ಮೊದಲನೇ ಕೇಸಿನಲ್ಲಿ ಮುರುಘಾ ಶರಣರು ನಿರ್ದೋಷಿ: ಕೋರ್ಟ್ ತೀರ್ಪು

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರು ಮತ್ತು ಇನ್ನಿಬ್ಬರು ಆರೋಪಿಗಳು ನಿರ್ದೋಷಿ ಎಂದು ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ ತೀರ್ಪು ನೀಡಿದೆ.

ಈ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ಮುರುಘಾ ಶರಣರು, ಎರಡನೇ ಆರೋಪಿ ರಶ್ಮಿ ಹಾಗೂ ನಾಲ್ಕನೇ ಆರೋಪಿ ಹಾಗೂ ಮಠದ ಮ್ಯಾನೇಜರ್ ಆಗಿರುವ ಪರಮಶಿವಯ್ಯ ಕೂಡ ಕೋರ್ಟ್‌ಗೆ ಆಗಮಿಸಿದ್ದರು.

ಶಾಲಾ ಬಾಲಕಿಯೊಬ್ಬಳ ಮೇಲಿನ ದೌರ್ಜನ್ಯದ ಬಗ್ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ಧ ನ್ಯಾಯಾಧೀಶರಾದ ಜಿ.ಸಿ. ಹಡಪದ ಅವರು ಸುಮಾರು ಮೂರು ಘಂಟೆಗೆ ತೀರ್ಪು ನೀಡಿದರು.

ನಂತರ ಕೋರ್ಟಿನ ಆವರಣದಲ್ಲಿ ಮಾತನಾಡಿದ ಮುರುಘಾ ಶರಣರ ವಕೀಲರು ನ್ಯಾಯಾಧೀಶರು ಸುಧೀರ್ಘವಾದ ತೀರ್ಪು ನೀಡಿರುವುದರಿಂದ ಅದನ್ನು ಓದಿ ಪತ್ರಿಕಾಗೋಷ್ಠಿ ನಡೆಸಲಾಗುವುದೆಂದು ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಮುರುಘಾ ಶರಣರ ಬೆಂಬಲಿಗರು ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಮುರುಘಾ ಮಠಕ್ಕೆ ಒಳ್ಳೆಯದಾಗುವುದೆಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
7 Comments
  • ಇದು ಸತ್ಯಕ್ಕೆ ಸಂದ ಜಯ. ಮುರುಘಾ ಶರಣರನ್ನು ತೇಜೋವಧೆ ಮಾಡಿ ಮಠದ ಆಸ್ತಿ ಕಬಳಿಸುವ ಹುನ್ನಾರಕ್ಕೆ ಆದ ಹಿನ್ನೆಡೆ.

  • ಎರಡನೇ ಪ್ರಕರಣದಲ್ಲೂ ಸತ್ಯಕ್ಕೆ ಜಯ ಸಿಗಲಿ.

  • 2 ನೇ ಪ್ರಕರಣವೂ ಸಾಕ್ಷ್ಯಾಧಾರಗಳ ಕೊರತೆಯಿಂದ ಕೂಡಿರಲಿ ಎಂದು ಹಾರೈಸೋಣ !

  • ಯಾವ ಕೋರ್ಟ್ ಏನೇ ಹೇಳಿದರೂ ಇವರು ಮತ್ತೆ ಮಠಕ್ಕೆ ಬಂದರೆ ಲಿಂಗಾಯತರೆಲ್ಲ ತಲೆ ತಗ್ಗಿಸಬೇಕಾಗುತ್ತದೆ. ಇದು ಕಾನೂನಿನ ಪ್ರಶ್ನೆಯಲ್ಲ ಧರ್ಮದ ಪ್ರಶ್ನೆ

  • ಈ ಮುರುಗ ಮಠದ ಸ್ವಾಮಿಗಳು ಜೈಲಿಗೆ ಹೋಗುವಾಗಲೇ ಕಾವಿಯನ್ನು ಕಳಿಸಬೇಕಾಗಿತ್ತು. ಮರಳಿ ಪೀಠಕ್ಕೆ ಹೋಗುವ ಮುನ್ನವೇ ಪೀಠಕ್ಕೆ ನಾನು ಯೋಗ್ಯನೆ ಎಂದು ಯೋಚಿಸಿ ಮೂಲ ಸೇರಿದ್ರೆ ಒಳ್ಳೆಯದು

  • Dont talk unnecessarily without knowing the facts. I think people like Gorucha know better. This is a serious scandal

Leave a Reply

Your email address will not be published. Required fields are marked *