ನಂಜನಗೂಡು:
ಫ. ಗು. ಹಳಕಟ್ಟಿ ನಗರದಲ್ಲಿ 5ನೇ ವರ್ಷದ ‘ಬಸವ ಮಾಸ’ ಆಚರಣೆಯನ್ನು ಬಸವ ಮಾಸ ಸಮಿತಿಯು, ಡಿಸೆಂಬರ್ 13, 2025ರಿಂದ 11 ಜನೇವರಿ 2026ರವರೆಗೆ 30 ದಿನಗಳ ಕಾಲ ಬಸವಾದಿ ಶರಣರ ಜೀವನ ಮೌಲ್ಯ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಒಂದು ತಿಂಗಳು ಕಾಲ ನಡೆಯುವ ಬಸವಾದಿ ಶರಣರ ಪ್ರವಚನ ಹಾಗೂ ಮಕ್ಕಳ ಶರಣ ಛದ್ಮವೇಷ, ವಚನ ಗಾಯನ, ವಚನ ಕಂಠಪಾಠ, ಶರಣರ ಭಾವಚಿತ್ರ ಬರೆಯುವುದು ಸೇರಿ ಹೀಗೆ ಹಲವು ಕಾರ್ಯಕ್ರಮಗಳು ನಡೆಯುತ್ತವೆ.
ಪ್ರತಿನಿತ್ಯ 500ಕ್ಕೂ ಹೆಚ್ಚು ಭಕ್ತರು ಭಾಗಿಯಾಗಲಿದ್ದು, ಪ್ರವಚನ ನಡೆಸಲು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಹಲವು ಸ್ವಾಮೀಜಿಗಳು, ಅನುಭಾವಿಗಳು ಬಂದು ಪ್ರವಚನ ನಡೆಸಿಕೊಡಲಿದ್ದಾರೆ. ಮೈಸೂರು ಜಿಲ್ಲೆಯ ಹಲವು ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.


ಬಹಳ ವಿಶೇಷವಾಗಿ ಮಹಿಳೆಯರೇ ಭಾಗವಹಿಸುವ ನಂಜನಗೂಡಿನ ಈ ಕಾರ್ಯಕ್ರಮವು ತಾಲೋಕಿನಾದ್ಯಂತ ಬಸವ ಭಕ್ತರ ಆಕರ್ಷಣೆಯಾಗಿದೆ