ಬೆಳಗಾವಿ
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಅವರ ಧರ್ಮಪತ್ನಿ ನಿರ್ಮಲಾ ಜಾಮದಾರ ಅವರ ಅಂತ್ಯ ಸಂಸ್ಕಾರವು ಲಿಂಗಾಯತ ಧರ್ಮ, ವಚನ ವಿಧಿ ವಿಧಾನಗಳಂತೆ ಬೆಳಗಾವಿಯಲ್ಲಿಂದು ಮಧ್ಯಾಹ್ನ 1-30ಕ್ಕೆ ಸದಾಶಿವ ನಗರದ ರುದ್ರಭೂಮಿಯಲ್ಲಿ ನೆರವೇರಿತು.

ಅನುಭಾವಿ, ಶರಣರಾದ ಅಶೋಕ ಬರಗುಂಡಿ, ಬಸವಂತಪ್ಪ ತೋಟದ, ಮಹಾಂತೇಶ ತೋರಣಗಟ್ಟಿ ವಚನ ಕ್ರಿಯಾಮೂರ್ತಿಗಳಾಗಿ ಸಂಸ್ಕಾರ ಕಾರ್ಯಗಳನ್ನು ನಡೆಸಿಕೊಟ್ಟರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಂ.ಬಿ. ಪಾಟೀಲ, ಎಚ್. ಕೆ. ಪಾಟೀಲ, ಶಾಸಕರಾದ ಬಿ. ಆರ್. ಪಾಟೀಲ, ಆಸೀಫ್ ಸೇಠ್, ಪೂಜ್ಯರಾದ ಇಳಕಲ್ಲ ಗುರುಮಹಾಂತ ಶ್ರೀ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀ, ಶಿರೂರು ಬಸವಲಿಂಗ ಮಹಾಂತ ಶ್ರೀ, ಹುಣಸಿಕೊಳ್ಳ ಸಿದ್ಧಬಸವ ದೇವರು, ಮತ್ತಿತರ ಪೂಜ್ಯರು, ರೋಹಿಣಿ ಬಿ. ಪಾಟೀಲ, ಬಸವರಾಜ ರೊಟ್ಟಿ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾದ ಅನೇಕ ಜಿಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಲಿಂಗಾಯತ, ಬಸವಪರ ಸಂಘಟನೆಗಳ ಮುಖಂಡರು, ಸದಸ್ಯರು, ಜಾಮದಾರ ಬಂಧು-ಮಿತ್ರರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Let the noble soul of Smt. Jamadar, rest in peace. May Lord Basava give all the strength to bear this unbearable loss to all the family members, including Shri. Jamadar Sir. Her worldly departure on this auspicious occasion of Basava Jayanti, is itself a manifestation of the fact that she has lived a life of
Sharanas. My salutations to the departed soul.