ಚಿತ್ರದುರ್ಗ
ಇಂದು ಶರಣ ಸಂಸ್ಕೃತಿ ಉತ್ಸವ ಹಾಗೂ ಬಸವ ಸಂಸ್ಕೃತಿಯ ಅಂಗವಾಗಿ ನಗರದ ಮುರುಘಾ ಮಠದಲ್ಲಿ 5,000ಕ್ಕೂ ಹೆಚ್ಚು ಶರಣ ಶರಣೆಯರಿಂದ ವಚನ ಝೇಂಕಾರ ಕಾರ್ಯಕ್ರಮ ನಡೆಯಲಿದೆ.
ಶ್ರೀ ಮಠದ ಅನುಭವ ಮಂಟಪದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಏಕಕಾಲದಲ್ಲಿ ವಚನಗಳನ್ನು ಶಿಸ್ತು ಬದ್ಧವಾಗಿ, ಸುಶ್ರಾವ್ಯವಾಗಿ ಹಾಡಲಾಗುತ್ತದೆ.
ಶ್ರೀ ಮಠವು ಒಂದು ತಿಂಗಳಿನಿಂದ ವಿದ್ಯಾರ್ಥಿಗಳಿಗೆ, ಮಠದ ಭಕ್ತರಿಗೆ, ಮತ್ತು ಜನಸಾಮಾನ್ಯರಿಗೆ ವಚನ ಝೇಂಕಾರ ಗಾಯನದ ತರಬೇತಿಯನ್ನು ನೀಡಸಲಾಗಿದೆ.
“ವಚನ ಗಾಯನಗಳು ಜನಸಾಮಾನ್ಯರ ಮನಸಿನಲ್ಲಿ ಸದಾ ಝೇಂಕರಿಸುತ್ತಿರಲಿ (ಗುನುಗುತ್ತಿರಲಿ) ಎಂಬ ಸುದುದ್ದೇಶದಿಂದ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ,” ಎಂದು ಶ್ರೀ ಮಠದ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರು ಹೇಳಿದರು.
ವಚನಗಳು ಅನುಭವದ ಅಭಿವ್ಯಕ್ತಿಯಾಗಿವೆ. ಸದಾ ನಮ್ಮ ಮನಸ್ಸಿನಲ್ಲಿ ವಚನ ಝೇಂಕರಿಸಿ ಮನಸ್ಸಿನ ಭಾವನೆಗಳು ಅತ್ಮ ನಿವೇದನೆಗೆ ಒಳಪಟ್ಟು ಸ್ವಲ್ಪವಾದರೂ ಪರಿವರ್ತನೆಯಾದರೆ ಈ ಪ್ರಯತ್ನವು ಸಾರ್ಥಕ. ಎಲ್ಲರೂ ವಚನ ಝೇಂಕಾರದದಲ್ಲಿ ಭಾಗವಹಿಸಿ, ಎಂದು ಶ್ರೀಗಳು ನುಡಿದರು.
ಈ ಝೆಕಾರ ನಾಡಿನತುಂಬೆಲ್ಲ ಪಸರಿಸಲಿ