ಬಸವಣ್ಣ ಪ್ರತಿಮೆ ವಿರೂಪ: ನಂಜನಗೂಡಿನಲ್ಲಿ ಬಸವ ಸಂಘಟನೆಗಳ ಪ್ರತಿಭಟನೆ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ

ನಂಜನಗೂಡು

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಹಲವು ಬಸವಪರ ಸಂಘಟನೆಗಳ ಸದಸ್ಯರು ಭಾಲ್ಕಿ ತಾಲೂಕಿನ ದಾಡಗಿನಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಪ್ರತಿಮೆಯನ್ನು ವಿರೂಪಗೊಳಿಸಿರುವುದನ್ನು ಖಂಡಿಸಿ ಗುರುವಾರ ಬೆಳಗ್ಗೆ ಪ್ರತಿಭಟನೆ ಮಾಡಿದರು.

ತಾಲೂಕು ಆಡಳಿತ ಕಚೇರಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್ ಎಂ ಕೆಂಪಣ್ಣನವರು ಮಾತನಾಡಿ ನಮ್ಮ ಸಮಾಜದ ಮೇಲೆ ನಿರಂತರ ದಬ್ಬಾಳಿಕೆಗಳು ನಡೆಯುತ್ತಿದೆ. ಬೆಳಗಾಂ ಅಧಿವೇಶನದ ಸಂದರ್ಭದಲ್ಲಿ ಪಂಚಮಸಾಲಿಗಳ ಮೇಲೆ ಲಾಠಿಚಾರ್ಜ್ ನಡೆಯಿತು, ಬೆಂಗಳೂರಿನಲ್ಲಿ ಸಿದ್ದಗಂಗಾ ಶ್ರೀಗಳ ಪ್ರತಿಮೆ ವಿರೂಪಗೊಳಿಸಲಾಯಿತು, ಈಗ ದಾಡಗಿಯಲ್ಲಿ ಬಸವೇಶ್ವರರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ. ಇದನ್ನೆಲ್ಲಾ ನಂಜನಗೂಡು ತಾಲೂಕು ಮಹಾಸಭಾ ಖಂಡಿಸುತ್ತದೆ ಎಂದು ಹೇಳಿದರು.

ಎಲ್ಲಾ ಜಾತಿಗಳನ್ನು ಒಂದುಗೂಡಿಸಿ ಬಸವಣ್ಣನವರು ಲಿಂಗಾಯತ ಧರ್ಮವನ್ನು ಕಟ್ಟಿದರು. ಅವರನ್ನು ಯಾರೂ ವಿರೋಧ ಮಾಡಬಾರದೆಂದು, ಎಂದು ಮಹಾಸಭಾದ ಹಗಿನವಾಳು ಚೆನ್ನಪ್ಪ ಹೇಳಿದರು.

ಸಾಂಸ್ಕೃತಿಕ ನಾಯಕ ಎಂದು ಹೆಸರಿಟ್ಟರೆ ಸಾಲದು, ಬಸವಣ್ಣನವರ ಪ್ರತಿಮೆಯನ್ನು ವಿರೂಪಗೊಳಿಸಿದವರಿಗೆ ಕಠಿಣ ಶಿಕ್ಷೆ ನೀಡಿದರೆ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಜರುಗುವುದಿಲ್ಲವೆಂದು ಶರಣ ಚಿಂತಕ ಹಲ್ಲರೆ ಶಿವಬುದ್ದಿರವರು ಹೇಳಿದರು. ಕಾಟಾಚಾರಕ್ಕೆ ಬಸವಣ್ಣರವರ ಉತ್ಸವವನ್ನು ಮಾಡುವುದಲ್ಲ, ನಿಜವಾಗಿಯೂ ಬಸವಣ್ಣರವರ ತತ್ವದ ವಿಚಾರಗಳನ್ನು ಜಗತ್ತಿಗೆ ಮುಟ್ಟಿಸುವ ಕೆಲಸವನ್ನು ಕರ್ನಾಟಕದ ಎಲ್ಲಾ ಮಠದ ಸ್ವಾಮಿಗಳು ಮತ್ತು ಬಸವಪರ ಅನುಯಾಯಿಗಳು ಸೇರಿ ಮಾಡಬೇಕು, ಎಲ್ಲಾ ಸರ್ಕಾರಿ ಆಫೀಸುಗಳಲ್ಲಿ ಬಸವಣ್ಣನವರ ಫೋಟೋ ಹಾಕಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲರೂ ಸೇರಿ ಮನವಿ ಪತ್ರವನ್ನು ತಹಸೀಲ್ದಾರರ ಪರವಾಗಿ ಬಂದ ಉಪ ತಹಸೀಲ್ದಾರ್ ವಿರುಪಾಕ್ಷಪ್ಪರವರಿಗೆ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವವನ್ನು ಹಲ್ಲರೆ ಮಠಾಧ್ಯಕ್ಷರಾದ ಪೂಜ್ಯಶ್ರೀ ಬಸವಣ್ಣ ಸ್ವಾಮಿಗಳು ವಹಿಸಿದ್ದರು. ಜಿಲ್ಲಾಉಪಾಧ್ಯಕ್ಷರಾದ ಅನುಸೂಯ ಗಣೇಶ, ಕಾಗಲವಾಡಿ ಮಾದಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಅರ್ಜುನ್, ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ಪ ದೇವರು, ಖಜಾಂಚಿಗಳಾದ ಮಂಡಳಿ ನಟರಾಜು, ಉಪಾಧ್ಯಕ್ಷರಾದ ಶಿವಕುಮಾರ್, ಕಾರ್ಯದರ್ಶಿಗಳಾದ ರೇವಣ್ಣ, ನಂಜಮ್ಮಣಿ. ನಿರ್ದೇಶಕರುಗಳಾದ ಬದನವಾಳು ಮಹೇಶ್, ಕುರಿಹುಂಡಿ ಮಂಜುನಾಥ್, ಜಿ ಮರಳ್ಳಿ ಮಂಜುನಾಥ್, ಕೋಮಲ, ನಂದಿನಿ, ಕಡಜಟ್ಟಿ ಮಹೇಶ್, ದುಗ್ಗಳ್ಳಿ ಶಿವನಾಗಪ್ಪ, ಪ್ರಧಾನ ಕಾರ್ಯದರ್ಶಿ ನವೀನ್, ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ, ನಗರ ಘಟಕ ಅಧ್ಯಕ್ಷರಾದ ಮಹೇಶ್, ಮಹದೇವ ಪ್ರಸಾದ್, ಎನ್ ಸಿ ಬಸವಣ್ಣ, ಹೆಚ್. ಎಸ್. ಮಹದೇವಸ್ವಾಮಿ, ಗುರುಸ್ವಾಮಿ, ವಿಶ್ವ ಬಸವಸೇನೆಯ ಬಸವ ಯೋಗೇಶ್, ಹಂಗಳಪುರದ ಸುರೇಶ್, ಕಾಯಕಯೋಗಿ ಬಸವೇಶ್ವರ ಸೇವಾ ಸಂಘದ ಮುದ್ದಳ್ಳಿ ಅಶೋಕ್, ಕೆರೆಹುಂಡಿ ನಂಜುಂಡಸ್ವಾಮಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share This Article
1 Comment
  • ಉತ್ತಮ ಕಾರ್ಯ ಮಾಡಿದ್ದಾರೆ. ಯಾರೇ ಆಗಲಿ ಬಸವಣ್ಣನವರ ವಿಚಾರವಾಗಿ ಅವಮಾನವಾದಾಗ ಎಚ್ಚರಿಸಬೇಕಿದೆ

Leave a Reply

Your email address will not be published. Required fields are marked *