ಮುಂಡರಗಿ ಮಠದಲ್ಲಿ ಮಕ್ಕಳಿಗೆ ಹಾಲು ಉಣಿಸಿ ಬಸವ ಪಂಚಮಿ ಆಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಮುಂಡರಗಿ

ಶ್ರೀ ಜಗದ್ಗುರು ತೊಂಟದಾರ್ಯ ಮಠದಲ್ಲಿ ಮಕ್ಕಳಿಗೆ ಹಾಲು ಉಣಿಸಿ ‘ಬಸವ ಪಂಚಮಿ’ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶರಣ ಪಾಲಾಕ್ಷಿ ಗಣದಿನ್ನಿ ಮಾತನಾಡಿ, ಹಾಲು ಒಂದು ಪರಿಪೂರ್ಣ ಶಕ್ತಿಯುತ ಆಹಾರ. ಪಂಚಮಿ ಹಬ್ಬದ ಸಂದರ್ಭದಲ್ಲಿ ಮೌಢ್ಯತೆಗೆ ಬಲಿಯಾಗಿ ನಾಡಿನ ಲಕ್ಷಾಂತರ ಲೀಟರ ಹಾಲು ಮಣ್ಣು ಪಾಲಾಗುತ್ತದೆ. ಅದೇ ಹಾಲನ್ನು ಹಸಿದ ಅವಶ್ಯಕತೆ ಇರುವ ಮಕ್ಕಳಿಗೆ ನೀಡುವದರಿಂದ ಸಾರ್ಥಕತೆ ಪಡೆಯುತ್ತದೆ, ಮಕ್ಕಳ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ. ಹಸುಗಳು ಹೊಲಸು (ಮೇವು) ತಿಂದು ಹಾಲು ಕೊಡುತ್ತವೆ, ಮಾನವರು ಹಾಲನ್ನು ಈ ಸಂದರ್ಭದಲ್ಲಿ ಹೊಲಸು ಮಾಡುತ್ತಾರೆ. ಹಾಲಿನ ದುರ್ಬಳಕೆ ನಿಂತು ಅದು ಸದ್ಭಳಕೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಶಿವಯೋಗಿ ಗಡ್ಡದ, ದೇವು ಹಡಪದ, ಶಿವು ವಾಲಿಕಾರ, ಬಸಯ್ಯ ಗಿಂಡಿಮಠ, ಅಶೋಕ ಅಣ್ಣಿಗೇರಿ, ಪವನ ಚೋಪ್ರಾ, ಸುಕನ್ಯಾ ಕಬ್ಬುರಮಠ, ಶಿವಗಂಗಾ ನವಲಗುಂದ, ಅನ್ನಕ್ಕ ಸಜ್ಜನರ, ಶಾಂತಾ ಕುಬಸದ, ಪ್ರಭಾವತಿ ಕುಬಸದ, ಪುಷ್ಪ ಸಿರಿ, ಗಾಯತ್ರಿ ಹಿರೇಮಠ, ಗೀತಾ ಬಣಕಾರ, ಮಂಗಳಾ ಖರ್ಜಗಿ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
1 Comment
  • ಒಳ್ಳೆ ಕಾರ್ಯಕ್ರಮವಾಗಿದೆ… ಇದೇ ರೀತಿಯ ಪಂಚಮಿ ಹಬ್ಬವು ಎಲ್ಲಕಡೆಗೂ ಬೆಳೆದು ಮುಂದುವರೆಸಿದರೆ ಬಸವಸಂಸ್ಕೃತಿ ಬೆಳಿಸಬಹದು… ಧನ್ಯವಾದಗಳು…

Leave a Reply

Your email address will not be published. Required fields are marked *