ನಮ್ಮಲಿರುವ ದೇವರ ಅರಿಯಲು ದಾರಿ ತೋರಿದ ಬಸವಣ್ಣ: ಕುರಕುಂದಿ ರುದ್ರಪ್ಪ

ಬಿ. ಚನ್ನಪ್ಪ
ಬಿ. ಚನ್ನಪ್ಪ

ನಂಜನಗೂಡು

ಬಸವ ಪೂರ್ವ ಯುಗದಲ್ಲಿ ದೇವರ ಬಗ್ಗೆ ಇದ್ದ ಕಲ್ಪನೆಗೂ, ಬಸವಣ್ಣನವರ ದೇವರ ಕಲ್ಪನೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಮಾಸ ಸಮಿತಿಯ ಕಾರ್ಯಕ್ರಮದಲ್ಲಿ ಕುರಕುಂದಿ ರುದ್ರಪ್ಪನವರು ಅನುಭಾವ ನೀಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಯೊಬ್ಬರಿಗೂ ತಮ್ಮೊಳಗಿರುವ ಅಂತರ್ಗತ ದೇವರ ಅರಿವಿನ ಬಗ್ಗೆ ಜಾಗೃತಿ ಮೂಡಿಸಿದರು.

ಪ್ರತಿಯೊಬ್ಬರು ಸಕಲ ಜೀವಾತ್ಮರಿಗೂ ಲೇಸನ್ನು ಬಯಸುತ್ತಾ ಸಾಮಾಜಿಕ ಒಳಿತಿಗಾಗಿ ಬದುಕುತ್ತಾ, ಸಂಸಾರದಲ್ಲಿದ್ದುಕೊಂಡೇ ಕಾಯಕ, ದಾಸೋಹ ತತ್ವಗಳ ಮೂಲಕ ಸಾರ್ಥಕ ಬದುಕನ್ನು ನಡೆಸಿ ದೇವರನ್ನು ಕಾಣುವ ದಾರಿಯನ್ನು ಬಸವಣ್ಣನವರು ತೋರಿಸಿದರು ಎಂದು ರುದ್ರಪ್ಪ ಹೇಳಿದರು.

ಕಂದಾಯ ಇಲಾಖೆಯಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರುದ್ರಪ್ಪನವರನ್ನು ಸಮಿತಿಯ ಸದಸ್ಯ ಬಸವಯೋಗೇಶ್ ಮಾಡಿದರು. ಬಸವಣ್ಣನವರ ಭಾವಚಿತ್ರಕ್ಕೆ ಭಾವಪೂಜೆ ಆಯರಳ್ಳಿ ಪ್ರಭುಸ್ವಾಮಿ ದಂಪತಿಗಳು ನೆರವೇರಿಸಿದರು.

ಎಂದಿನಂತೆ ನಿರೂಪಣೆ, ಪ್ರಾರ್ಥನೆ, ಸ್ವಾಗತ, ಸಾಮಾನ್ಯ ಜ್ಞಾನ ಮುಂತಾದ ಕಾರ್ಯಕ್ರಮಗಳೂ ನಡೆದವು.

Share This Article
1 Comment
  • ಅನುಭಾವ ಪ್ರವಚನ ನಡೆಸಿಕೊಟ್ಟನಂಜನಗೂಡಿನ ಬಸವ ಸಮಿತಿ ಮತ್ತು ಅನುಭಾವ ನೀಡಿದ ಪಿ. ರುದ್ರಪ್ಪ ಶರಣರಿಗೆ ಅನಂತ ಶರಣು ಶರಣಾರ್ಥಿಗಳು. 🙏🏽🙏🏽🙏🏽

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು