ಬೆಂಗಳೂರು
ಹೊಸ ವರ್ಷದ ಸಂಭ್ರಮದ ಅಂಗವಾಗಿ ತಮಿಳು ನಟ ಮತ್ತು ಡ್ಯಾನ್ಸರ್ ಪ್ರಭುದೇವ ಅವರ ದೀರ್ಘ ಸಂದರ್ಶನ ಗುರುವಾರ ಸುವರ್ಣ ಟಿವಿಯಲ್ಲಿ ನಡೆಯಿತು. ಅವರು ತಮ್ಮ ಹಿನ್ನಲೆಯ ಬಗ್ಗೆ ಮಾತನಾಡುತ್ತ ನನಗೆ ಬಸವಣ್ಣ ಅಂದರೆ ಇಷ್ಟ ಎಂದು ಹೇಳಿದರು.
ನಂತರ ಅಭಿಮಾನಿಯೊಬ್ಬರು ಯಾಕೆ ನಿಮಗೆ ಬಸವಣ್ಣ ಅಂದರೆ ಇಷ್ಟ, ಯಾವುದಾದರು ಒಂದು ವಚನ ಹೇಳುತ್ತೀರಾ ಎಂದು ಕೇಳಿದರು.
ಅದಕ್ಕೆ ಪ್ರಭುದೇವ ಮನೆಯಲ್ಲಿ ಚಿಕ್ಕಂದಿನಿಂದ ರಾಜನ ಶೈಲಿಯಲ್ಲಿ ಕುಳಿತಿರುವ ಬಸವಣ್ಣನವರ ಫೋಟೋ ನೋಡಿ ಬೆಳೆದಿದ್ದೇನೆ. ದಿನಾ ಅವರಿಗೆ ಪೂಜೆ ಮಾಡುತ್ತೇವೆ ಎಂದು ತಮಿಳ್ಗನ್ನಡದಲ್ಲಿ ಕಷ್ಟಪಟ್ಟು ಹೇಳಿದರು. ಆದರೆ ಯಾವ ವಚನವೂ ಹೇಳಿದ ಹಾಗೆ ಕಾಣಿಸಲಿಲ್ಲ.
ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಸುಂದರ್ ಅವರ ಮಗ ಪ್ರಭುದೇವ. ಅವರ ತಂದೆ ಚೆನ್ನೈನಲ್ಲಿ ನೆಲಸಿ ತಮಿಳು ಸಿನೆಮಾ ರಂಗದಲ್ಲಿ ಹೆಸರು ಮಾಡಿದ್ದಾರೆ.
ಬಹಳಷ್ಟು ಲಿಂಗಾಯತ ಕುಟುಂಬಗಳಂತೆ ಬಸವವಣ್ಣನವರ ತತ್ವ, ಸಿದ್ದಾಂತ ಮರೆತರೂ ಫೋಟೋ ಹಾಕಿ ಪೂಜೆ ಮಾಡುವುದನ್ನು ಸುಂದರ್ ಕುಟುಂಬ ನಿಲ್ಲಿಸಿಲ್ಲ.
Super.