ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಘಟಕದ ಖಜಾಂಚಿ ಶರಣ ದಂಪತಿಗಳಾದ ಹೇಮಾರೇಣುಕಯ್ಯನವರ ದ್ವಿತೀಯ ಪುತ್ರಿ ದಿವ್ಯ ಮತ್ತು ವರ ಶ್ರೇಯಸ್ ಇವರ ಕಲ್ಯಾಣ ಮಹೋತ್ಸವ ಕಾರ್ಯಕ್ರಮವು ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಯವರ
ಸಮ್ಮುಖದಲ್ಲಿ ಇತ್ತೀಚೆಗೆ ನಡೆಯಿತು.
ಶರಣ ಪಿ ರುದ್ರಪ್ಪ, ಸಿಂಧನೂರು, ಶರಣೆ ಭಾರತಿ ಎಂ ಕೆಂಪಯ್ಯರವರು, ಶರಣ ಶಿವಾನಂದ ಅರಭಾವಿ, ಶರಣ ಮಡಿವಾಳಪ್ಪ ಸಂಗೊಳ್ಳಿ, ಬೈಲಹೊಂಗಲ, ಡಾ. ದಯಾನಂದ ಇ ನೂಲಿರವರು, ಚಿಕ್ಕೋಡಿ, ಮತ್ತು ಶರಣ ಮಂಜುನಾಥ ಮಡಿವಾಳ್ ನೇಗಿನಾಳ್ ರವರ ವಚನ ಗಾಯನದೊಂದಿಗೆ ಲಿಂಗಾಯತ ಧರ್ಮದ ಅಡಿಯಲ್ಲಿ ವಚನ ಮಾಂಗಲ್ಯದ ಮೂಲಕ ಕಲ್ಯಾಣ ಮಹೋತ್ಸವ ತುಂಬಾ ಅರ್ಥಪೂರ್ಣವಾಗಿ ನಡೆಯಿತು.
TAGGED:ನಿಜಾಚರಣೆ
ಬಸವ ತತ್ವದಲ್ಲಿ ನಡೆದ ವಿವಾಹ ಮಹೋತ್ಸವ ಕಾರ್ಯಕ್ರಮ ಮುಂದಿನ ಪೀಳಿಗೆಗೆ ಹೆದ್ದಾರಿ. ಅಪ್ಪ ಬಸವಣ್ಣನವರು ತಮಗೂ ತಮ್ಮ ಕುಟುಂಬದವರಿಗೂ ಇನ್ನೂ ಹೆಚ್ಚಿನ ಶಕ್ತಿ ಕೊಟ್ಟು ಬಸವಾದಿ ಶರಣರ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ನಮ್ಮೆಲ್ಲರಿಗೂ ನೀವು ಮಾರ್ಗದರ್ಶಕರಾಗಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ. ಇಂತಹ ಕಾರ್ಯಕ್ರಮಗಳು ಇನ್ನು ಹೆಚ್ಚೆಚ್ಚು ನಡೆದು ಮುಂದಿನ ಪೀಳಿಗೆಗೆ ಬೆಳಕಾಗಲೆಂದು ಮತ್ತೊಮ್ಮೆ ಭಕ್ತಿಯ ಶರಣು ಶರಣಾರ್ಥಿಗಳು