ಮೈಸೂರಿನಲ್ಲಿ ಅರ್ಥಪೂರ್ಣ ಚೆನ್ನಬಸವೇಶ್ವರರ ಜಯಂತೋತ್ಸವ

ನಾಗರತ್ನ ಜಿ ಕೆ
ನಾಗರತ್ನ ಜಿ ಕೆ

ಮೈಸೂರು

ನಗರದ ರೇಣುಕಾ ಮಂದಿರದಲ್ಲಿ ರಾಷ್ಟ್ರೀಯ ಬಸವದಳ ಮೈಸೂರು ಘಟಕದ ವತಿಯಿಂದ ಶ್ರೀ ಚೆನ್ನಬಸವೇಶ್ವರರ ಜಯಂತಿಯನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು

ರಾಷ್ಟ್ರೀಯ ಬಸವದಳ ಸದಸ್ಯರು ಗಳಿಂದ ಬಸವ ಪೂಜೆ, ಚೆನ್ನಬಸವೇಶ್ವರರ ಪೂಜೆ, ಬಸವ ಪ್ರಾರ್ಥನೆ, ಷಟ್ಸಸ್ಥಲ ಧ್ವಜಾರೋಹಣ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.

ವಕೀಲ ಅಂಬಳೆ ಶಿವಾನಂದ ಸ್ವಾಮಿ ಇವರು ಅಧ್ಯಕ್ಷೀಯ ಭಾಷಣದಲ್ಲಿ ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು ಹಾಗಾಗಿ ನಾವು ಎಲ್ಲರೂ ಬಸವಾದಿ ಪ್ರಮಥರ ವಚನ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಬಸವದಳದ ಕಾರ್ಯದರ್ಶಿಯಾಗಿರುವ ಶರಣೆ ಸರೋಜಮ್ಮ ರವರು ಪ್ರಸ್ತಾವಿಕ ನುಡಿಯಲ್ಲಿ ಪೂಜ್ಯ ಮಾತಾಜಿಯವರು ಕಾಲಜ್ಞಾನದ ಆಧಾರದ ಮೇಲೆ ಚನ್ನಬಸವಣ್ಣನವರ ಜನನ ನಳನಾಮ ಸಂವತ್ಸರ, ವೈಶಾಖ ಮಾಸ 1172 ರಂದು ಹಾಗೂ ಲಿಂಗೈಕ್ಯರಾದ ಅವಧಿಯು ನಂದ ನಾಮ ಸಂವತ್ಸರ 1194 ಎಂದು ತಿಳಿಸಿದ್ದರು. ಬಸವಣ್ಣರಿಂದ ಅಲ್ಲಮಪ್ರಭುಗಳಿಂದ ಅನೇಕ ಶರಣರಿಂದ ಚನ್ನಬಸವಣ್ಣನವರು ಸ್ತುತಿಸಲ್ಪಟ್ಟಿದ್ದಾರೆ, ಅವರ ಈ ಜ್ಞಾನಕ್ಕೆ ಕಾರಣ ಅವರ ತಾಯಿಗೆ ನೀಡಿದ ಗರ್ಭ ಸಂಸ್ಕಾರ ಎಂದು ಹೇಳಿದರು.

ವಕೀಲ ಶ್ರೀಯುತ ಕೋರಿ ಶೆಟ್ಟರ್ ಅಣ್ಣನವರು ಇವರು ಉಪನ್ಯಾಸ ಭಾಷಣದಲ್ಲಿ ವಚನ ಸಾಹಿತ್ಯ ಸಂರಕ್ಷಣೆ ಮಾಡಿದ ಚೆನ್ನಬಸವಣ್ಣನವರ ಕಾರ್ಯ ಶ್ಲಾಘನೀಯ. ಚೆನ್ನಬಸವಣ್ಣನವರ ಲಿಂಗೈಕ್ಯದ ನಂತರ ಮೈಸೂರು ಭಾಗದಲ್ಲಿ ಸಂಚರಿಸಿದ ಸಿದ್ದರಾಮೇಶ್ವರ ಶರಣರ ನೆನಪಿಗಾಗಿ ಇಲ್ಲಿಯ ಕೆಲವು ಸ್ಥಳಗಳ, ವ್ಯಕ್ತಿಗಳ ಹೆಸರುಗಳು ಬದಲಾದವು ಎಂದರು.

ಬ್ರಾಹ್ಮಣೇತರರನ್ನು ಹೊರತುಪಡಿಸಿ ಬಹುತೇಕ ಲಿಂಗಾಯತರು ಹಾಗೂ ಹಿಂದುಳಿದವರ ಹೆಸರುಗಳು (ಶೇಕಡ 65ರಷ್ಟು) ಹೆಸರುಗಳು ಬಸವನ ಹಾಗೂ ಶರಣರ ಹೆಸರಿನ ಸುತ್ತಲೇ ಕಾಣಸಿಗುತ್ತದೆ ಬಸಮ್ಮ, ಬಸವರಾಜ, ಗುರುಬಸಮ್ಮ, ದಾನಮ್ಮ, ಕಲ್ಯಾಣಪ್ಪ, ಅಡಿವೆಪ್ಪ ಹೀಗೆ ಯಾಕಂದ್ರೆ ಬಸವನ ಹೆಸರೇ ನಾಡಿನ (ಎಲ್ಲರ) ಉಸಿರು. ವಿದ್ಯೆಯನ್ನು ಕಲಿಯದವರು ಸಹ ಇವತ್ತಿಗೂ ಹಳ್ಳಿಗಾಡಿನ ಜನರು ಏನಾದರೂ ಒಂದು ಸಣ್ಣ ಗಾಯವಾದರೆ ಬಸವ ಬಸವ ಎಂದು ಬಸವನನ್ನು ನೆನೆಯುತ್ತಾರೆ, ಎಂದರು.

ಬಸವಣ್ಣನವರು ಅವರ ಎಂಟನೇ ವಯಸ್ಸಿಗೆ ಹೆಣ್ಣುಮಕ್ಕಳಿಗೆ ಸಮಾನತೆ ಕೊಡಿಸಲು ತನ್ನ ಪ್ರೀತಿಯ ತಂದೆ ತಾಯಿಗಳನ್ನು ತೊರೆದು ಹೊರ ಬಂದರು. ಕಲ್ಯಾಣಕ್ಕೆ ಬಂದು 12 ವರ್ಷಗಳ ನಂತರ ಅನುಭವ ಮಂಟಪವನ್ನು ಕಟ್ಟುತ್ತಾರೆ. ಪ್ರಜಾಪ್ರಭುತ್ವದ ತಾಯಿ ಸ್ಥಳ ಯಾವುದೆಂದರೆ UK. UK ಎಂದರೆ ಯುನೈಟೆಡ್ ಕಿಂಗ್ಡಮ್ ಅಲ್ಲ ಉತ್ತರ ಕರ್ನಾಟಕ ಎನ್ನುವುದನ್ನು ನಮ್ಮ ಮುಂದಿನ ಪೀಳಿಗೆಗೆ ನಾವು ತಿಳಿಸಿಕೊಡಬೇಕು

ಅನುಭವ ಮಂಟಪದಲ್ಲಿ ಇದ್ದವರಾರು ಸಂಸ್ಕೃತ ಕಲಿತವರು ಅಲ್ಲ ತುಂಬಾ ಓದಿ ವಿದ್ವತ್ತನ್ನು ಗಳಿಸಿದವರಲ್ಲ ಚಮ್ಮಾರರು ಕಮ್ಮಾರರು ನೇಕಾರರು ಕುಂಬಾರರು ಅಂಬಿಗರು ಹೀಗೆ ಎಲ್ಲರೂ ಕಾಯಕ ಜೀವಿಗಳೇ ಆಗಿದ್ದರು. ಸಹೋದರತ್ವದ ಭಾವನೆಯನ್ನು ಒಳಗೊಂಡು ಅದರಂತೆಯೇ ನಡೆದ ಏಕೈಕ ಸಂಸ್ಥೆ ಎಂದರೆ ಅದು ಅನುಭವ ಮಂಟಪ. ಪ್ರಜಾಪ್ರಭುತ್ವದ ಪರಾಕಾಷ್ಟೆಯನ್ನು ಮುಟ್ಟಿದ ಏಕೈಕ ಸಂಸ್ಥೆ ಎಂದರೆ ಅದು ಅನುಭವ ಮಂಟಪ. ಇಲ್ಲಿ ರೂಪುಗೊಂಡ ವಚನಗಳು, ಜಗತ್ತಿನ ಮೊದಲ ಅನುಭಾವ ಸಾಹಿತ್ಯ. ಶರಣರ ವಚನಗಳು ಅನುವಾದ ಸಾಹಿತ್ಯವಲ್ಲ ಅನುಭಾವದ ಸಾಹಿತ್ಯ. ಪ್ರಜಾ ಪ್ರಭುತ್ವದ ಧ್ವನಿಯನ್ನು ಮೊಳಗಿಸಿದ ಜಗತ್ತಿನ ಮೊದಲ ಪ್ರಜಾಸತ್ತಾತ್ಮಕ ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ.

ಚನ್ನಬಸವಣ್ಣನವರ ನೇತೃತ್ವದಲ್ಲಿ ಅನೇಕ ಶರಣರು ವಚನ ಸಾಹಿತ್ಯವನ್ನು ರಕ್ಷಿಸುವ ಕೆಲಸವನ್ನು ಮಾಡಿದ್ದಾರೆ. ಆ ಸಂದರ್ಭದಲ್ಲಿ ಚನ್ನಬಸವಣ್ಣನವರು ಕಲ್ಯಾಣದಿಂದ ಉಳುವಿಯವರೆಗೆ ಎಲ್ಲೆಲ್ಲಿ ಉಳಿದು ಹೋದರೋ ಅಲ್ಲಲ್ಲಿ ಅನೇಕರ ಕೈಗೆ ವಚನದ ಕಟ್ಟುಗಳನ್ನ ಕೊಟ್ಟು ನೀವು ಧರ್ಮ ಪ್ರಚಾರ ಮಾಡಿ ಎಂದು ಹೇಳುತ್ತಾ ಹೋದರು.
ಆ ಎಲ್ಲಾ ಊರುಗಳಲ್ಲೂ ಚನ್ನಬಸವಣ್ಣನವರ ಗುಡಿಗಳು ಇದ್ದಾವೆ.

ಶರಣ ಶ್ರೀ ಮರಪ್ಪ ಜೆಎಲ್ಎಂ ಕಾರ್ಯದರ್ಶಿ ಅವರು ಸ್ವಾಗತವನ್ನು ಮಾಡಿದರು.

ಶರಣು ಸಮರ್ಪಣೆಯನ್ನು ಶರಣ ಗಂಗಾಧರ ಸ್ವಾಮಿ ರಾಷ್ಟ್ರೀಯ ಬಸವ ದಳ ಅಧ್ಯಕ್ಷರು ನೆರವೇರಿಸಿ ಕೊಟ್ಟರು.

ಸಭಾ ನಿರ್ವಹಣೆಯನ್ನು ಚಂದ್ರಶೇಖರ್ ರಾಷ್ಟ್ರೀಯ ಬಸವ ದಳದ ಉಪ ಕಾರ್ಯದರ್ಶಿಗಳು ನೆರವೇರಿಸಿದರು

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಶರಣ ದೇವಣ್ಣ ಮತ್ತು ಶರಣ ಮಾಧು ಹಾಗೂ ಕುಟುಂಬದವರು ನೆರವೇರಿಸಿದರು.

Share This Article
Leave a comment

Leave a Reply

Your email address will not be published. Required fields are marked *