ನಂಜನಗೂಡು
ದಾಂಪತ್ಯ ಜೀವನಕ್ಕೊಂದು ಧರ್ಮದ ತಳಹದಿ ನೀಡಿ ಸಂನ್ಯಾಸ ಹಿರಿದಲ್ಲ,ಸಂಸಾರ ಕಿರಿದಲ್ಲ ಎಂದು ಶರಣರು ಸಾರಿದರು. ಸಂಸಾರಸ್ಥ ಬದುಕನ್ನ ಉನ್ನತಕ್ಕೇರಿಸಿ ಶಿವಚಿಂತನೆಯೊಂದಿಗೆ ಬದುಕುವ ದಾರಿ ಬಸವಾದಿ ಶರಣರು ತೋರಿಸಿದರು, ಎಂದು ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು ಮಂಗಳವಾರ ಹೇಳಿದರು.
ಪಟ್ಟಣದಲ್ಲಿ ‘ಬಸವಣ್ಣನವರ ಜೀವನ ದರ್ಶನ’ ಎಂಬ ವಿಚಾರವಾಗಿ ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು 30 ದಿನಗಳ ಪ್ರವಚನ ನೀಡುತ್ತಿದ್ದಾರೆ. ಫ.ಗು. ಹಳಕಟ್ಟಿನಗರದಲ್ಲಿ ನಾಲ್ಕನೇ ವರ್ಷದ ಬಸವ ಮಾಸ ಕಾರ್ಯಕ್ರದ ಅಂಗವಾಗಿ ಪ್ರವಚನ ನಡೆಯುತ್ತಿದೆ.

ಬಸವ ಮಾಸ ಸಮಿತಿಯ ಅಧ್ಯಕ್ಷರಾದ ಆಯರಳ್ಳಿಯ ಪ್ರಭುಸ್ವಾಮಿ ದಂಪತಿಗಳು ಹಾಗು ಬಸವೇಶ್ವರಿ ಮಾತಾಜಿಯವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹೇಶ್ ಕಲ್ಪುರ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ವೃಷಬೇಂದ್ರ ಅವರಿಂದ, ಪ್ರಾರ್ಥನೆ ಶ್ರೀಮತಿ ಜ್ಯೋತಿ ಸುರೇಶ್ ಅವರಿಂದ, ವಂಧನಾರ್ಪಣೆ ಸುರೇಶ್ ಹಂಗಳಪುರ ಅವರಿಂದ ನಡೆಯಿತು. ವೃಷಭೇಂದ್ರ ಸಾಮಾನ್ಯ ತಿಳುವಳಿಕೆ ನೀಡಿದರು.

ವೈ.ಎಸ್. ಲಿಂಗರಾಜೆ ಅರಸ್, ಕಲ್ಬುರ್ಗಿ, ದಿನದ ಪ್ರಸಾದ ದಾಸೋಹಿಗಳಾಗಿದ್ದರು.
