ಮುರುಘಾ ಮಠದಲ್ಲಿ ಅಕ್ಟೋಬರ್ 5ರಿಂದ ವಚನ ಕಮ್ಮಟ ತರಗತಿಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶರಣ ಸಂಸ್ಕೃತಿ ಉತ್ಸವವನ್ನು ನಡೆಸಲಾಗುತ್ತಿದೆ. ಮಠದ ಎಲ್ಲಾ ಕಾರ್ಯಕ್ರಮಗಳ ಜೊತೆ ಜೊತೆಯಲ್ಲಿ ಬಸವ ಧರ್ಮದ ಶರಣ ಸಂಸ್ಕೃತಿ ಸಂಸ್ಕಾರಗಳನ್ನು ಶಿಕ್ಷಣ ಮಾಲಿಕೆ ರೂಪದಲ್ಲಿ ನೀಡಲು “ವಚನ ಕಮ್ಮಟ ಶಿಕ್ಷಣ ಮಾಲಿಕೆ” ಎನ್ನುವ ಕಾರ್ಯಗಾರವನ್ನು 05-10-2024ದಿಂದ 11-10-2024ದವರೆಗೆ ಶ್ರೀ ಮಠದಲ್ಲಿ ನಡೆಸಲಾಗುತ್ತಿದೆ.

ಬಸವ ಧರ್ಮ ಸಂಸ್ಕಾರಗಳಾದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ವಿಷಯಗಳನ್ನು ಬೋಧಿಸಲಾಗುತ್ತದೆ.

ಈ ಕಾರ್ಯಗಾರಕ್ಕೆ ಬರಲು ಬಯಸುವವರಿಗೆ ಉಚಿತ ಪ್ರಸಾದ ಮತ್ತು ವಸತಿ ವ್ಯವಸ್ಥೆಯಿರುತ್ತದೆ.

ಅಸಕ್ತಿಯುಳ್ಳವರು ಕೂಡಲೇ ಈ ದೂರವಾಣಿ ಸಂಖ್ಯೆಗೆ 8861688472 ಕರೆಮಾಡಿ ಹೆಸರು ನೊಂದಣಿ ಮಾಡಿಸಿಕೊಳ್ಳಬೇಕೆಂದು ಶ್ರೀ ಮಠದ ಆಡಳಿತ ಮಂಡಳಿ ತಿಳಿಸಿದೆ.

ಈ ಪ್ರಕಟಣೆಯನ್ನು ನಿಮ್ಮ ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೆ ಮಾಡಬೇಕೆಂದು ಕೋರುತ್ತೇವೆ.

ತರಗತಿಗಳ ವಿವರ

05-10-2024
ಗುರು, ಲಿಂಗ, ಜಂಗಮ

06-10-2024
ವಿಭೂತಿ, ರುದ್ರಾಕ್ಷಿ, ಮಂತ್ರ

07-10-2024
ಪಾದೋದಕ, ಪ್ರಸಾದ, ಲಿಂಗಾಚಾರ

08-10-2024
ಶಿವಾಚಾರ, ಸದಾಚಾರ, ಭೃತ್ಯಾಚಾರ

09-10-2024
ಗಣಾಚಾರ, ಭಕ್ತ, ಮಹೇಶ

10-10-2024
ಪ್ರಸಾದಿ, ಪ್ರಾಣಲಿಂಗಿ, ಶರಣ

11-10-2024
ಐಕ್ಯ, ಲಿಂಗಪೂಜೆ, ಶಿವಯೋಗ, ಧ್ಯಾನ

ವಿದ್ಯಾರ್ಥಿಗಳಾಗಿ ಬನ್ನಿ ಜ್ಞಾನಿಗಳಾಗಿ ಹೋಗಿ ಎಂದು ಆಯೋಜಕರು ಕರೆ ಕೊಟ್ಟಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *