ಕಲ್ಯಾಣ ಮಠದ ನಿತ್ಯದ ಪ್ರಸಾದ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಸಾದ ಮಾಡಿದರು
ಇಳಕಲ್ಲ:
ಇಲ್ಲಿನ ಶ್ರೀ ವಿಜಯಮಹಾಂತೇಶ್ವರ ಮಠದಲ್ಲಿ ರವಿವಾರ ಸಂಜೆ ಮುಧೋಳ ತಾಲ್ಲೂಕಿನ ಇಂಗಳಗಿ ಗ್ರಾಮದ ಶರಣ ಗುರುಪಾದ ಅವರ ಜೊತೆಗೆ ಶರಣೆ ಸಂಗೀತಾ ಅವರ ಕಲ್ಯಾಣ ಕಾರ್ಯಕ್ರಮವು ವಚನಾಧಾರಿತವಾಗಿ ಸರಳ ರೀತಿಯಲ್ಲಿ ನಡೆಯಿತು.

ಪೂಜ್ಯ ಗುರುಮಹಾಂತಪ್ಪ ಸ್ವಾಮೀಜಿ ಸಾನಿದ್ಯ ವಹಿಸಿ, ಮಲ್ಲಯ್ಯಾ ಗಣಾಚಾರಿ ಅವರು ನೆತೃತ್ವ ವಹಿಸಿದ್ದರು.
ವಧು ವರರಿಗೆ ಪಾದೋದಕ ಸಿಂಪರಣೆ, ವಿಭೂತಿ, ರುದ್ರಾಕ್ಷಿ ಧಾರಣೆಯ ಮೂಲಕ ಜಮಖಂಡಿ ಬಸವ ಕೆಂದ್ರದ ದೀಪಾ ಹಾಗೂ ರವಿ ಯಡಹಳ್ಳಿ ಮತ್ತು ರಾಜಶ್ರೀ ಹಾಗೂ ಅಣ್ಣಾಸಾಬ ಜಗದೇವ ಶರಣ ದಂಪತಿಗಳು ಕಲ್ಯಾಣ ಕ್ರಿಯೆಗಳ ವಚನಗಳನ್ನು ಹೇಳುವ ಮೂಲಕ ನಡೆಸಿಕೊಟ್ಟರು.

ದಂಪತಿ ಪರಸ್ಪರ ಹಾರ ವಿನಿಮಯ ಮಾಡಿಕೊಂಡರು. ಗುರುಮಹಾಂತ ಸ್ವಾಮೀಜಿ ನೂತನ ದಂಪತಿಗೆ ವಚನ ಪ್ರತಿಜ್ಞೆ ಬೋಧಿಸಿದರು. ನಂತರ ವಚನ ಪುಸ್ತಕ ನೀಡಿದರು. ಸ್ವಾಮೀಜಿ ಸೇರಿದಂತೆ ಎಲ್ಲರೂ ಪುಷ್ಪವೃಷ್ಟಿ ಮಾಡಿ ಶುಭ ಹಾರೈಸಿದರು.
ಶರಣ ಗುರುಪಾದ ಹಾಗೂ ಶರಣೆ ಸಂಗೀತಾ ಅವರ ಮದುವೆಗೆ ಖರ್ಚಾಗಿದ್ದು ಕೇವಲ 250-300 ರೂ. ಮಾತ್ರ ಎಂಬುವುದೆ ವಿಶೇಷ, ಮದುವೆಗೆ ಬಂದ ಎಲ್ಲರಿಗೂ ಚುರುಮುರಿ ಕೊಡುವುದುದರ ಮೂಲಕ ಅತ್ಯಂತ ಸರಳ ಹಾಗೂ ಆರ್ದಶ ಮದುವೆ ಮಾಡಿಕೊಂಡಿದ್ದಾರೆ.

ಗುರುಮಹಾಂತಪ್ಪ ಸ್ವಾಮೀಜಿ ನೂತನ ದಂಪತಿಗೆ ಆರ್ಶೀವದಿಸಿ ಎರಡು ಸಾವಿರ ರೂಪಾಯಿ ಹಾಗೂ ಹಣ್ಣು-ಹಂಪಲವನ್ನು ಕೊಟ್ಟಾಗ, ದಂಪತಿಗಳು ನಾವೇ ತಮಗ ಕಾಣೆಕೆ ಕೊಡಬೇಕಿತ್ತು ಅಪ್ಪಾರ, ಆದರೆ ತಾವೇ ನಮಗೆ ದುಡ್ಡು ಕೊಡತ್ತಿದ್ದೀರಿ ಬೇಡವೆಂದಾಗ, ನಿಮ್ಮಿಬ್ಬರ ಹೊಸ ಜೀವನ ಆರಂಭವಾಗಿದೆ ಈ ದುಡ್ಡು ಸಹಕಾರವಾಗಲಿ. ಮುಂದೆ ತಾವು ಚೊಲೋ ಆದಮೇಲೆ ಬೇಕಾದರೆ ಮಠಕ್ಕೆ ಕಾಣಿಕೆ ಕೊಡುವಿರಂತೆ, ಎಂದು ಸ್ವಾಮೀಜಿ ಆರ್ಶೀವದಿಸಿದರು.
ವಧು-ವರರ ಕಡೆಯ ಪೋಷಕರು ಸೇರಿದಂತೆ ಒಟ್ಟು 10-12 ಜನ ಮಾತ್ರ ಸೇರಿ ಅತ್ಯಂತ ಸರಳ ರೀತಿಯಲ್ಲಿ ಕಲ್ಯಾಣ ಕಾರ್ಯ ನೆರವೇರಿತು. ನಿತ್ಯದ ಮಠದ ಪ್ರಸಾದ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಸಾದ ಮಾಡಿದರು.

ಮದುವೆ ಸಂಪತ್ತಿನ ಪ್ರದರ್ಶನ ಸ್ಥಳವಾಗಕೂಡದು ಮದುವೆಗಳು ಸರಳವಾಗಿ ಅರ್ಥಪೂರ್ಣವಾಗಿರಬೇಕು , ಇದು ಮಾದರಿ , ೨೫೦೦ ವರ್ಷಗಳ ಹಿಂದೆಯೇ ಅಶೋಕ ಮಹಾರಾಜ ತನ್ನ ಶಾಸನದಲ್ಲಿ ಮದುವೆ, ಹಬ್ಬಗಳಲ್ಲಿ ಅನವಶ್ಯಕ ಖರ್ಚು ಮಾಡಬಾರದು ಸರಳವಾಗಿ ಮಾಡಬೇಕು ಎಂದು ಶಾಸನ ಬರೆಸಿದ್ದು ಕರ್ನಾಟಕದಲ್ಲಿಯೇ ಸಿಕ್ಕಿದೆ.
ಇಂದಿಗೂ ಲಕ್ಷಾಂತರ ಕುಟುಂಬಗಳು ಮದುವೆಗಾಗಿ ಲಕ್ಷಾಂತರ ಸಾಲ ಮಾಡುವುದು ದುರಂತ.
ವಚನ ಸಾಹಿತ್ಯದಂತೆ ಸರಳ ಸಮಾರಂಭ ನಡೆಸುವುದು ಕಷ್ಟ ಅನಿಸಬಹುದು ಆದರೂ
ಈ ರೀತಿ ಮದುವೆಗಳು ಸರಳವಾಗಿರಲಿ, ನಮಗೆಲ್ಲ ಇದು ಮಾದರಿ.