ನಂಜನಗೂಡು
ಪಟ್ಟಣದ ಫ.ಗು.ಹಳಕಟ್ಟಿನಗರದಲ್ಲಿ ನಾಲ್ಕನೇ ವರ್ಷದ ಬಸವ ಮಾಸ ಕಾರ್ಯಕ್ರಮವು ಶನಿವಾರ ಪ್ರಾರಂಭವಾಯಿತು.
ಸಮಿತಿಯ ಅಧ್ಯಕ್ಷರಾದ ಆಯರಳ್ಳಿಯ ಪ್ರಭುಸ್ವಾಮಿ ದಂಪತಿಗಳು, ಬಸವೇಶ್ವರಿ ಮಾತಾಜಿಯವರು ಮತ್ತು ಮೂಡಗೂರು ಮಠದ ಶ್ರೀ ಉಧ್ಧಾನ ಶಿವಯೋಗಿಸ್ವಾಮಿಗಳು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು ಬಸವಣ್ಣನವರ ಜೀವನ ದರ್ಶನ ಎಂಬ ವಿಚಾರವಾಗಿ 30 ದಿನಗಳ ಪ್ರವಚನ ಆರಂಭಿಸಿದರು. ಬಸವಣ್ಣನವರ ಬಾಲ್ಯದ ದಿನದ ವಿಷಯದಿಂದ ಪ್ರಾರಂಭಿಸಿದ ಮಾತಾಜಿಯವರು ಬಸವಣ್ಣನವರ ಹುಟ್ಟಿದ ದಿನದಿಂದಲೇ ದೀನ ದಲಿತರ ಬಾಳಿನ ಕತ್ತಲೆ ಕಳೆದು ಬೆಳಕಾಗಿ ಜಗತ್ತಿಗೆ ಬಂದರೆಂದು ಹೇಳಿದರು.
ಪ್ರವಚನವು ಶ್ರಾವಣದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತವೆ. ಆದರೆ ದಕ್ಷಿಣದ ನಂಜನಗೂಡಿನಲ್ಲಿ ಪ್ರವಚನವು ನಾಲ್ಕು ವರ್ಷಗಳಿಂದ ಈ ತಿಂಗಳಲ್ಲಿ ನಡೆಯುತ್ತಿರುವುದು ಬಹಳ ಸಂತೋಷವೆಂದರು.

ಮೂಡಗೂರು ಶ್ರೀ ಉದ್ದಾನಶಿವಯೋಗಿಗಳು ಬಸವಾದಿಶರಣರ ಚಿಂತನೆಗಳು ಜಗತ್ತಿನ ಸಕಲ ಜೀವಾತ್ಮರ ಬವಣೆಗಳನ್ನ ಕಳೆಯುವ ವಿಶೇಷ ಮಾರ್ಗವಾಗಿವೆ ಎಂದರಲ್ಲದೆ ಎಲ್ಲರೂ ತಮ್ಮ ಮಕ್ಕಳಿಗೆ ವಚನಗಳನ್ನ ಕಲಿಸಬೇಕೆಂದು ಹೇಳಿದರು. ಮೊದಲನೇ ದಿನವೇ ನೂರಾರು ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಟಗರಪುರ ಸುರೇಶ್ ನಿರೂಪಿಸಿದರು. ಚನ್ನವಡೆಯನಪುರ ಚನ್ನಪ್ಪ ಸ್ವಾಗಟಿಸಿದರು. ಪ್ರಾರ್ಥನೆ ವೃಷಭೇಂದ್ರ ಉಡಿಗಾಲ ಅವರಿಂದ ಮತ್ತು ಪ್ರಾಸ್ತಾವಿಕ ನುಡಿ ವಿಶ್ವಬಸವಸೇನೆ ಅಧ್ಯಕ್ಷ ಬಸವ ಯೋಗೇಶ್ ಅವರಿಂದ ನಡೆಯಿತು.


