ್ನು ಮಾಡಿದರು.

ಸಭೆಯಲ್ಲಿ ಸಮಾಜದ ಮುಖಂಡರಾದ ಬಸವರಾಜ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ಕಲಬುರ್ಗಿಯ ಮಲ್ಲನಗೌಡ ಪಾಟೀಲ, ವಿಜಯಪುರ ರುದ್ರಗೌಡ ಪಾಟೀಲ, ಬಾಗಲಕೋಟೆಯ ಧರಿಯಪ್ಪ ಸಾಂಗ್ಲೀಕರ್ ಮುಂತಾದವರು ಇದ್ದರು.

ಖಂಡನಾ ಸಭೆ ನಡೆದಾಗ ಸ್ವಾಮೀಜಿ ಕಣ್ಣಲ್ಲಿ ಜಿನುಗಿದ ಕಣ್ಣಿರು, ಭಾವುಕರಾಗಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಪ್ರವೇಶ ದ್ವಾರದಲ್ಲಿಯೇ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ಯಾರು ಹೊಗದಂತೆ ಸಿಬ್ಬಂದಿಯನ್ನು ನಿಯೋಜಿಸಿದ್ದರು, ಡಿಆರ್ ವ್ಯಾನ್ ಇತ್ತು. ಖಂಡನಾ ಸಭೆ ನಡೆದಾಗ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದರು, ಮಂಡಳಿಯ ಆಯುಕ್ತರು, ಸಿಬ್ಬಂದಿಯವರು ದೂರದಿಂದಲ್ಲೆ ವಿಕ್ಷಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *