ನಗರದ ರಾಮಾನುಜ ರಸ್ತೆಯಲ್ಲಿರುವ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಶರಣರ ಮೇಲಿನ ಉಪನ್ಯಾಸ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.
ಶರಣು ಮಾದೇಶ್ ಮತ್ತು ಸ್ನೇಹಿತರು ಕರೋನ ಸಮಯದಲ್ಲಿ ಹಿಂದೆ ಈ ಉಚಿತ ವಿದ್ಯಾರ್ಥಿ ನಿಲಯವನ್ನು ಪ್ರಾರಂಭ ಮಾಡಿ ಏಕಪೋಷಕರಿರುವ ಸುಮಾರು 25 ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದ್ದಾರೆ.
ಮಾದೇಶ್ ರವರು ಎಲ್ಲರನ್ನು ಸ್ವಾಗತಿಸಿ ವಿದ್ಯಾರ್ಥಿ ನಿಲಯದ ದೇಯೋದ್ದೇಶವನ್ನು ತಿಳಿಸಿದರು. ತಿಂಗಳಿಗೆ 25,000 ಬಾಡಿಗೆ ಕೊಡುತ್ತಿದ್ದು,ಈಗ 30*60 ನಿವೇಶನದಲ್ಲಿ ಹೊಸ ವಿದ್ಯಾರ್ಥಿ ನಿಲಯವನ್ನು ಕಟ್ಟುತ್ತಿದ್ದು, ದಾನಿಗಳು ನೆರವು ನೀಡಬೇಕಾಗಿ ವಿನಂತಿಸಿಕೊಂಡರು. ಇಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಲಾಗುವುದು ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ ಹುಸ್ಕೂರು ಅಂಬಿಕಾ ಶಿವನಂಜಪ್ಪನವರು 21ನೇ ಶತಮಾನದಲ್ಲಿ ಶರಣತತ್ವ ಪ್ರಚಾರದಲ್ಲಿ ಮಹಿಳೆಯರ ಪಾತ್ರ ವಿಷಯದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.
ಶರಣೆ ನಾಗರತ್ನಮ್ಮ ಗುಂಡಪ್ಪನವರು 12ನೇ ಶತಮಾನದ ಶರಣ ಶರಣೆಯರ ವಚನಗಳಲ್ಲಿ ಕಾಣುವ ಮಹಿಳೆಯರ ಸಬಲೀಕರಣ ವಿಷಯದ ಬಗ್ಗೆ ಮಾತನಾಡಿದರು. ಶರಣೆಯರಾದ ಸೋಮವ್ವೆ, ಕಲ್ಲವ್ವೆ, ಆಯ್ದಕ್ಕಿ ಲಕ್ಕವ್ವ, ಸೊಳೆ ಸಂಕವ್ವ ಮುಂತಾದ ಶರಣೆಯರ ವಚನಗಳನ್ನು ಉಲ್ಲೇಖಿಸಿ, ಅವರು ಅನುಭವ ಮಂಟಪ್ಪಕ್ಕೆ ಬಂದು ಕುಳಿತು ವಚನಗಳನ್ನು ಬರೆದು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದು ಸಬಲೀಕರಣ ಅಲ್ಲವೆ ಎಂದು ಪ್ರಶ್ನೆ ಮಾಡಿದರು.
ಡಾ. ಅಂಬಿಕಾ ಶಿವನಂಜಪ್ಪ, ನಾಗರತ್ನಮ್ಮ ಗುಂಡಪ್ಪ, ಸೀಹಳ್ಳಿ ಶಿವಮಲ್ಲಪ್ಪ, ಸಮಾಜಸೇವಕ ಶ್ರೀ ಕಂಠಸ್ವಾಮಿ, ವೃಷಬೇಂದ್ರ ಮತ್ತು ಶಿವರುದ್ರಪ್ಪನವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಬಸವಭಾರತ ಪ್ರತಿಷ್ಠಾನದ ಶಿವರುದ್ರಪ್ಪನವರು ಟ್ರಸ್ಟ್ ನ ಅಧ್ಯಕ್ಷರಾದ ಮಾದೇಶನವರನ್ನು ಆತ್ಮೀಯವಾಗಿ ಸನ್ಮಾನಿಸಿದರು ಮತ್ತು ಪ್ರತಿಷ್ಠಾನದ ವತಿಯಿಂದ 5000 ಸಾವಿರ ರುಪಾಯಿಯಗಳನ್ನು ಕೊಡುವುದಾಗಿ ಘೋಷಣೆ ಮಾಡಿದರು .
ವೃಷಬೇಂದ್ರರವರು ವಚನ ಗಾಯನ ಮಾಡಿದರು . ಬಸವ ಯುವ ಪ್ರತಿಭೆ ದೀಕ್ಷೆ ಚಾಣುಕ್ಯರೇಬಂತ್ ಸಹ ವಚನ ಪಠಣ ಮಾಡಿದರು .
ಕಲಾವಿದ ಶಿವಲಿಂಗಪ್ಪನವರು ಬರೆದಿರುವ ಪುಸ್ತಕಗಳನ್ನು ಉಚಿತವಾಗಿ ಕೊಡಲಾಯಿತು .
ಜ್ಯೋತಿರ್ಗಮಯ ಟ್ರಸ್ಟ್ ವತಿಯಿಂದ ಎಲ್ಲರಿಗು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು .
ಬಸವಭಾರತ ಪ್ರತಿಷ್ಠಾನ ಮತ್ತು ಜ್ಯೋತಿರ್ಗಮಯ ಉಚಿತ ಮಹಿಳಾ ವಿದ್ಯಾರ್ಥಿನಿಲಯ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.