ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಮಾಣಿಕ್ಯಪುರ ಗ್ರಾಮದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಶುಕ್ರವಾರ ನಡೆದವು.
ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 23 ಜನರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಮಕ್ಕಳು ಹಾಕಿಕೊಂಡಿದ್ದ ಯಂತ್ರಗಳನ್ನು ತೆಗೆಸಿ, ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು.
ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು ಬಸವಣ್ಣನವರ ವಚನಗಳಲ್ಲಿ ಭಕ್ತಿ ಮಾರ್ಗ ವಿಷಯದ ಬಗ್ಗೆ ಮಾತನಾಡಿ, ನಿಜವಾದ ಭಕ್ತಯಾರು ಎಂದು ತಿಳಿಸಿ ಕೊಟ್ಟರು.
ಬಸವಭಾರತ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರುದ್ರಪ್ಪನವರು ಕಾರ್ಯಕ್ರಮ ನಿರೂಪಿಸಿದರು. ಊರಿನ ಹಿರಿಯರಾದ ಗೌಡರಾದ ಬಸವಣ್ಣನವರನ್ನು ಬಸವಭಾರತ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು.ಮಾಣಿಕ್ಯಪುರದ ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು . ಊರಿನ ಇತರೆ ಮುಖಂಡರಾದ ಪುಟ್ಟಸ್ವಾಮಿ , ಶಿವಣ್ಣ ಮತ್ತು ಬಸವಣ್ಣನವರು ಭಾಗವಹಿಸಿದರು. ಶಿವಣ್ಣನವರ ಮನೆಯಲ್ಲಿ ಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು.
ಬಸವಭಾರತ ಪ್ರತಿಷ್ಠಾನ ಮತ್ತು ಮಾಣಿಕ್ಯಪುರ ಗ್ರಾಮಸ್ಥರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.