ಜೀವಜೀವದ ಭಾವಸಂಗಮ ಮಠದಂತೆ ಭಾಸವಾದ ಮಧುಶ್ರೀ ಗಾರ್ಡನ್
ಕೊಪ್ಪಳ:
ಫೆಬ್ರವರಿ 22 ರoದು ಮಧುಶ್ರೀ ಗಾರ್ಡನ್ ಗೆ ಬಂದವರಿಗೆ ತಕ್ಷಣ ಅಲ್ಲಿ ನಿರ್ಮಾಣವಾದ ವಾತಾವರಣವನ್ನು ನೋಡಿದರೆ ಅದು ಮಠದಂತೆ ಭಾಸವಾಗುತ್ತಿತ್ತು. ಅದಕ್ಕೆ ಕಾರಣವೇನೆಂದರೆ ಬಸವತತ್ವ ನಿಷ್ಠರಾದ ಲಿಂಗೈಕ್ಯ ರುದ್ರಪ್ಪ ಬೆಲ್ಲದ ಅವರ ಧರ್ಮಪತ್ನಿ ಲಲಿತಾ
ತಮ್ಮ ಮೂರನೆಯ ಮಗನಾದ ಸೂಗೂರೇಶ ಬೆಲ್ಲದ ಮತ್ತು ವಿಜಯಪುರದ ಜಯಶ್ರೀ ಶಿವಕಾಂತ ಹತ್ತಿಗೌಡರ ಇವರ ಸುಪುತ್ರಿ ವಿದ್ಯಾಶ್ರೀ ಇವರ ಕಲ್ಯಾಣ ಮಹೋತ್ಸವವನ್ನು ಬೆಲ್ಲದ ಕುಟುoಬದ ಹಿರಿಯರೆಲ್ಲರೂ ಅಚ್ಚ ಲಿಂಗಾಯತ ತತ್ವದoತೆ ನಡೆಸಿಕೊಟ್ಟರು.

ಕಲ್ಯಾಣ ಮಂಟಪ ಪ್ರವೇಶಿಸುತ್ತಿದ್ದoತೆಯೇ ಬಸವಣ್ಣನವರಾದಿಯಾಗಿ ಸಪ್ತ ಶರಣರ ದೊಡ್ಡದಾದ ಬ್ಯಾನರ್, ವೇದಿಕೆಯ ಮೇಲೆ ಬಸವಣ್ಣನವರ ಮೂರ್ತಿ, ದಂಪತಿಗಳ ಮೇಲ್ಗಡೆ ಅಭಯಹಸ್ತ ಬಸವಣ್ಣ ಮತ್ತು ಪೂಜ್ಯರಾದ ಲಿಂಗಾನoದ ಸ್ವಾಮೀಜಿ ಮಾತೆಮಹಾದೇವಿಯವರ ಚಿತ್ರಗಳು ಮುಂದೆ ನಡೆಯುವ ಮದುವೆ ಕುರಿತು ಸoದೇಶ ಕೊಟ್ಟಂತಿತ್ತು.
ಪೂಜ್ಯರಾದ ಚನ್ನಬಸವಾನoದ ಮತ್ತು ಬಸವದೇವರು ಅವರಿoದ ಷಟಸ್ಥಲ ದ್ವಜಾರೋಹಣ ನಡೆದು ದoಪತಿಗಳಿಗೆ ಫ್ರತಿಜ್ಞಾವಿಧಿ ಭೋದಿಸಲಾಯಿತಲ್ಲದೆ ನೂತನ ದಂಪತಿಗಳ ಕರ್ತವ್ಯವನ್ನು ತಿಳಿಸಲಾಯಿತು.

ಇದೇ ಸoದರ್ಭದಲ್ಲಿ ಪೂಜ್ಯ ಚನ್ನಬಸವಾನಂದರು ಬಸವದೇವರು ಅವರಿಂದ ಮಾರ್ಚ್ 22ರoದು ಗoಗಾವತಿಯಲ್ಲಿ ನಡೆಯುವ ಮಹಾದಂಡನಾಯಕರ ಸ್ಮರೋಣತ್ಸವದ ಪೋಸ್ಟರನ್ನು ಎನ್. ಚಂದ್ರಮೌಳಿ ಲಿಂಗಾಯತ, ಗಂಗಾವತಿಯ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ದಿಲೀಪಕುಮಾರ ವಂದಾಲ, ಗಂಗಾವತಿ ಬಸವ ಕೇಂದ್ರ ಅಧ್ಯಕ್ಷರಾದ ಕೆ. ಬಸವರಾಜ, ವೀರೇಶಪ್ಪ ಕುಂಬಾರ, ವೀರೇಶ ರಡ್ಡಿ, ಕುಮಾರ ಅoಗಡಿ, ಚನ್ನಬಸಮ್ಮ ಕಂಪ್ಲಿ, ಬಸವಜ್ಯೋತಿ, ಚಿನ್ಮಯ, ಪ್ರಸಾದ, ಕಲಬುರ್ಗಿಯ ಜಗದೇವಿ, ಬೆಳಗಾವಿಯ ಪ್ರಸಾದ, ಬಿಜಾಪುರದ ಬಸವರಾಜ, ಪ್ರಶಾಂತ ಅವರು ಬಿಡುಗಡೆಗೊಳಿಸಿ ವಿವಾಹಕ್ಕೆ ಸಾಕ್ಷಿಯಾದರು.

ರಾಯಚೂರು, ಕಲಬುರ್ಗಿ, ವಿಜಯಪುರ, ಬೆಳಗಾವಿ ಇನ್ನಿತರ ಊರುಗಳ ಮತ್ತು ಸ್ಥಳೀಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬೆಲ್ಲದ ಕುಟುಂಬ ಅಚ್ಚುಕಟ್ಟಾದ ಊಟದ ಜೊತೆಗೆ, ಬಂದವರಿಗೆಲ್ಲ ಜಗನ್ಮಾತೆ ಅಕ್ಕಮಹಾದೇವಿ ಅವರ ವಚನಗಳ ಪುಸ್ತಕವನ್ನು ನೀಡಿದರು.
ಲಿoಗೈಕ್ಯ ರುದ್ರಪ್ಪ ಬೆಲ್ಲದ ಅವರ ಆಸ್ತಿಗೆ ವಾರಸುದಾರರಾದ ಅವರ ಮಕ್ಕಳು, ಸೊಸೆಯಂದಿರು ಅವರ ಆದರ್ಶಗಳಿಗೂ ವಾರಸುದಾರರಾದದ್ದು ವಿಶೇಷವೆನಿಸಿತು.

