ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬಹನ್ಮಠದ ವತಿಯಿಂದ ಕಾರ್ತೀಕ ಮಾಸದ ಅಂಗವಾಗಿ ಕಳೆದ ಅಕ್ಟೋಬರ್ ೨೩ ರಿಂದ ಪ್ರತಿನಿತ್ಯ ನಡೆಯುತ್ತಿರುವ ೧೨ನೇ ಶತಮಾನದ ೬೬ ಬಸವಾದಿ ಶರಣ-ಶರಣೆಯರ ವಚನ ವಿಶ್ಲೇಷಣೆ, ವ್ಯಕ್ತಿತ್ವ ಸಾಧನೆ ಕುರಿತಾದ ವಚನ ಕಾರ್ತಿಕದ ಸಮಾರೋಪ ಸಮಾರಂಭವು ನವೆಂಬರ್ ೨೪ರಂದು ಸೋಮವಾರ ಶ್ರೀಮಠದ ಪ್ರಾಂಗಣದಲ್ಲಿ ಸಂಜೆ ೫.೩೦ ರಿಂದ ೭.೩೦ ರವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಸಮಾಜಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನವೆಂಬರ್ ೨೩ರಂದು ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಸುಮಾರು ಹತ್ತಿರ ೫೦೦ ವಚನಗಳನ್ನು ಕಂಠಪಾಠ ಮಾಡಿಕೊಂಡು ಹೇಳಿದ ಲಾವಣ್ಯ ಅಂಗಡಿ ಸೇರಿದಂತೆ ಇತರ ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದೆ.
