ಮೈಸೂರು
ನೀಲಗಂಗಾ ಮಹಿಳಾ ಬಳಗ ಇವರಿಂದ ಸೋಮವಾರ ಸಂಜೆ 4-30 ಕ್ಕೆ JSS ಲಾ ಕಾಲೇಜ್ನಲ್ಲಿ ನಡೆದ ಮಾಸಿಕ ಸಭೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಅತಿಥಿಗಳಾಗಿ ಲೋಲಾಕ್ಷಿ ಕೆ. ಎಂ. ನಿವೃತ್ತ ಗೌರವ ಶಿಕ್ಷಕರು ಹಾಗೂ ಹಿರಿಯ ಸಾಹಿತಿಗಳು ಕನ್ನಡ ರಾಜ್ಯೋತ್ಸವದ ಬಗ್ಗೆ ಉಪನ್ಯಾಸವನ್ನು ನೀಡಿದರು.
ಆಲೂರು ವೆಂಕಟರಾಯರ, ಹುಯಿಲಗೋಳ ನಾರಾಯಣರ, ಹರ್ಡೇಕರ್ ಮಂಜಪ್ಪನವರನ್ನು ಸ್ಮರಿಸುತ್ತಾ ಕನ್ನಡ ಭಾಷೆಯ, ಕರ್ನಾಟಕದ ಇತಿಹಾಸವನ್ನು ಪರಿಚಯ ಮಾಡಿಕೊಟ್ಟರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸದಸ್ಯರುಗಳು ಹಳದಿ ಮತ್ತು ಕೆಂಪು ಬಣ್ಣದ ಸೀರೆಯನ್ನು ಹಾಕಿಕೊಂಡು ಬಂದಿದ್ದರು. Best dress, ಕ್ವಿಜ್ ಹಾಗೂ ಆಟೋಟಗಳಿಗೆ ಪ್ರೈಜ್ ಇತ್ತು. ಪ್ರಾರಂಭದಲ್ಲಿ ಆಟ, ಕೊನೆಯಲ್ಲಿ ಲಕ್ಕಿ ಲೇಡಿ ಕಾರ್ಯಕ್ರಮಗಳ ನಂತರ ಪ್ರಸಾದದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಬಳಗದ ಮಾಜಿ ಅಧ್ಯಕ್ಷರಾದ ಶ್ರೀಮತಿ ನೀಲಂಬಿಕಾ ದೇವಿ ನಾಗರಾಜ್ ರವರು ತಮ್ಮ ಪತಿಯ ಹುಟ್ಟುಹಬ್ಬದ ಪ್ರಯುಕ್ತ ಪ್ರಸಾದದ ವ್ಯವಸ್ಥೆ ಯನ್ನು ಮಾಡಿದ್ದರು.
ಅಧ್ಯಕ್ಷರಾದ ಶ್ರೀಮತಿ ಗೀತಾ ರಾಜಶೇಖರ್ ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ಮಹೇಶ್ ಹಾಗೂ ಬಳಗದ ಅನೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರೂ ಆನಂದ ಮತ್ತು ಸಂತೋಷದಿಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಜೈ ಕನ್ನಡಾಂಬೆ
ಬಸವಣ್ಣ ನವರ ಕರುನಾಡು.