ಗೊಡ್ಡು ಬೆದರಿಕೆಗಳಿಗೆ ಅಂಜದೆ ಮುಂದೆ ಸಾಗೋಣ
ಬೀದರ್
ಈ ದೇಶದ ಶ್ರೇಷ್ಠ ಪ್ರಗತಿಪರ ಚಿಂತಕರಾದ ನಿಜಗುಣಾನಂದ ಸ್ವಾಮೀಜಿಯವರು ಇಂದಿನಿಂದ ನಗರದಲ್ಲಿ “ಭವ್ಯ ಭಾರತದ ಬಸವಣ್ಣ” ಪ್ರವಚನ ಮಾಡಲಿದ್ದಾರೆ.
ಪರಮ ಪೂಜ್ಯರು ಸಮಾಜದಲ್ಲಿ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ನಿರಂತರವಾಗಿ ಬಸವ ತತ್ವವನ್ನು ನಾಡಿನಲ್ಲಿ ಬಿತ್ತುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಈ ಪ್ರವಚನವನ್ನು ನಿಷೇಧಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿರುವುದು ಈ ಸಮಾಜದ ಬಹು ದೊಡ್ಡ ದುರಂತವೇ ಎನ್ನಬಹುದು.
ಕೆಲವರಿಗೆ ಸತ್ಯ ವಿಚಾರಗಳು ಬೇಕಾಗಿಲ್ಲ. ಸತ್ಯ ತಿಳಿದುಕೊಳ್ಳುವ ದಾರಿಯಲ್ಲಿಯೂ ಅವರು ಹೋಗುವುದಿಲ್ಲ. ನಾವೆಲ್ಲರೂ ಅವರ ಗುಲಾಮರಾಗಿ ಬದುಕಬೇಕೆಂಬುವುದೇ ಅವರಿಗೆ ಬೇಕಾಗಿರುವುದು.
ಇಂತಹ ಗೊಡ್ಡು ಬೆದರಿಕೆಗಳಿಗೆ ಅಂಜದೆ, ಎದೆಗುಂದದೆ ನಾವೆಲ್ಲರೂ ಮುಂದೆ ಸಾಗೋಣ. ಸತ್ಯಕ್ಕೆ ಯಾವಾಗಲೂ ಜಯವಾಗಲಿದೆ.
ಈ ನಿಟ್ಟಿನಲ್ಲಿ ಬಸವ ಕೇಂದ್ರ ಹಾಗೂ ವಿವಿಧ ಬಸವ ಸಂಘಟನೆಗಳು, ಒಗ್ಗಟ್ಟಾಗಿ ಸ್ವಾಮೀಜಿಯ ಪ್ರವಚನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಎಲ್ಲಿಲ್ಲದ ಸಂತೋಷ ತಂದಿದೆ.
ಇದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಪರವಾಗಿಲ್ಲ ಅವರ ಕೆಲಸ ಅವರು ಮಾಡಲಿ,ನಮ್ಮ ಕೆಲಸ ನಾವು ಮಾಡೋಣ.
ಪ್ರವಚನ ಯಶಸ್ಸಿಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಈ ನಾಡಿನ ಬಸವ ಭಕ್ತರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ. ಮತ್ತು ನಿಮ್ಮ ಜೊತೆಗೆ ನಾವು ಸದಾ ಕಾಲ ನಿಲ್ಲುತ್ತೇವೆ.




ಬಸವ ಪ್ರವಾಹ ನಿಜಗುಣ ನಿತ್ಯ ಶರಣ ನಿಜಗುಣಾನಂದರ ತತ್ವ ನಿಷ್ಠೆಗೆ ಕೋಟಿ ಕೋಟಿ ನಮಸ್ಕಾರ ಜಯ ಬಸವ 🙏🏻ಶರಣು ಶರಣು 👏🏻
ಜನ ಬಸವಣ್ಣನವರ ಹತ್ತಿರನೇ ಇರಬೇಕು ಕ್ರಿಸ್ಟಿಯನ್,ಮುಸ್ಲಿಂ ಧರ್ಮಕೆ ಹೋಗಬಾರದು take care