ಕರ್ನಾಟಕ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರೂ, ಈ ಸಂದೇಶ ವಾರ್ತಾ ಇಲಾಖೆ ಅಧಿಕಾರಿಗಳಿಗೇ ಮುಟ್ಟದೇ ಇರುವ ಹಾಗೆ ಕಾಣಿಸುತ್ತಿದೆ.
ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ವಾರ್ತಾ ಇಲಾಖೆಯ ವತಿಯಿಂದ ಬಸವಣ್ಣನವರ ಒಂದು ಸ್ತಬ್ಧ ಚಿತ್ರ ಮಾಡಲಾಗಿತ್ತು. ಅದರಲ್ಲಿ “ವಿಶ್ವ ಗುರು ಜಗಜ್ಯೋತಿ ಬಸವಣ್ಣ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ” ಎಂದು ಅವರನ್ನು ಪರಿಚಯಿಸಿದ್ದು ಚರ್ಚೆಗೆ ಕಾರಣವಾಗಿದೆ.
ಕೆಲವರು ನಾಯಕ, ರಾಯಭಾರಿ ಎರಡೂ ಒಂದೇ ಎಂದು ವಾದಿಸುತ್ತಿದ್ದಾರೆ.
ಆದರೆ ಕೆಲವರು ಈ ಎರಡು ಪದಗಳ ನಡುವಿರುವ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಿದ್ದಾರೆ.
ರಾಯಭಾರಿ ಎಂದರೆ ಒಂದು ರಾಜ್ಯದ ಅಥವಾ ಸಂಸ್ಕೃತಿಯ ಪ್ರತಿನಿಧಿ ಮಾತ್ರ. ನಾಯಕನೆಂದರೆ ಅದಕ್ಕಿಂತ ವಿಸ್ತಾರವಾದ ಅರ್ಥ ಬರುತ್ತದೆ. ಅವನು ಅಧಿಕಾರವನ್ನೂ ಹೊಂದಿರುತ್ತಾನೆ ಹಾಗೆಯೇ ಒಂದು ರಾಜ್ಯ ಅಥವಾ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನೂ ಪಡೆದಿರುತ್ತಾನೆ.
TAGGED:ಇದು ವೈರಲ್
ಅಕ್ಕ ಮಹಾದೇವಿ ಯುನಿವರ್ಸಿಟಿಯವರು ಒಂದು ವಿಡಿಯೊ ಮಾಡಿದ್ದಾರೆ ಅದರಲ್ಲೂ ರಾಯಭಾರಿ ಎಂದು ಹೇಳಿದ್ದಾರೆ. ಇದರಲ್ಲಿ ಯಾರದೊ ಕೈವಾಡ ಇದ್ದಂತೆ ಕಾಣುತ್ತಿದೆ.
correct.
ಹೌದು ನಾಯಕ ಸರಿಯಾದ ಪದ
ಸಾಂಸ್ಕೃತಿಕ ನಾಯಕ ಸರಿಯಾದ ಪದ ಬಳಕೆ