ಮೈಸೂರು
ಜಾಗತಿಕ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಒಂದು ದಿನದ ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆ ಕಮ್ಮಟ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಪಂಚಗವಿಮಠದಲ್ಲಿ ಶನಿವಾರ ನಡೆಯಲಿದೆ.
ಮೈಸೂರು ನಗರದಲ್ಲಿ ನಿಜಾಚರಣೆ ಕಮ್ಮಟ ನಡೆಯುತ್ತಿರುವುದು ಇದೇ ಮೊದಲು ಮೈಸೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಸುಮಾರು 1000 ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮೈಸೂರು ಘಟಕದ ಅಧ್ಯಕ್ಷ ಮಹಾದೇವಪ್ಪ ಗುರವಾರ ಸುದ್ದಿಘೋಷ್ಠಿಯಲ್ಲಿ ಹೇಳಿದರು.
ಭೂಹಗರಣಕ್ಕೆ ಸಿಲುಕಿಕೊಂಡು ವಿರಕ್ತ ಸಂಪ್ರದಾಯದ ಪಂಚಗವಿಮಠ 2020 ರಲ್ಲಿ ಸರ್ಕಾರಕ್ಕೆ ಹಸ್ತಾಂತರವಾಯಿತು. ಮೈಸೂರು ಮಹಾರಾಜರ ಆಶ್ರಯದಲ್ಲಿ ಅಭಿವೃದ್ಧಿಯಾಗಿದ್ದ ಮಠದ ಭೂಮಿ ಅನಧಿಕೃತವಾಗಿ ಬಡಾವಣೆಗಳಾಗಿ ಪರಿವರ್ತನೆಯಾದ ಮೇಲೆ ಸರ್ಕಾರ ತನಿಖೆ ಆರಂಭಿಸಿ ಆಡಳಿತಾಧಿಕಾರಿಯನ್ನು ನೇಮಿಸಿದೆ.
ಹಗರಣದ ನಂತರ ಮೊದಲನೆ ಬಾರಿ ಮಠದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಭಕ್ತಾದಿಗಳಲ್ಲಿ ಹೊಸ ಉತ್ಸಾಹ ತುಂಬಿದೆ ಹತ್ತಿರದ ಗೌರಿಶಂಕರ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಬಂಧುಗಳು ಆಗಮಿಸಲಿದ್ದಾರೆ ಎಂದು ಹೇಳಿದರು.