ಧಾರವಾಡ:
ಬಸವಪರ ಸಂಘಟನೆಯ ವಿದ್ಯಾ ಹಾಗೂ ಕಿರಣ್ ಸರನಾಡಗೌಡ್ರ ಗ್ರಾಮೀಣ ಮನೆ ತಿನಿಸುಗಳ ಮಳಿಗೆ “ಮಹಾಮನೆ ತಿನಿಸುಮನೆ” ಲಿಂಗಾಯತ ಧರ್ಮದ ನಿಜಾಚರಣೆಯೊಂದಿಗೆ ಈಚೆಗೆ ಸಡಗರದಿಂದ ಆರಂಭಗೊಂಡಿತು.
ಇಷ್ಟಲಿಂಗ ಪೂಜೆ, ಬಸವಗುರು ಪೂಜೆ- ಪ್ರಾರ್ಥನೆಯೊಂದಿಗೆ, ಬಸವ ಕೇಂದ್ರದ ಹಿರಿಯರಾದ, ಪ್ರಭಣ್ಣ ನಡಕಟ್ಟಿ, ಬಸವಂತಪ್ಪ ತೋಟದ, ಅನೀಲ ಅಂಗಡಿ, ಬಿ. ಬಿ. ಚಕ್ರಸಾಲಿ ಅವರ ನೇತೃತ್ವದಲ್ಲಿ ವಚನ ಪಠಣ, ವಚನ ಗಾಯನ ನಡೆಯಿತು.
ಸರ್ವ ಬಸವಾದಿ ಶರಣರನ್ನು ನೆನೆಯುವ ಮುಖೇನ ಮಳಿಗೆಯ ಉದ್ಘಾಟನೆಯನ್ನು ಮಾಡಲಾಯಿತು.

ಹಿರಿಯ ಸಾಹಿತಿ ಶೇಖರಗೌಡ ನಾಡಗೌಡರ, ಬಸವಜ್ಯೋತಿ ಪ್ರತಿಷ್ಠಾನದ ರಾಜೇಶ್ವರಿ ಕಟ್ಟೀಮನಿ, ಜಾಗತಿಕ ಲಿಂಗಾಯತ ಮಹಾಸಭಾ ಯುವ ಘಟಕದ ಅಧ್ಯಕ್ಷ ಸಿ.ಜಿ. ಪಾಟೀಲ, ಹೈಕೋರ್ಟ್ ನ್ಯಾಯವಾದಿಗಳಾದ ಸಿ.ಎಸ್. ಕೋರಿಶೆಟ್ಟರ್, ನಂದೀಶ ಪಾಟೀಲ ಮತ್ತು ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಧಾರವಾಡದ ಸುತ್ತಮುತ್ತಲಿನ ರೈತರಿಗೆ, ಗೃಹ ಉತ್ಪಾದನೆಯ ರೈತ ಮಹಿಳೆಯರಿಗೆ, ರೈತ ಉತ್ಪಾದಕ ಕಂಪನಿಗಳಿಗೆ, ಸ್ವಸಹಾಯ ಗುಂಪುಗಳಿಗೆ ಅವರ ಉತ್ಪಾದನೆಗಳು ಈ ಮಳಿಗೆಯ ಮೂಲಕ ಗ್ರಾಹಕರನ್ನು ನೇರವಾಗಿ ಮುಟ್ಟಲು ಅನುಕೂಲ ಆಗಲಿದೆ ಎಂದು ಕಿರಣ್ ಅವರು ಹೇಳಿದರು.

ಭಾರತೀಯ ಸಾಂಪ್ರದಾಯಿಕ ತಳಿಗಳ ದೇಸಿ ತುಪ್ಪ. ವಿವಿಧ ಪುಷ್ಪಗಳ ಜೇನುತುಪ್ಪ, ಸಂಡಿಗೆ, ಹಪ್ಪಳ, ಉಪ್ಪಿನಕಾಯಿ, ಕುರುಕು ತಿಂಡಿಗಳು, ಮಸಾಲೆ ಪದಾರ್ಥ, ಚಟ್ನಿಪುಡಿ, ಸಿಹಿತಿಂಡಿ, Cold-Wood Pressed ಎಣ್ಣೆ, ಸಿರಿಧಾನ್ಯಗಳು ಮತ್ತು ಸಿರಿಧಾನ್ಯ ಉತ್ಪನ್ನಗಳಾದ ನೂಡಲ್ಸ್, ಪಾಸ್ತಾಗಳು, ಬಿಸ್ಕೆಟ್ಗಗಳು, Ready to Eat mixಗಳು, Dry Fruits, ಸಾವಯವ ಬೆಲ್ಲ, ವಿವಿಧ ಸಾಂಪ್ರದಾಯಿಕ ಅಕ್ಕಿ, ಬೇಳೆ ಕಾಳುಳನ್ನು ನೇರವಾಗಿ ಈ ಮಳಿಗೆಯಿಂದ ಗ್ರಾಹಕರು ಪಡೆಯಬಹುದಾಗಿದೆ.
ಮಾಹಿತಿಗಾಗಿ ಸಂಪರ್ಕಿಸಿ ವಿದ್ಯಾ ಕಿರಣ 7204970949

👏😍💐
ವಿಳಾಸ ಆಸಕ್ತರಿಗೆ ಉಪಯುಕ್ತ.