ಜನೇವರಿ, ಫೆಬ್ರವರಿಯಲ್ಲಿ ಮೂರುದಿನಗಳ ವಚನ ವಿಜಯೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

  ಸ್ವಾಗತ ಸಮಿತಿ ಸೇರಿ ವಿವಿಧ ಸಮಿತಿಗಳ ರಚನೆ

ಬೀದರ:

ಇಲ್ಲಿಯ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ಸಾನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜನೇವರಿ ೩೦, ೩೧ ಹಾಗೂ ಫೆಬ್ರವರಿ ೧ ರಂದು ೩ ದಿನಗಳ ಕಾಲ ಇಲ್ಲಿನ ಬಸವಗಿರಿಯಲ್ಲಿ ವಚನ ವಿಜಯೋತ್ಸವ ಕಾರ್ಯಕ್ರಮ ಅರ್ಥಪೂರ್ಣ ವೈವಿಧ್ಯಮಯವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಕಲ್ಯಾಣಕ್ರಾಂತಿ ನಂತರ ವಚನ ಸಾಹಿತ್ಯ ಸಂರಕ್ಷಣೆಗಾಗಿ ಪ್ರಾಣಾರ್ಪಣೆಯಾದವರ ಸ್ಮರಣೆಗಾಗಿ ೨೦೦೨ ರಿಂದ ವಚನ ವಿಜಯೋತ್ಸವ ಕಾರ್ಯಕ್ರಮ ಆಚರಿಸಿಕೊಂಡು ಬರಲಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಇದು ಕಲ್ಯಾಣ ಕರ್ನಾಟಕದ ಹೆಮ್ಮೆಯ ಉತ್ಸವವಾಗಿದೆ.

ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧೆಡೆಯಿಂದ ಪೂಜ್ಯರು, ಅನುಭಾವಿಗಳು, ಗಣ್ಯರು, ಬಸವ ಭಕ್ತರು ಆಗಮಿಸುತ್ತಿದ್ದಾರೆ. ಸರ್ವ ಶರಣ ಬಂಧುಗಳು ಸೇವಾ ಮನೋಭಾವದಿಂದ ಶ್ರಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳ ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕಾರ್ಯಾಧ್ಯಕ್ಷರಾಗಿ ಚಂದ್ರಕಾಂತ ಮಿರ್ಚೆ, ಪ್ರಧಾನ ಕಾರ್ಯಾದರ್ಶಿಯಾಗಿ ರಾಜೇಂದ್ರಕುಮಾರ ಜೊನ್ನಿಕೇರೆ, ಕೋಶಾಧ್ಯಕ್ಷರಾಗಿ ರಾಚಪ್ಪ ಪಾಟೀಲರವರನ್ನು ಆಯ್ಕೆ ಮಾಡಲಾಯಿತು.

ವಿವಿಧ ಸಮಿತಿ ಸಂಯೋಜಕರನ್ನು ನೇಮಿಸಲಾಯಿತು. ಮೆರವಣಿಗೆ ಸಮಿತಿ ರಾಜೇಂದ್ರಕುಮಾರ ಗಂದಗೆ, ಹಣಕಾಸು ಸಮಿತಿ ಗುಂಡಪ್ಪ ಬಳತೆ, ವೇದಿಕೆ ಸಮಿತಿ ಅಶೋಕಕುಮಾರ ವಡಗಾಂವೆ, ಮಂಟಪ ಸಮಿತಿ ವೀರಭದ್ರಪ್ಪ ಭುಯ್ಯಾ, ಅತಿಥಿಗಳ ಆಮಂತ್ರಣ ಸಮಿತಿ ಬಾಬುರಾವ ದಾನಿ,  ವಿದ್ಯಾರ್ಥಿಗಳ ಸಂಘಟನೆ ಸಮಿತಿ ರಾಜಕುಮಾರ ಮಣಗೇರೆ, ಪ್ರಸಾದ ಸಮಿತಿ ಸೂರ್ಯಕಾಂತ ಬಾವಗೆ ಹಕ್ಯಾಳ, ಪ್ರಸಾದ ವಿತರಣಾ ಸಮಿತಿ ಶಿವರಾಜ ನೌಬಾದೆ, ಸಾಂಸ್ಕೃತಿಕ ಸಮಿತಿ ಜ್ಞಾನದೇವಿ ಬಬಛೇಡೆ, ವಸತಿ ಸಮಿತಿ ಅನಿಲಕುಮಾರ ದೇಶಮುಖ, ರಕ್ತದಾನ ಸಮಿತಿ ಗಣೇಶ ಬಿರಾದಾರ.

ಪ್ರಚಾರ ಸಮಿತಿ ಔರಾದ-ಸುವರ್ಣಾ ಚಿಮಕೋಡೆ, ಹುಮನಾಬಾದ-ಮಲ್ಲಿಕಾರ್ಜುನ ಸಂಗಮಕರ, ಬಸವಕಲ್ಯಾಣ-ಸಂಗಮೇಶ ತೋಗರಖೇಡೆ, ಚಿಟ್ಟಗುಪ್ಪ-ಪೂಜ್ಯ ಇಂದುಮತಿತಾಯಿ, ಭಾಲ್ಕಿ-ಪ್ರೊ. ಮಲ್ಲಮ್ಮ ಆರ್. ಪಾಟೀಲ, ಹುಲಸೂರು-ವೀರಶೆಟ್ಟಿ ಮಲಶೆಟ್ಟಿ, ಕಮಲನಗರ-ಶರಣಪ್ಪ ಚಿಕುರ್ತೆ, ಬೀದರ-ಭಾರತಿ ಪಾಟೀಲ, ಬೀದರ ನಗರ-ಕಲ್ಯಾಣರಾವ ಚಳಾಕಪೂರೆ, ಸುಮಾ ಭೂಶೆಟ್ಟಿ, ಇಷ್ಟಲಿಂಗ ಸಿದ್ಧತಾ ಸಮಿತಿ ಡಾ. ಮಲ್ಲಿಕಾರ್ಜುನ ಬುಕ್ಕಾ, ಕಾರ್ ರ‍್ಯಾಲಿ ಸಮಿತಿ ಅರುಣಕುಮಾರ, ಧನರಾಜ ಹಂಗರಗಿ.

ಮಹಿಳಾ ಸಮಿತಿಯ ಗೌರವಾಧ್ಯಕ್ಷರಾಗಿ ಜ್ಞಾನದೇವಿ ಬಬಛೆಡೆ, ಕಾರ್ಯಾಧ್ಯಕ್ಷರಾಗಿ, ವಿಜಯಲಕ್ಷ್ಮಿ ಸುಲೇಪೇಟರವರನ್ನು ಆಯ್ಕೆ ಮಾಡಲಾಯಿತು. ಅಲ್ಲದೇ ಮಹಿಳಾ ಸಮಿತಿ ಸಮಿತಿಗಳಿಗೆ ಮಹಿಳೆಯರನ್ನು ಸಂಯೋಜಕರನ್ನು ನೇಮಿಸಲಾಯಿತು.

ಹಣಾಸು ಸಮಿತಿ ವಿದ್ಯಾವತಿ ಬಿರಾದಾರ ಉಂಡೆ, ಪ್ರಚಾರ ಶಿಸ್ತು ಸಮಿತಿ ಶೈಲಾ ಕುಂಬಾರ, ಆರೋಗ್ಯ ಸಮಿತಿ ಡಾ. ದೇವಿಕಾ ನಾಗೂರೆ, ಮಂಟಪ ಶಿಸ್ತು ಸಮಿತಿ ಗೀತಾ ಬಿರಾದಾರ, ಇಷ್ಟಲಿಂಗ ಪೂಜಾ ಸಿದ್ಧತಾ ಸಮಿತಿ ಶಾಂತಾ ಖಂಡ್ರೆ, ವಚನ ಪಾರಾಯಣ ಸಿದ್ಧತಾ ಸಮಿತಿ ನಿರ್ಮಲಾ ಮಸೂದೆ.

ಸಲಹಾ ಸಮಿತಿ ಸದಸ್ಯರು: ಶಿವಶರಣಪ್ಪ ವಾಲಿ, ಬಿ.ಜಿ. ಶೆಟಕಾರ, ಡಾ. ವೈಜಿನಾಥ ಕಮಠಾಣೆ, ಡಾ. ಗುರಮ್ಮ ಸಿದ್ದಾರೆಡ್ಡಿ, ಶಕುಂತಲಾ ಬೆಲ್ದಾಳೆ, ಡಾ. ವಿಜಯಶ್ರೀ ಬಶೆಟ್ಟಿ, ಬಸವರಾಜ ಬುಳ್ಳಾ, ಜಯರಾಜ ಖಂಡ್ರೆ, ಸುರೇಶ ಚನ್ನಶೆಟ್ಟಿ, ಶರಣಪ್ಪ ಮಿಠಾರೆ, ಡಾ. ಬಾಬು ವಾಲಿ, ಸೋಮಶೇಖರ ಪಾಟೀಲ ಗಾದಗಿ, ಕುಶಾಲರಾವ ಪಾಟೀಲ ಖಾಜಾಪೂರ, ಶಂಕ್ರೆಪ್ಪ ಹೊನ್ನಾ, ಸಿದ್ದಯ್ಯ ಕಾವಡಿ, ಬಸವರಾಜ ಧನ್ನೂರು, ವಿಶ್ವನಾಥ ಕಾಜಿ, ಕುಶಾಲ ಪಾಟೀಲ ಗಾದಗಿ, ಶಿವರಾಜ ಮದಕಟ್ಟಿ, ರೇವಣಪ್ಪ ಮೂಲಗೆ, ಆನಂದ ದೇವಪ್ಪ, ಶರಣಪ್ಪ ಸಿಕನಪೂರ, ಸುಭಾಷ ಹಮ್ಮಿಲಪೂರೆ, ರಮೇಶ ಕಟ್ಟಿತೂಗಾಂವೆ, ದತ್ತಾತ್ರೆ ಬಾಂದೆಕರ್, ಬಾಬುರಾವ ಕುಂಬಾರ, ಸುಭಾಷ ಮಡಿವಾಳ, ಸುಭಾಷ ಗಜರೆ,  ಚಂದ್ರಕಾಂತ ಹೂಗಾರ, ರಾಜಕುಮಾರ, ಜಗನ್ನಾಥ ಜಮಾದಾರ, ಸೋಮಶೇಖರ ಹಾಗೂ ಎಲ್ಲಾ ಬಸವಪರ ಸಂಘಟನೆಗಳ ಅಧ್ಯಕ್ಷರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *