ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩
ವಿಷಯ – ಷಟ್ ಸ್ಥಲಗಳು
ಶರಣ ಬಸವರಾಜಪ್ಪ,
ಬಸವ ಭವನ, ಶಿರಗುಪ್ಪಿ
ಅಂತರಂಗದ ಅನುಸಂಧಾನವನ್ನು ಪ್ರೇರೇಪಿಸುವುದೇ ಷಟ್ ಸ್ಥಲ.ಭಕ್ತಂಗೆ ಕ್ರಿಯೆ, ಮಹೇಶ್ವರನಿಗೆ ನಿಶ್ಚಯ, ಪ್ರಸಾದಿಗೆ ಅರ್ಪಣ, ಪ್ರಾಣಲಿಂಗಿಗೆ ಯೋಗ, ಶರಣನಿಗೆ ನಿಬ್ಬೆರಗು ಮತ್ತು ಐಕ್ಯಂಗೆ ನಿರ್ಲಿಪ್ತಭಾವ ಮುಖ್ಯವಾಗಿವೆ.
ಅನುಕರಣೆ ಮತ್ತು ಅನುಭಾವಗಳಿಗೆ ತುಂಬಾ ವ್ಯತ್ಯಾಸವಿದೆ.ಮನುಷ್ಯ ಅನುಭವಿಯಾಗಬೇಕಂದ್ರೆ ಸಾಧನೆ ಮಾಡಬೇಕು.ಸಾಧನೆ ಮಾಡಲು ಷಟಸ್ಥಲಗಳ ಬಗ್ಗೆ ಅರಿವಿರಬೇಕು.
ಪೃಕೃತಿಯಲ್ಲಿ ಹುಟ್ಟಿದ ಮಗುವಿನ ತಂದೆ ತಾಯಿ ತೀರಿದ ನಂತರವೂ ಮಗು ಬೆಳೆಯುತ್ತದೆ,ಏಕೆಂದರೆ ಆ ಮಗು ಪೃಕೃತಿಯ ಅಂಶವಾಗಿರುವುದರಿಂದ ಆ ಮಗುವನ್ನು ಪೃಕೃತಿಯೇ ಬೆಳೆಸುತ್ತದೆ.
ನಾನು ಬದುಕಿದೆನು ಎನ್ನುವುದು ಮಾಯೆ,ಪೃಕೃತಿ ನಮ್ಮನ್ನು ಬದುಕಿಸುತ್ತಿದೆ ಎಂಬುದು ಸತ್ಯ.ಎಲ್ಲ ಮನುಷ್ಯರು ಬದುಕಬೇಕೆಂದರೆ ಷಟಸ್ಥಲಗಳನ್ನು ಪಾಲಿಸಲೇಬೇಕು.
ಪೃಕೃತಿಯಲ್ಲಿನ ಅಗ್ನಿ,ವಾಯು, ಬೆಳಕು,ಆಕಾಶ,ನೀರು ಇವುಗಳು ನಮ್ಮನ್ನು ತನ್ನಂತೆ ಮಾಡಿಕೊಂಡಿವೆ.ನಾನೇ ಮಾಡಿದೆನೆಂಬ ಭ್ರಮಾಲೋಕದಲ್ಲಿ ಮನುಷ್ಯ ಜೀವನಾನಂದ ಅನುಭವಿಸಲು ಸಾಧ್ಯವಾಗುವುದಿಲ್ಲ.
ಮನುಷ್ಯ ಆಸ್ತಿ,ಅಂತಸ್ತುಗಳ ಬೆನ್ನು ಬಿದ್ದಿದ್ದಾನೆ.
ಬಸವಣ್ಣನವರು ಈ ಜಗತ್ತಿಗೆ ಪೃಕೃತಿ ಧರ್ಮವನ್ನು ಕೊಟ್ಟು ಪೃಕೃತಿಯೇ ಗುರು, ಗಗನವೇ ಲಿಂಗ, ಜಗವಿದೆಲ್ಲವೂ ಕೂಡಲಸಂಗಮ ಎಂದರು.
ಹೃದಯದಲ್ಲಿ ಪ್ರೇಮದ ಜ್ಯೋತಿಯ ಹೊತ್ತಿಸಿಕೊಂಡಾತನೇ ಭಕ್ತ,ಪ್ರೇಮದ ಜ್ಯೋತಿಗೆ ತ್ಯಾಗದ ಎಣ್ಣಿಯನ್ನು ಹಾಕುವನೇ ಮಹೇಶ್ವರ, ಪ್ರಪಂಚದಲ್ಲಿ ಪರಮಾತ್ಮನ ಕರುಣೆ ಅರಿತವನೇ ಪ್ರಸಾದಿ,ಪ್ರಪಂಚದ ಕಣ ಕಣದಲ್ಲಿಯೂ ಪರಮಾತ್ಮನಿದ್ದಾನೆ ಎಂದು ಅರಿತವನೇ ಪ್ರಾಣಲಿಂಗಿ.ಜೀವಭಾವ ಬಿಟ್ಟು ದೇವಭಾವದಲ್ಲಿ ಆನಂದದಿಂದ ಇದ್ದವನೇ ಶರಣ. ಪ್ರಪಂಚದಲ್ಲಿದ್ದು ಪರಮಾತ್ಮನಲ್ಲಿ ಮನ ಒಂದಾದವನೇ ಐಕ್ಯ.

ಈ ಹುಟ್ಟು ಕೊನೆಯಾಗಬೇಕು ಹುಟ್ಟಿದರೆ ಭವಬಂಧನದಲ್ಲಿಯೇ ಸುತ್ತುತ್ತಾ ಇರಬೇಕಾಗುತ್ತದೆ,ಹಾಗಾಗಿ ಷಟಸ್ಥಲ ಆಚರಣೆ ಮಾಡಬೇಕು.ಆಚರಣೆ ಮಾಡುವವರು ಮತ್ತೆ ಹುಟ್ಟುವುದಿಲ್ಲ.ದೈಹಿಕ ಸಂಬಂಧಗಳಿಗೆ ಅಂಟಿಕೊಂಡು ಇರಬಾರದು.ಪ್ರತಿನಿತ್ಯ ವಿಭೂತಿ ಧರಿಸಿ ಶಿವಯೋಗ ಮಾಡಬೇಕು.
ತಿನ್ನುವ ಆಹಾರವನ್ನು ಪರಿಶುದ್ದವಾಗಿ ಪ್ರಸಾದವೆಂದು ತಿಳಿಯಬೇಕು. ಹೆಂಡತಿ ತನ್ನ ಗಂಡನಿಗೆ ಊಟ ಕೊಡುವಾಗ ಮಾತೆಯಾಗಿ ಎಡೆ ಮಾಡಬೇಕು.ಈ ರೀತಿ ಸೇವಿಸಿದ ಆಹಾರ ಆತನಲ್ಲಿ ಅದೇ ಭಾವನೆಯನ್ನು ಹುಟ್ಟಿಸುತ್ತದೆ . ನಾವು ಹೆತ್ತಿರುವ ಮಕ್ಕಳನ್ನು ತಂದೆ ತಾಯಿಗಳಂತೆ ನೋಡಬೇಕು,ಮುಂದೊಂದು ದಿನ ಆ ಮಕ್ಕಳು ನಿಮ್ಮನ್ನು ಮಕ್ಕಳನ್ನಾಗಿ ನೋಡಿಕೊಳ್ಳುತ್ತವೆ.
ಪ್ರತಿ ದಿನ ಷಟಸ್ಥಲಗಳಾಚರಣೆ ಮಾಡಿಕೊಂಡು ಸಾಗಿದರೆ ಜೀವನಾನುಭವ ಅನುಭವಿಸಲು ಸಾಧ್ಯವಾಗುತ್ತದೆ.
ಅಷ್ಟಾವರಣ ದೇಹಕ್ಕೆ, ಪಂಚಾಚಾರ ಪ್ರಾಣಕ್ಕೆ, ಷಟಸ್ಥಲವೇ ಆತ್ಮ.ಈ ಮೂರು ಅನಿತ್ಯ ಇದ್ದು,ಶರಣರು ಇವು ನಿತ್ಯದೊಳಗೆ ಕೂಡಿಸಲು ದೇಹಕ್ಕೆ ಗುರು,ಪ್ರಾಣಕ್ಕೆ ಲಿಂಗ, ಆತ್ಮಕ್ಕೆ ಜಂಗಮ ಅಗತ್ಯವೆಂದರು.
ಲಿಂಗಾಯತರಿಗೆ ಸಟಸ್ಥಲ ಸಿದ್ದಾಂತವೇ ಪ್ರಧಾನ.ಲಿಂಗಾಯತರು ತಮ್ಮ ಮಕ್ಕಳಿಗೆ ಷಟಸ್ಥಲ ಬೋಧಿಸಬೇಕು. ದೇಹದೊಳಗಿರುವ ಆತ್ಮ ಆರು ಅಂತದಲ್ಲಿ ವಿಕಾಸಗೊಂಡು ಪರಮಾತ್ಮನಲ್ಲಿ ಸಮೀಕರಣ ಗೊಳ್ಳುವುದಕ್ಕೆ ಷಟಸ್ಥಲ ಸಿದ್ದಾಂತ ನಮಗೆ ಪೂರಕವಾಗುತ್ತದೆ.
ಪ್ರತಿಯೊಬ್ಬರಲ್ಲೂ ಪ್ರಕೃತಿಗುಣ ಬರಬೇಕು.ಬಸವಾದಿ ಪ್ರಮಥರುರು ಇಡೀ ಜಗತ್ತಿನಲ್ಲಿ ಪರಮಾತ್ಮನನ್ನು ಸಾಕಾರ, ನಿರಾಕಾರವಾಗಿ ತೋರಿಸಿಕೊಟ್ಟರು.