ನಂಜನಗೂಡಿನಲ್ಲಿ ಸಂಭ್ರಮದ ಅಕ್ಕಮಹಾದೇವಿ ಜಯಂತಿ ಆಚರಣೆ

ಬಿ. ಚನ್ನಪ್ಪ
ಬಿ. ಚನ್ನಪ್ಪ

ನಂಜನಗೂಡು

ನಗರಸಭಾ ವ್ಯಾಪ್ತಿಯ ಅಕ್ಕಮಹಾದೇವಿ ನಗರ, ವಿದ್ಯಾನಗರ ಹಾಗೂ ಹಲವು ಗ್ರಾಮಗಳ ಬಸವ ಭಕ್ತರು ಸೇರಿ 3ನೇ ವರ್ಷದ ಜಗನ್ಮಾತೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಲಾಯಿತು.

ಅಕ್ಕಮಹಾದೇವಿ ನಗರ ಹಾಗು ವಿದ್ಯಾನಗರದ ಹಲವು ರಸ್ತೆಗಳಿಗೆ ವಿಶೇಷವಾಗಿ ಶರಣ ಹೆಸರಿನ ನಾಮಫಲಕಗಳನ್ನ ಅಳವಡಿದ್ದು ಎಲ್ಲರ ಮೆಚ್ಚುಗೆ ಪಡೆಯಿತು.

ಮೊದಲಿಗೆ ಅಕ್ಕಮಹಾದೇವಿ ವೃತ್ತ ಹಾಗೂ ರಸ್ತೆಯ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಉಳಿದ ಶರಣರ ರಸ್ತೆಯ ನಾಮಫಲಕಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಸಿದ್ದಗಂಗಾ ಶ್ರೀ, ಹಡಪದ ಅಪ್ಪಣ್ಣ, ಗೆಜ್ಜಗಾರ ಘಟ್ಟಿವಾಳಯ್ಯ, ಬಸವಯೋಗಿ ಸಿದ್ದರಾಮೇಶ್ವರ ಅವರ ನಾಮಫಲಕವನ್ನು ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಲ್ಲರ ಕೈಯಿಗೆ ವಚನ ಪ್ರತಿಗಳನ್ನ ಕೊಟ್ಟು ಎಲ್ಲರಿಂದ ವಚನ ಪಠಣ ಮಾಡಿಸುವ ಮುಖಾಂತರ ಶಿಕ್ಷಕರಾದ ನಂದೀಶ್ವರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರಾದ ದರ್ಶನ್ ಧೃವನಾರಾಯಣ ಅವರು, 12 ನೇ ಶತಮಾನದಲ್ಲಿ ಸಮಾಜದ ಒಳತಿಗಾಗಿ ವಚನಗಳ ಮೂಲಕ ಸರಿದಾರಿಗೆ ತರಲು ಪ್ರಯತ್ನಿಸಿದ ಮಹಾಮಾತೆ ಅಕ್ಕಮಹಾದೇವಿ ಎಂದರು.

ಕಾರ್ಯಕ್ರಮದಲ್ಲಿ ನಂಜನಗೂಡು ತಾಲ್ಲೂಕು ಪೋಲಿಸ್ ಡಿವೈಎಸ್ಪಿ ರಘು ರವರು ಭಾಗವಹಿಸಿ ಮಾತನಾಡಿದರು.

ನಿಕಟಪೂರ್ವ ಶಾಸಕ ಕಳಲೆ ಕೇಶವಮೂರ್ತಿ ಭಾಗವಹಿಸಿ ಮಾತನಾಡಿದರು. ಹಾಗು ಅ.ಭಾ. ಲಿಂಗಾಯತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿದರು.

ಕೃಷಿಕರು ಹಾಗು ಶರಣತತ್ವ ಅಧ್ಯಯನಕಾರರಾದ ದೇವನೂರು ಪ್ರಶಾಂತಣ್ಣ ಅಕ್ಕಮಹಾದೇವಿಯವರ ವಿಚಾರ ಮತ್ತು ಬಸವಣ್ಣನವರ ಶರಣ ಧರ್ಮದ ತತ್ವಸಿದ್ದಾಂತಗಳನ್ನು ಪರಿಚಯ ಮಾಡಿಕೊಟ್ಟರು. ಎಲ್ಲರ ಜೀವನದಲ್ಲಿ ಬರಬಹುದಾದ ಸಮಸ್ಯೆಗಳಿಗೆ ಹೆದರದೆ ಜೀವಿಸುವ ವಿಚಾರಗಳನ್ನ ಶರಣರ ವಚನಗಳನ್ನ ಉದಾಹರಣೆಯ ಸಮೇತ ಅನುಭಾವ ನೀಡಿದರು.

ಸ್ಥಳೀಯ ಬಡಾವಣೆಗಳ ಸಮಸ್ಯೆಗಳು ಮತ್ತು ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕರಿಗೆ ಮತ್ತು ಡಿವೈಎಸ್ಪಿ ಯವರಿಗೆ ಅಲ್ಲಿನ ನಿವಾಸಿಗಳು ಮನವಿಯನ್ನು ಸಲ್ಲಿಸಿದರು.

ಕಾರ್ಯಕ್ರಮದ ಸಂಯೋಜಕರು ಬಸವಯೋಗೇಶ, ಸುತ್ತೂರು ಶಿವಣ್ಣ, ಉದ್ಯಮಿ ಹೊರಳವಾಡಿ ಮಹೇಶ್, ಎಂ.ಡಿ. ಬಾಲರಾಜ, ರಾಜಶೇಖರ, ಬಸಪ್ಪ , ನಂಜುಂಡಸ್ವಾಮಿ, ಕಬ್ಬಳ್ಳಿ ಶಿವು, ಆನಂದ, ಮಹದೇವಸ್ವಾಮಿ, ಅಮರ, ಜಗದೀಶ, ಕೆರೆಹುಂಡಿ ನಂಜುಂಡಸ್ವಾಮಿ, ಅಶೋಕ ಮುದ್ದಹಳ್ಳಿ, ಅ.ಭಾ.ಲಿಂ. ವಿ. ಮಹಾಸಭಾದ ನಿರ್ದೇಶಕಿ ಕೋಮಲ ಮಹಾಲಿಂಗಸ್ವಾಮಿ, ಎನ್. ವಿ. ನಾಗೇಶ, ಮಕ್ಕಳ ಮನೆ ಸೋಮಶೇಖರಮೂರ್ತಿ, ಆಯರಳ್ಳಿಯ ಪ್ರಭುಸ್ವಾಮಿ, ರಾಚಪ್ಪನವರು, ಎನ್.ವಿ. ಶಿವಲಿಂಗಪ್ಪ, ಬದನವಾಳು ಮಹದೇವಪ್ಪ, ಗೆಜ್ಜೆಗಾರ ಸಂಘದ ಮುಖಂಡ ಪುಟ್ಟಸ್ವಾಮಿ, ಸ್ನೇಕ್ ಬಸವರಾಜು, ಭೋವಿ, ಹಡಪದ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ವಿವಿಧ ಗ್ರಾಮ ಮತ್ತು ಸಂಘಟನೆಗಳ ಮುಖ್ಯಸ್ಥರು, ಸ್ಥಳೀಯ ಬಡಾವಣೆಗಳ ನಿವಾಸಿಗಳೆಲ್ಲರು ಸಂಭ್ರಮದಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಶಿಕ್ಷಕಿ ಅನ್ನಪೂರ್ಣ ನಿರೂಪಣೆ, ಪ್ರಾರ್ಥನೆಯನ್ನು ಮಹೇಂದ್ರ, ಸ್ವಾಗತವನ್ನು ಬಾಷ್ಪಾಂಜಲಿ, ವಂದನಾರ್ಪಣೆಯನ್ನು ಹದಿನಾರು ಮಹೇಶ ಮಾಡಿದರು. ಕುಮಾರಿ ಜೀವಿಕ, ಕುಮಾರಿ ರಿಷಿಕಾ , ಕುಮಾರ ವೇದಮೂರ್ತಿ ವಚನ ಹಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
1 Comment
  • ಶರಣರ ವಿಚಾರಧಾರೆಗಳು ಪರಿಮಳದಂತೆ ಹರಡಿ ಜಗತ್ತಿನ ಎಲ್ಲರ ಮನ ತಲುಪುತ್ತಿವೆ

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು