ಲಿಂಗಾಯತ ಧರ್ಮದಲ್ಲಿ ಪ್ರಪ್ರಥಮವಾಗಿ ಗರ್ಭಲಿಂಗ ದೀಕ್ಷೆಯನ್ನು ಶರಣೆ ಅಕ್ಕ ನಾಗಲಾಂಬಿಕೆರವರಿಗೆ ವಿಶ್ವಗುರು ಬಸವಣ್ಣರವರು ನೀಡಿದರು.
ಮೈಸೂರು
ರಾಷ್ಟ್ರೀಯ ಬಸವದಳದ ವತಿಯಿಂದ ಜಿ.ಮಾನಸ-ತಿರುಜ್ಞಾನಂ ದಂಪತಿಗಳ ಗರ್ಭಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ಮತ್ತು ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ನಗರದ ರೇಣುಕಾ ಮಂದಿರದಲ್ಲಿ ರವಿವಾರ ಜರುಗಿತು.
ನಿಜಾಚರಣೆಯ ಗರ್ಭಲಿಂಗ ದೀಕ್ಷಾ ಸಂಸ್ಕಾರವನ್ನು ಬಸವ ಧರ್ಮಪೀಠದ ಪೂಜ್ಯ ಗಂಗಾಮಾತಾಜಿ ನೆರವೇರಿಸಿದರು.

ಲಿಂಗಾಯತ ಧರ್ಮದಲ್ಲಿ ಪ್ರಪ್ರಥಮವಾಗಿ ಗರ್ಭಲಿಂಗ ದೀಕ್ಷೆಯನ್ನು ಶರಣೆ ಅಕ್ಕ ನಾಗಲಾಂಬಿಕೆರವರಿಗೆ ವಿಶ್ವಗುರು ಬಸವಣ್ಣರವರು ನೀಡಿದರು ಮತ್ತೆ ಶರಣೆ ಅಕ್ಕಮಹಾದೇವಿಯವರ ತಾಯಿಗೆ ಗುರುಲಿಂಗದೇವರು ಗರ್ಭಲಿಂಗ ದೀಕ್ಷೆಯನ್ನು ಮಾಡಿದರೆಂದು ಪೂಜ್ಯಶ್ರೀ ಗಂಗಾ ಮಾತಾಜಿ ಹೇಳಿದರು. ಗರ್ಭ ಲಿಂಗಧಾರಣೆಯನ್ನು ಮಾಡಿಸುವುದು ಎಲ್ಲರ ಆದ್ಯ ಕರ್ತವ್ಯವೆಂದು ನುಡಿದರು.

ಅದೇ ವೇದಿಕೆಯಲ್ಲಿ ದಂಪತಿಗಳಾದ ವಿರೂಪಾಕ್ಷ-ಚೇತನರವರಿಗೆ ಮಾತಾಜಿ ಇಷ್ಟಲಿಂಗ ದೀಕ್ಷೆಯನ್ನ ಕೊಟ್ಟರು.
ಪ್ರಸ್ತಾವಿಕ ನುಡಿಯಲ್ಲಿ ಶರಣೆ ರತ್ನಮ್ಮ ಜಯಣ್ಣನವರು ಶ್ರೀ ಶಿವಯೋಗಿ ಸಿದ್ದರಾಮೇಶ್ವರರನ್ನು ಅಲ್ಲಮಪ್ರಭುಗಳು ಬಸವಕಲ್ಯಾಣಕ್ಕೆ ಕರೆತಂದುದ್ದನ್ನು ವಿವರಿಸಿದರು.
ವೇದಿಕೆಯಲ್ಲಿ ಇಷ್ಟಲಿಂಗ ನಿಷ್ಠೆ, ಮೂಢನಂಬಿಕೆ, ಕುಸಂಪ್ರದಾಯಗಳ ಬಗ್ಗೆ ಬಸವತತ್ವದ ಪ್ರಚಾರಕರಾದ ಗಣಚಾರಿ ವೇದಿಕೆಯ ತಿ.ನರಸೀಪುರದ ಶ್ರೀ ಬಿ. ಎಸ್. ಚೌಹಳ್ಳಿ ಲಿಂಗರಾಜಪ್ಪರವರು ಸವಿವರವಾಗಿ ಮಾತನಾಡಿದರು.
ಬಸವಾದಿ ಶರಣರ ವಿಚಾರಗಳನ್ನು ಮೈಗೂಡಿಸಿಕೊಂಡು ಜೀವನ ಮಾಡಬೇಕೆಂದು ಮೇಲಾಜಿಪುರದ ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳು ಹೇಳಿದರು.

ಶ್ರೀ ಶಿವಯೋಗಿ ಸಿದ್ದರಾಮೇಶ್ವರ ವಚನಗಳನ್ನು ಹೇಳುವುದರ ಮೂಲಕ ಸಿದ್ದರಾಮೇಶ್ವರರ ಬಗ್ಗೆ ಮತ್ತು ಗರ್ಭಲಿಂಗ ದೀಕ್ಷೆಯ ಬಗ್ಗೆ ಪೂಜ್ಯಶ್ರೀ ಬಸವಯೋಗಿ ಪ್ರಭು ಸ್ವಾಮೀಜಿರವರು ವೇದಿಕೆಯಲ್ಲಿ ಮಾತನಾಡಿದರು.
ಭದ್ರಾವತಿಯ ಗಣ ನಾಯಕಿ ರತ್ನಮ್ಮ ಮಹಾಲಿಂಗಪ್ಪ ರವರು ವೇದಿಕೆಯಲ್ಲಿ ಮಾತನಾಡಿದರು. ಸುಬ್ರಹ್ಮಣ್ಯ ಮತ್ತು ದೊಡ್ಡಹುಂಡಿ ರೂಪರವರು ವಚನ ಗಾಯನ ಹಾಡಿದರು, ಗಂಗಾಧರಸ್ವಾಮಿ ರಾಷ್ಟ್ರೀಯ ಬಸವದಳದ ಅಧ್ಯಕ್ಷರು ಮೈಸೂರು ರವರು ಸ್ವಾಗತ ಮಾಡಿದರು, ಸೌಮ್ಯಅರವಿಂದಮೂರ್ತಿರವರು ನಿರೂಪಣೆ ಮಾಡಿದರು, ಚಂದ್ರಶೇಖರಯ್ಯರವರು ಶರಣು ವಂದನೆ ಮಾಡಿದರು ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ಜರುಗಿತು.


ಉತ್ತಮ ಕಾರ್ಯಕ್ರಮ ಮಾಡಿದ್ದೀರಾ. ಎಲ್ಲರಿಗೂ ಕೋಟಿ ಶರಣು .ಲಿಂಗಾಯತ ಜಾಗೃತಿಯು ದಿನೇ ದಿನೇ ಪರಿಮಳದಂತೆ ಹರಡುತ್ತಾ ಬಸವನ ಭಕ್ತಿ ಕಂಪನ್ನು ಸೂಸುತ್ತಿದೆ