ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಬಸವ ತತ್ವ ಕಾರ್ಯಕ್ರಮ

ಪ್ರಸನ್ನ. ಎಸ್. ಎಂ
ಪ್ರಸನ್ನ. ಎಸ್. ಎಂ

ಮೈಸೂರು

ನಗರದ ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಬಸವಾದಿಶರಣರ ಆಧ್ಯಾತ್ಮ ಮತ್ತು ಉಪನ್ಯಾಸ ಕಾರ್ಯಕ್ರಮ ಬುಧವಾರ ನಡೆಯಿತು.

ಪ್ರಾಧ್ಯಾಪಕರಾದ ಡಾ.ಡಿ.ಎಂ. ಮಹೇಂದ್ರ ಕುಮಾರ್ ರವರು ಬಸವಣ್ಣನವರು “ವಚನಗಳಲ್ಲಿ ವೈಚಾರಿಕತೆ” ವಿಷಯದ ಬಗ್ಗೆ ಮಾತನಾಡಿದರು. ಹೆಚ್. ನರಸಿಂಹಯ್ಯನವರು ಯಾವುದನ್ನು ಪ್ರಶ್ನೆ ಮಾಡಿದೆ ಒಪ್ಪಿಕೊಳ್ಳಬಾರದೆಂದು ಹೇಳಿರುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ವೈಚಾರಿಕತೆ ಇರುವ ಬಸವಣ್ಣನವರ ವಚನಗಳನ್ನು ಉಲ್ಲೇಖ ಮಾಡಿ ಮಾತನಾಡಿದರು.

ಪೂಜ್ಯ ಶ್ರೀ ಬಸವಯೋಗಿ ಪ್ರಭುಗಳು ಬಸವಾದಿ ಶರಣರ ಅಧ್ಯಾತ್ಮದ ಬಗ್ಗೆ ಮಾತನಾಡುತ್ತಾ ದೇಹವನ್ನು ದೇಗುಲ ಮಾಡಿಕೊಳ್ಳಬೇಕು, ಯಾವುದೇ ಧರ್ಮ ನಿಜವಾದ ಧರ್ಮವಾಗ ಬೇಕಾದರೆ ಅದು ದಯೆಯನ್ನು ಬೋಧಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದ ರೂವಾರಿಗಳಾದ ಮತ್ತು ಕೇಂದ್ರದ ಅಧ್ಯಕ್ಷರಾದ ಪ್ರಭುದೇವರು ಬಸವಾದಿ ಶರಣರ ಮತ್ತು ಇಂದಿನ ಸಭೆಯಲ್ಲಿ ಮಾತನಾಡಿದ ಗಣ್ಯವ್ಯಕ್ತಿಗಳು ಹೇಳಿದ ತತ್ತ್ವಗಳನ್ನು ಅಳವಡಿಸಿಕೊಳ್ಳುವ ಪ್ರಯತ್ತ ಮಾಡುತ್ತೆವೆಂದು ಹೇಳಿದರು.

ಬಸವತತ್ವ ಪ್ರಚಾರಕರಾದ ಚೌಹಳ್ಳಿ ನಿಂಗರಾಜಪ್ಪಪನವರು ಬಸವಾದಿ ಶರಣರು ಮೌಢ್ಯಮುಕ್ತ ಸಮಾಜ ನಿರ್ಮಿಸಲು ವಚನಗಳನ್ನು ಬಳಸಿಕೊಂಡರೆಂದು ತಿಳಿಸಿದರು.

ಹಿರಿಯ ಮಹಿಳಾ ಸದಸ್ಯರು ವಚನಗಳನ್ನು ಹಾಡಿ ಸಂವಾದದಲ್ಲೂ ಪಾಲ್ಗೊಂಡರು. ಮ್ಯಾನೇಜರ್ ಸಿದ್ದರಾಮಪ್ಪನವರು ಮತ್ತು ಆನೇಕ ಸಭಿಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಮಾಜಸೇವಕರು ಮತ್ತು ಹೆಸರಾಂತ ಸಿವಿಲ್ ಎಂಜಿನಿಯರ್ ಮಲೆಯೂರು ಸೋಮಶೇಖರ್ ರವರನ್ನು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು .

ಬಸವಭಾರತ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರುದ್ರಪ್ಪನವರು ಎಲ್ಲರನ್ನು ಸ್ವಾಗತಿಸಿ ವಚನ ಪ್ರಾರ್ಥನೆ ಮಾಡಿದರು. ಡಾ.ಮಹೆಂದ್ರ ಕುಮಾರ್ ರವರನ್ನು ಮತ್ತು ಪ್ರಭುದೇವರನ್ನು ಬಸವಪ್ರತಿಷ್ಟಾನದ ಪರವಾಗಿ ಸನ್ಮಾನಿಸಲಾಯಿತು.

ಬಸವಭಾರತ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

Share This Article
Leave a comment

Leave a Reply

Your email address will not be published. Required fields are marked *