ನಂಜನಗೂಡಿನ ದೇವಿರಮ್ಮನ ಹಳ್ಳಿಯಲ್ಲಿ ಉಪನ್ಯಾಸ ಕಾರ್ಯಕ್ರಮ

ಪ್ರಸನ್ನ. ಎಸ್. ಎಂ
ಪ್ರಸನ್ನ. ಎಸ್. ಎಂ

ನಂಜನಗೂಡು ಪಟ್ಟಣದ ದೇವಿರಮ್ಮನ ಹಳ್ಳಿಯಲ್ಲಿರುವ ಪರಮೇಶರವರ ಮನೆಯಲ್ಲಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಸೋಮವಾರ ನಡೆಯಿತು.

ಅಕ್ಕಮಹಾದೇವಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ವಚನ ಪ್ರಾರ್ಥನೆ ಮಾಡಿದರು.

ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು ವಚನಗಳಲ್ಲಿ ವ್ಯಕ್ತಿತ್ವ ವಿಕಾಸನ ವಿ‌ಷಯದ ಬಗ್ಗೆ ಮಾತನಾಡಿದರು. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ವಚನವನ್ನು ಉಲ್ಲೇಖಿಸಿ ಅಂಧಕಾರ ಅಳಿದಾಗ ಮಾತ್ರ ಸುಜ್ಞಾನ ಬರಲು ಸಾಧ್ಯ, ಇದರಿಂದ ಅಂತರಂಗದ ವಿಕಾಸವಾಗುತ್ತದೆ ಎಂದು ಹೇಳಿದರು.

ಜಾಗತಿಕ ಲಿಂಗಾಯತ ನಂಜನಗೂಡು ತಾಲ್ಲೂಕು ಘಟಕದ ಅಧ್ಯಕ್ಷರಾದ ನಂದೀಶರವರು ಮಾತನಾಡಿದರು. ಬಸವಭಾರತ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರುದ್ರಪ್ಪನವರು ಪ್ರತಿಷ್ಠಾನದ ಆಶಯಗಳನ್ನು ತಿಳಿಸಿದರು .

ಬಸವಯೋಗಿಪ್ರಭು ಸ್ವಾಮೀಗಳನ್ನು ಮತ್ತು ದೇವಿರಮ್ಮನಹಳ್ಳಿಯ ಚಿಕ್ಕ ಯಜಮಾನರನ್ನು ಸನ್ಮಾನಿಸಲಾಯಿತು.

ಕಲಾವಿದರಾದ ಶಿವಲಿಂಗಪ್ಪನವರು ಬರೆದಿರುವ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ಕೊಡಲಾಯಿತು.

ಬಸವಭಾರತ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ನಂಜನಗೂಡು ತಾಲ್ಲೂಕು ಘಟಕದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.

Share This Article
Leave a comment

Leave a Reply

Your email address will not be published. Required fields are marked *