ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಏನ್ ತಿಪ್ಪಣ್ಣ ಲಿಂಗೈಕ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬಳ್ಳಾರಿ

ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಏನ್ ತಿಪ್ಪಣ್ಣ ಇಂದು ಮುಂಜಾನೆ ತಮ್ಮ ಬಳ್ಳಾರಿಯ ನಿವಾಸದಲ್ಲಿ ಲಿಂಗೈಕ್ಯರಾಗಿದ್ದಾರೆ.

97 ವರ್ಷಗಳ ಸಾಧಕರ ಜೀವನವನ್ನು ನಡೆಸಿದ್ದ ಶರಣರು ಒಬ್ಬ ಮಗ ಹಾಗೂ 54 ಸದಸ್ಯರಿರುವ ತುಂಬು ಕುಟುಂಬವನ್ನು ಅಗಲಿದ್ದಾರೆ.

ಇಂದು ಅವರ ಅಂತಿಮ ದರ್ಶನಕ್ಕೆ ಬಳ್ಳಾರಿಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಾಳೆ (ಜೂಲೈ 12) ಬೆಳಿಗ್ಗೆ 11 ಗಂಟೆಗೆ ಅವರ ಸ್ವಗ್ರಾಮವಾದ ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ತಿಳಿಸಿದ್ದಾರೆ.

58 ವರ್ಷಗಳ ಕಾಲ ಸತತವಾಗಿ ವಕೀಲರಾಗಿ ಕಾಯಕ ಸಲ್ಲಿಸಿದ್ದ ತಿಪ್ಪಣ್ಣನವರು ಅನೇಕ ಜನಪರ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ನಾಲ್ಕು ದಶಕಗಳ ಕಾಲ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸುಮಾರು 41 ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದರು.

ರಾಜಕೀಯದಲ್ಲಿ ಮೂರು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಎರಡು ಬಾರಿ ವಿಧಾನ ಪರಿಷತ್ತಿನ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು. ಮೂರು ವರ್ಷ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ದುಡಿದು ರಾಜಕೀಯದಿಂದ ನಿವೃತ್ತರಾಗಿದ್ದರು.

ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ನಂತರ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
5 Comments
  • ೪೧ ಸಂಘ ಸಂಸ್ಥೆಗಳನ್ನು ಕಟ್ಟುವುದರ ಮೂಲಕ ಸುಂದರ ಬದುಕು ಸಾಗಿಸುವ, ಅವರ ಸೇವೆಗಾಗಿ ಧನ್ಯವಾದಗಳು. ಅವರ ಆತ್ಮಕ್ಕೆ ಚಿರ ಶಾಂತಿ ನೆಮ್ಮದಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ. ಶರಣು ಶರಣಾರ್ಥಿ

    • ಲಿಂಗಾಯತರ ನಾಯಕ, ಎನ. ತಿಪ್ಪಣ್ಣ ಇಂದು ಮುಂಜಾನೆ ತಮ್ಮ ಬಳ್ಳಾರಿಯ ನಿವಾಸದಲ್ಲಿ ಲಿಂಗೈಕ್ಯರಾಗಿದ್ದಾರೆ.

      97 ವರ್ಷಗಳ ಸಾಧಕರ ಜೀವನವನ್ನು ನಡೆಸಿದ್ದ ಶರಣರು ಒಬ್ಬ ಮಗ ಹಾಗೂ 54 ಸದಸ್ಯರಿರುವ ತುಂಬು ಕುಟುಂಬವನ್ನು ಅಗಲಿದ್ದಾರೆ.

      ಇಂದು ಅವರ ಅಂತಿಮ ದರ್ಶನಕ್ಕೆ ಬಳ್ಳಾರಿಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಾಳೆ (ಜೂಲೈ 12) ಬೆಳಿಗ್ಗೆ 11 ಗಂಟೆಗೆ ಅವರ ಸ್ವಗ್ರಾಮವಾದ ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ರೇಣುಕಾ ಪ್ರಸನ್ನ ತಿಳಿಸಿದ್ದಾರೆ.

      58 ವರ್ಷಗಳ ಕಾಲ ಸತತವಾಗಿ ವಕೀಲರಾಗಿ ಕಾಯಕ ಸಲ್ಲಿಸಿದ್ದ ತಿಪ್ಪಣ್ಣನವರು ಅನೇಕ ಜನಪರ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ನಾಲ್ಕು ದಶಕಗಳ ಕಾಲ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸುಮಾರು 41 ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದರು.

      ರಾಜಕೀಯದಲ್ಲಿ ಮೂರು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಎರಡು ಬಾರಿ ವಿಧಾನ ಪರಿಷತ್ತಿನ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು. ಮೂರು ವರ್ಷ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ದುಡಿದು ರಾಜಕೀಯದಿಂದ ನಿವೃತ್ತರಾಗಿದ್ದರು.

      ಇವರು ಅನೇಕ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಮಾಡುತ್ತಾ ಲಿಂಗಾಯತ ಸಮಾಜಕ್ಕೆ ಸೇವೆ ಸಲ್ಲಿಸಿದ್ದರು.

      ಇಷ್ಟು ಸಾಕು ತಾನೇ.

  • ಸಮಾಜ ಸೇವೆ ಮಾಡುವ ಮೂಲಕ ಸುಂದರ ಬದುಕು ಸಾಗಿಸಿದ, ಅವರ ಸೇವೆಗಾಗಿ ಧನ್ಯವಾದಗಳು. ಅವರ ಆತ್ಮಕ್ಕೆ ಚಿರ ಶಾಂತಿ ನೆಮ್ಮದಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ. ಶರಣು ಶರಣಾರ್ಥಿ

  • ವೀರಶೈವ ಮಹಾಸಭೆ ಈ ಸಂಘಟನೆ ಲಿಂಗಾಯತ ಧರ್ಮದ ಹೆಸರು ಅಳಿಸಲು ಕಟ್ಟಿದ ಸಂಸ್ಥೆ. ಆ ಹೆಸರನ್ನು ಪದೇ ಪದೇ ಹೇಳುವ ಮೂಲಕ ಆ ಸಂಘಟನೆಯ ಪ್ರಚಾರ ನಾವೇ ಮಾಡಿದಂತೆ ಆಗುತ್ತದೆ.
    ಕಾರಣ ಆ ಸಂಸ್ಥೆಯ ಹೆಸರು ಹೇಳದೆ ಇವರ ವಿವರ ಕೊಡಬೇಕಿತ್ತು. ಹಾಗೆ ಮಾಡುವುದರಿಂದ ಈ ಸಂಘಟನೆಯನ್ನು ಜನರ ಮನಸ್ಸಿನಿಂದ ತೊಡೆದು ಹಾಕಬಹುದು.

    • ಯಾವ ವಿಷಯ ಎಲ್ಲಿ ಪ್ರಸ್ತಾಪ ಮಾಡಬೇಕು ಎನ್ನುವುದು ಗೊತ್ತಿಲ್ಲದ ನೀವು, ಬಸವಣ್ಣನ ಅನುಯಾಯಿ ಅನ್ನುವ ಸಂಶಯ

Leave a Reply

Your email address will not be published. Required fields are marked *