ಮುದಗಲ್ಲ
ಪಟ್ಟಣದ ಶ್ರೀ ವಿಜಯ ಮಾಹಾಂತೇಶ್ವರ ಶಾಖಾ ಮಠದಲ್ಲಿ ಶುಕ್ರವಾರ ಬಸವ ಸಂಸ್ಕೃತಿ ಅಭಿಯಾನದ ಸಭೆ ನಡೆಯಿತು.
ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಸೆಪ್ಟೆಂಬರ್ 5 ರಂದು ನಡೆಯುವ ಅಭಿಯಾನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಲಾಯಿತು. ಸಭೆಯ ಸಾನಿಧ್ಯವನ್ನು ಲಿಂಗಸುಗೂರು ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿ ಮಾತನಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪಿ. ರುದ್ರಪ್ಪ ಅವರು ಅಭಿಯಾನದ ಮಹತ್ವ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಅಭಿಯಾನದ ಪೋಸ್ಟರಗಳನ್ನು ಪ್ರದರ್ಶಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಮುದಗಲ್ಲಿನ ಶರಣರು ಪ್ರತಿಕ್ರಿಯಿಸಿ, ಅಭಿಯಾನದಲ್ಲಿ ತನು ಮನ ಧನದಿಂದ ಭಾಗವಹಿಸಿ ಯಶಸ್ವಿಗೊಳಿಸುತ್ತೇವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಂಧನೂರು, ಲಿಂಗಸುಗೂರಿನ ಪ್ರಮುಖರಾದ ಶಿವಪ್ಪ ಸಕ್ರಿ, ಮಹಾಂತೇಶ ಸಕ್ರಿ, ಶರಣಬಸವ ಸಜ್ಜನ, ಶಿವಾನಂದ ಪಾಟೀಲ ಮತ್ತಿತರರು ಭಾಗವಹಿಸಿದ್ದರು.